ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಫ್ ಕನ್ನಡಿಗರ ಹಿಯಾಳಿಸಿದ ಮುಖ್ಯಮಂತ್ರಿ ಚಂದ್ರು

By Staff
|
Google Oneindia Kannada News

Why did you leave Karnataka? : Mukhyamantri Chandru
ಕತಾರ್ ಕರ್ನಾಟಕ ಸಂಘ ಏರ್ಪಡಿಸಿದ್ದ 5ನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು ಅವರು "ನೀವು ಕರ್ನಾಟಕ ಬಿಟ್ಟು ಹೋದದ್ದೇಕೆ? ನಿಮ್ಮನ್ನು ಹೋಗಲು ಹೇಳಿದವರಾರು?" ಎಂದು ಪ್ರಶ್ನಿಸಿ ಅನಿವಾಸಿ ಕನ್ನಡಿಗರನ್ನು ಹೀಯಾಳಿಸಿದ ಘಟನೆ ಜರುಗಿದೆ.

"ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕರ್ನಾಟಕಕ್ಕೆ, ಕನ್ನಡಿಗರಿಗೆ ಸಾವಿರಾರು ಕೋಟಿ ರು. ಹಣವನ್ನು ತಲುಪಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ. ಅನಿವಾಸಿಗಳ ಅಭ್ಯುದಯ ನಮ್ಮ ಅಭ್ಯುದಯ ಅಂದುಕೊಂಡು ರಾಜ್ಯ ಸರ್ಕಾರ 100 ಕೋಟಿ ರು. ಹಣವನ್ನು ಅನಿವಾಸಿ ಕನ್ನಡಿಗರಿಗೆ ನೀಡಿದರೆ, ಅನಿವಾಸಿಗಳ ಕೊಡುಗೆಯೂ ಇನ್ನೂ ಹೆಚ್ಚುತ್ತದೆ" ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಚಂದ್ರು ಹೇಳಿಕೆಯಿಂದ ಸೇರಿದ್ದ ಪ್ರೇಕ್ಷಕರು ಮತ್ತು ಸಂಘಟಕರು ಬೇಸರ ವ್ಯಕ್ತಪಡಿಸಿದ್ದಾರೆ. ನಂತರ ಸಮಾರೋಪ ಸಮಾರಂಭದಲ್ಲಿ ಚಂದ್ರು ಭಾಷಣ ಮಾಡುತ್ತ, ಅನಿವಾಸಿಗಳ ಅಹವಾಲನ್ನು ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿ ಬೇಸರದ ಭಾವವನ್ನು ಸ್ವಲ್ಪ ಕಡಿಮೆ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಈ ಸಮ್ಮೇಳನವನ್ನು ಪ್ರಾಯೋಜಿಸಿತ್ತು.

ಸಮ್ಮೇಳನದ ಅಂಗವಾಗಿ ಎರಡನೇ ದಿನ 'ಅನಿವಾಸಿ ಕನ್ನಡಿಗರು/ವಿದೇಶದಲ್ಲಿ ಕನ್ನಡಿಗರು' ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ವಿ.ಟಿ. ಶ್ರೀನಿವಾಸ್, ನಿಕಟಪೂರ್ವ ಅಧ್ಯಕ್ಷರು ಸಿಂಗಾಪುರ ಕನ್ನಡ ಸಂಘ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಚರ್ಚೆಯಲ್ಲಿ ಅನಿವಾಸಿ ಕನ್ನಡಿಗರಾದ (ಎನ್.ಆರ್.ಕ) ಕುಮಾರ್ ಕುಂಟಿಕಾನ ಮಠ, ಇಂಗ್ಲೆಂಡ್, ವೀರೇಂದ್ರ ಬಾಬು, ದುಬೈ, ರಮೇಶ್ ಮಂಜೇಶ್ವರ, ಬಹ್ರೈನ್, ಐಯರಾಜ್, ಮಸ್ಕತ್, ಪಿ.ಎಸ್. ಪೈ, ಕತಾರ್ ರವರು ಭಾಗವಸಿದ್ದರು.

ಚರ್ಚೆಯಲ್ಲಿ ಭಾಗವಸಿದ್ದ ಕನ್ನಡಿಗರು ತಮ್ಮ ಕುಂದುಕೊರತೆಗಳನ್ನು ಎಲ್ಲರಿಗೂ ಮನಮುಟ್ಟುವ ರೀತಿಯಲ್ಲಿ ಹೇಳಿದರು. ಸುಮಾರು 20 ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಸಾವಿರಾರು ಕೋಟಿ ಹಣವನ್ನು ಹಲವಾರು ವಿಧದಲ್ಲಿ ಪ್ರಪಂಚದ ಹಲವಾರು ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ತಲುಪಿಸಿದ್ದಾರೆ. ಆದರೆ ಕರ್ನಾಟಕ ಸರಕಾರ ಅನಿವಾಸಿ ಕನ್ನಡಿಗರು ತಮ್ಮ ರಾಜ್ಯದ ಆಸ್ತಿ ಅವರ ಅಭ್ಯುದಯ ನಮ್ಮ ಅಭ್ಯುದಯ ಎಂದು ಅರಿತು ಸುಮಾರು 100 ಕೋಟಿ ಹಣವನ್ನು ಅನಿವಾಸಿ ಕನ್ನಡಿಗರ ನೆರವಿಗೆ ನೀಡಿದಲ್ಲಿ ಮತ್ತೆ ಅನಿವಾಸಿ ಕನ್ನಡಿಗರ ಕೊಡುಗೆ ಹೆಚ್ಚಾಗುತ್ತದೆ, ಯಡಿಯೂರಪ್ಪನವರು ಹೇಳಿದಂತೆ ಕರ್ನಾಟಕ ಮುಂದುವರಿಯುತ್ತದೆ ಎಂಬ ಕಿವಿಮಾತು ಇಂಗ್ಲೆಂಡಿನಿಂದ ಆಗಮಿಸಿದ್ದ ಕುಂಟಿಕಾನಮಠ ಕುಮಾರ್‍ರವರು ಹೇಳಿದರು.

ಆಗ ಖ್ಯಾತ ಸಾಹಿತಿ ವಿಧಾನ ಪರಿಷತ್ ಸದಸ್ಯ, ಡಾ. ಚಂದ್ರಶೇಖ‍ರ್ ಕಂಬಾರ್ ಸ್ಪಂದಿಸುತ್ತಾ, ಒಳ್ಳೆಯ ಗಹನವಾದ ವಿಚಾರ. ನೀವು ಬರವಣಿಗೆಯಲ್ಲಿ ಕೊಡಿ ಎಂದರು.

ಗಲ್ಫ್ ಕನ್ನಡಿಗ : ಗಲ್ಫ್ ನಲ್ಲೊಂದು ಕರ್ನಾಟಕದ ಪ್ರತಿಬಿಂಬ

ಪೂರಕ ಓದಿಗೆ

ಮುಖ್ಯಮಂತ್ರಿ ಚಂದ್ರುಗೆ ಶಿಕಾಗೋದಲ್ಲಿಯೂ ನಿರಾಶೆ
ಲಂಡನ್ ಕನ್ನಡ ಹೋಳಿಗೆಗೆ ತೊಟ್ಟು ನಿಂಬೆರಸ!
ಮೈಮ್ ಚಂದ್ರು ಮುಖ್ಯಮಂತ್ರಿ ಚಂದ್ರು ಆಗಿದ್ದು ಹೇಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X