ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಸಿಫಿಕ್ ಸಾಗರದಂಚಿನಲ್ಲಿ ಕನ್ನಡ,ಕನ್ನಡ

By Staff
|
Google Oneindia Kannada News

Sahithya gOshti CA, 7th annivarsary invite
ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯ ಗೋಷ್ಠಿ ತನ್ನ ಏಳನೆಯ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಸಜ್ಜಾಗಿದೆ. ಕಳೆದ ಏಳು ವರ್ಷಗಳಿಂದ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಸಾಹಿತ್ಯಾಸಕ್ತರಿಗೆ ಪ್ರತಿ ತಿಂಗಳೂ ಅರ್ಥಪೂರ್ಣ ಕನ್ನಡ ಸಾಹಿತ್ಯಿಕ ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ, ಅಲ್ಲಿ ಕನ್ನಡ ಸಾಹಿತ್ಯದ ಲವಲವಿಕೆಯನ್ನು ಕಾಪಾಡಿದೆ.

ಇದು ಸಾಹಿತ್ಯ ಗೋಷ್ಠಿಯ 77ನೆಯ ಕಾರ್ಯಕ್ರಮ. ಇದರಲ್ಲಿ ಹಳೆಗನ್ನಡ ಮತ್ತು ಹೊಸಗನ್ನಡದ ಸುಮಧುರ ಮಿಲನವನ್ನು ಕಾಣಬಹುದಾಗಿದೆ: ಕನ್ನಡದ ಪ್ರಥಮ ಗದ್ಯ ಗ್ರಂಥ 'ವಡ್ಡಾರಾಧನೆ". ಇದನ್ನು 10ನೆಯ ಶತಮಾನದಲ್ಲಿ ರಚಿಸಿದವರು ಶಿವಕೋಟ್ಯಾಚಾರ್ಯ. ಇದರಲ್ಲಿನ ಕಥೆಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಲು ಸಿದ್ಧರಾಗಿದ್ದಾರೆ ವಿಜಯ ಕಣೇಕಲ್ ಅವರು.

ಈ ವರ್ಷವಷ್ಟೇ ಬಿಡುಗಡೆಯಾದ ಕನ್ನಡದ ಮಹತ್ವದ ಕಾದಂಬರಿ ವಿವೇಕ ಶಾನಭಾಗರ 'ಒಂದು ಬದಿ ಕಡಲು". ಈ ಕೃತಿ ಕರ್ನಾಟಕದಲ್ಲಿ ಈಗಾಗಲೇ ಬಹಳವಾಗಿ ಚರ್ಚಿಸಲ್ಪಟ್ಟಿದೆ. ಈ ಕಾದಂಬರಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ವಿಶ್ವನಾಥ್ ಹುಲಿಕಲ್. ಸಾಹಿತ್ಯ ಗೋಷ್ಠಿ ತಮಗೆಲ್ಲರಿಗೂ ತನ್ನ ಏಳನೆಯ ವರ್ಷದ ಹುಟ್ಟು ಹಬ್ಬಕ್ಕೆ ಆತ್ಮೀಯ ಸ್ವಾಗತವನ್ನು ಕೋರುತ್ತಿದೆ.

ಕಾರ್ಯಕ್ರಮದ ವಿವರಗಳು ಇಂತಿವೆ:

ಡಿಸೆಂಬರ್ 13, 2008 (ಶನಿವಾರ)
ಮಧ್ಯಾಹ್ನ 1:00 ರಿಂದ 5:30 ರವರೆಗೆ
ಸಾರಟೋಗ ವಾಚನಾಲಯದ ಸಾರ್ವಜನಿಕ ಸಭಾಂಗಣ
13650 ಸಾರಟೋಗ ಅವೆನ್ಯು
ಸಾರಟೋಗ ಕ್ಯಾಲಿಫೋರ್ನಿಯ 95070

ಪ್ರಾರ್ಥನೆ: ಅನ್ನಪೂರ್ಣ ವಿಶ್ವನಾಥ್
ಉಪನ್ಯಾಸ 1: 'ವಡ್ಡಾರಾಧನೆ" ವಿಜಯ ಕಣೇಕಲ್
ಉಪನ್ಯಾಸ 2: ವಿವೇಕ ಶಾನಭಾಗರ 'ಒಂದು ಬದಿ ಕಡಲು" - ವಿಶ್ವನಾಥ್ ಹುಲಿಕಲ್
ವಾರ್ಷಿಕ ವರದಿ: ವಿಶ್ವನಾಥ್ ಹುಲಿಕಲ್
ಕಾರ್ಯಕ್ರಮ ನಿರ್ವಹಣೆ: ಮಧೂಕಾಂತ್ ಕೃಷ್ಣಮೂರ್ತಿ

ತಮಗೆಲ್ಲರಿಗೂ ಸಾಹಿತ್ಯ ಗೋಷ್ಠಿಯ ಏಳನೆಯ ವಾರ್ಷಿಕೋತ್ಸವಕ್ಕೆ ಮತ್ತೊಮ್ಮೆ ಸ್ವಾಗತವನ್ನು ಬಯಸುತ್ತಿದ್ದೇವೆ. ದಯವಿಟ್ಟು ಅಧಿಕ ಸಂಖ್ಯೆಯಲ್ಲಿ ಆಗಮಿಸಿ, ಈ ಸಂಭ್ರಮದಲ್ಲಿ ಪಾಲ್ಗೊಳ್ಳಿರಿ. ಸಾಹಿತ್ಯ ಗೋಷ್ಠಿಯು ಈ ವರ್ಷದಲ್ಲಿ ಆಯೋಜಿಸಿದ ಕೆಲವು ಉಪನ್ಯಾಸಗಳು / ಕಾರ್ಯಕ್ರಮಗಳು ಹೀಗಿವೆ:

* ಶ್ರಾವಣ ಮತ್ತು ಬೇಂದ್ರೆ - ಸುಶೀಲ ವೈದ್ಯ
* ಕರ್ನಾಟಕದ ಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯ - ಉದಯ ಶಂಕರ್
* ಇತಿಹಾಸ ಮತ್ತು ಕನ್ನಡ ಸಾಹಿತ್ಯ - ಪ್ರೊ. ಜಿ. ವಸಂತರಾವ್
* ಭೈರಪನವರ 'ಆವರಣ" - ಪ್ರಕಾಶ್ ನಾಯಕ್
* ಭೈರಪ್ಪನವರ 'ಮಂದ್ರ" - ಡಾ. ತುಳಸಿ ರಾಮಚಂದ್ರ
* ಕವಿ ಮತ್ತು ಸಾಹಿತ್ಯ ಗೋಷ್ಠಿ - 'ಸಾಹಿತ್ಯ ಗೋಷ್ಠಿ"ಯ ಸದಸ್ಯರಿಂದ ಸ್ವರಚಿತ ಕೃತಿಗಳ ವಾಚನ
* ರಾಜಕೀಯ ಮುತ್ಸದ್ದಿಯಾಗಿ ಕೃಷ್ಣ - ಕೃಷ್ಣಗಿರಿ ರಾಮಚಂದ್ರ
* ಬೇಂದ್ರೆಯವರ ಕಾವ್ಯದ ಆಯಾಮಗಳು - ಡಾ. ಗುರುಲಿಂಗ ಕಾಪಸೆ
* ಸುಗಮ ಸಂಗೀತ ಮತ್ತು ಸಾಹಿತ್ಯ - ಎಚ್. ಆರ್. ಲೀಲಾವತಿ
* ಗುಂಡೋಪನಿಷತ್ - ವಾಚನ: ಸರಸ್ವತಿ ವಟ್ಟಮ್, ವ್ಯಾಖ್ಯಾನ: ಸುರೇಶ್ ಬಾಬು
* ಅಸಂಬದ್ಧ ಸಾಹಿತ್ಯ - ಕನ್ನಡದಲ್ಲೇನಿದೆ? - ಎಚ್. ಕೆ. ಕೃಷ್ಣಪ್ರಿಯ
* ಪ್ರೊ. ಬಿ.ವಿ.ಅರ್ತಿಕಜ್ಜೆ ಅವರ ಹಾಸೋಲ್ಲಾಸದ ಆಯ್ದ ಬರಹಗಳು - ವಿಜಯಲಕ್ಷ್ಮಿ
* ವಡ್ಡಾರಾಧನೆ - ವಿಜಯ ಕಣೇಕಲ್
* ವಿವೇಕ್ ಶಾನಭಾಗರ 'ಒಂದು ಬದಿ ಕಡಲು" - ವಿಶ್ವನಾಥ್ ಹುಲಿಕಲ್

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವಿಶ್ವನಾಥ್ ಹುಲಿಕಲ್
Email: [email protected]
Web-site: http://www.sahityagoshti.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X