ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ಸುಳಿಯಲ್ಲಿ ನ್ಯೂಯಾರ್ಕಿನ ರಾಣಿ

By Staff
|
Google Oneindia Kannada News

Is The NY Times shutting Print?
ಕನ್ನಡ ಪತ್ರಿಕೆಗಳು ಬಿಡಿ.ಸಾಲಸೋಲದ ಸುಳಿಗೆ ದಿನ, ವಾರ, ಮಾಸ ಪತ್ರಿಕೆಗಳು ಸಿಲುಕಿ ನರಳುವುದು ಸುದ್ದಿಯಲ್ಲ. ಆರ್ಥಿಕ ಹಿಂದೇಟಿಗೆ ಗುರಿಯಾಗಿರುವ ಅಮೆರಿಕಾದ ಒಂದು ವಿಖ್ಯಾತ ಪತ್ರಿಕೆ ಋಣ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಹವಣಿಸುತ್ತಿದೆ ಎಂದರೆ ನಿಮಗೆ ಅರ್ಥವಾಗುತ್ತದೆ !

ಅಮೆರಿಕ, ಜ. 8 : ಅಮೆರಿಕದ ಅತ್ಯಂತ ಹಳೆಯ ಹಾಗೂ ವಿಶ್ವಾಸಾರ್ಹ ನ್ಯೂ ಯಾರ್ಕ್ ಟೈಂಸ್ ಪತ್ರಿಕೆಯ ಮುದ್ರಣ ಅವತಾರವು ಅವಸಾನದ ಹಾದಿಯಲ್ಲಿ ತೆವಳುತ್ತಿದೆಯೇ? ತೀರಿಸಲಾಗದ ಸಾಲಶೋಲದಲ್ಲಿ ಮುಳುಗಿರುವ ಪತ್ರಿಕೆಯು ಮುದ್ರಣ ಅಂಗವನ್ನು ಮುಚ್ಚಿ ತನ್ನ ಕಾರ್ಯಕ್ಷೇತ್ರವನ್ನು ಆನ್ ಲೈನ್ ಪತ್ರಿಕೋದ್ಯಮಕ್ಕೆ ಮಾತ್ರ ಸೀಮಿತಗೊಳಿಸಲು ಹವಣಿಸುತ್ತಿದೆಯೇ ?

ಅಂಥದೇನೂ ಆಗುವುದಿಲ್ಲ ಎಂದು ಭಾವಿಸುತ್ತ ಕುಳಿತಿರುವಾಗ ಆಗಬಾರದ್ದೆಲ್ಲ ಆಗುತ್ತಿರುವ ಈ ಕಾಲಘಟ್ಟದಲ್ಲಿ ಇಂಥದೊಂದು ಅವಲೋಕನ ತೀರ ಪ್ರಸ್ತುತವಾಗುತ್ತದೆ.

ಬ್ಯಾಂಕುಗಳು, ಬಂಡವಾಳ ಹೂಡಿಕೆ ಕಂಪನಿಗಳು, ಡಾಟ್ ಕಾಮ್ ಗಳು ದಢಾರನೆ ಬಾಗಿಲು ಮುಚ್ಚಿಕೊಳ್ಳುತ್ತಿರುವ ಅವಕಾಶಗಳ ಅಮರಾವತಿ ಅಮೆರಿಕಾದಲ್ಲಿ ಏನೆಲ್ಲ ಊಹೆಗಳು ಒಂದೊಂದಾಗಿ ಸತ್ಯಸ್ಯ ಸತ್ಯವಾಗುತ್ತಿರುವುದನ್ನು ಜಾಗತಿಕ ಪ್ರಜೆ ನಿತ್ಯ ಗಮನಿಸುತ್ತಿದ್ದಾನೆ. ಈ ದಾರಿಗುಂಟ ಹೊರಟಾಗ ನಷ್ಟದ ಭಾರದಲ್ಲಿ ದಿನೇ ದಿನೇ ಸೊರಗುತ್ತಿರುವ ನ್ಯೂಯಾರ್ಕ್ ಟೈಂಸ್ ಪತ್ರಿಕೆ ಕಣ್ಣುಂದೆ ಬಂದು ನಿಲ್ಲುತ್ತದೆ.

ದ್ವೈಮಾಸಿಕ ವೆಬ್ ಪತ್ರಿಕೆ ದಿ ಅಟ್ಲಾಂಟಿಕ್ ಪ್ರಕಟಿಸಿರುವ ಒಂದು ಸುದ್ದಿ ವಿವೇಚನೆಯ ಪ್ರಕಾರ ನ್ಯೂಯಾರ್ಕ್ ಟೈಂಸ್ ಪತ್ರಿಕೆಯ ಋಣಭಾರ, ಸಾಲಬಾಧೆ ದಿನೇದಿನೇ ಉಲ್ಭಣಿಸುತ್ತಿದೆ. ಬರಲಿರುವ ಇನ್ನೈದು ತಿಂಗಳ ಅವಧಿಯಲ್ಲಿ ಪತ್ರಿಕೆಯು ತನ್ನ ಮುದ್ರಣ ವಿಭಾಗವನ್ನು ಮುಚ್ಚುವ ಸಾಧ್ಯತೆ ಢಾಳವಾಗಿ ಗೋಚರಿಸುತ್ತಿದೆ. ಅದರ ಆಯಸ್ಸು ಅಬ್ಬಬ್ಬಾ ಎಂದರೆ ಇನ್ನೈದು ತಿಂಗಳು ಮಾತ್ರ [...]

(ದಟ್ಸ್ ಕನ್ನಡ ಸುದ್ದಿಮನೆ)

ಜಿಂಬಾಬ್ವೆಯ ಶೌಚಾರ್ಥಶಾಸ್ತ್ರ!</a><a href=ಇನ್ನೂ 20 ಉಗ್ರರಿದ್ದಾರೆ ಎಚ್ಚರಿಕೆ!:ನ್ಯೂಯಾರ್ಕ್ ಟೈಮ್ಸ್" title="ಜಿಂಬಾಬ್ವೆಯ ಶೌಚಾರ್ಥಶಾಸ್ತ್ರ!ಇನ್ನೂ 20 ಉಗ್ರರಿದ್ದಾರೆ ಎಚ್ಚರಿಕೆ!:ನ್ಯೂಯಾರ್ಕ್ ಟೈಮ್ಸ್" />ಜಿಂಬಾಬ್ವೆಯ ಶೌಚಾರ್ಥಶಾಸ್ತ್ರ!ಇನ್ನೂ 20 ಉಗ್ರರಿದ್ದಾರೆ ಎಚ್ಚರಿಕೆ!:ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X