ರೆಡಿಂಗ್ ನಗರದಲ್ಲಿನ ಸುವರ್ಣ ಕನ್ನಡ ರಾಜ್ಯೋತ್ಸವ ಸಡಗರ ಮುಗಿಲು ಮುಟ್ಟಿತ್ತು. ತಾಯ್ನಾಡಿನ ಪ್ರೀತಿ ಇಲ್ಲಿ ಹೊಳೆಯಾಗಿ ಹರಿಯಿತು...
ಆಂಗ್ಲನಾಡಿನ ರೆಡಿಂಗ್ ನಗರದಲ್ಲಿ "ಕನ್ನಡಿಗರು.ಯು.ಕೆ" ಸಂಗಡಿಗರು, ಕರ್ನಾಟಕದ ಐವತ್ತೊಂದನೆಯ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಶನಿವಾರ ನವೆಂಬರ್ 3ರಂದು ಬಹು ವಿಜೃಂಭಣೆಯಿಂದ ಆಚರಿಸಿದರು. ಕಳೆದ ನಾಲ್ಕು ವರ್ಷಗಳಿಂದ ಆಂಗ್ಲನಾಡಿಗೆ ಆಗಮಿಸಿದ ಮತ್ತು ಆಗಮಿಸುತ್ತಿರುವ ಈ ನವಕನ್ನಡಿಗರು, "ಕನ್ನಡಿಗರು ಯುಕೆ" ಎಂಬ ಸಂಘವನ್ನು ರೆಡಿಂಗ್ ನಗರಲ್ಲಿ ಸ್ಥಾಪಿಸಿ ಈಗಾಗಲೇ ಆರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಆಂಗ್ಲನಾಡಿನಲ್ಲಿ ತಮ್ಮ ತಾಯ್ನಾಡಿನ ಸಂಸ್ಕೃತಿಯನ್ನು ಸ್ಥಿರಪಡಿಸಲು ಆರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಈ ನವಯುವ ಕನ್ನಡಿಗರು ಕಂಕಣಬದ್ಧರಾಗಿದ್ದಾರೆ.
ಈ ರಾಜ್ಯೋತ್ಸವದ ಸಮಾರಂಭವು, ಶ್ರೀಮತಿ ಮಲ್ಲಿಕಾ ಅವರ ಪುಷ್ಪಾಂಜಲಿ ನೃತ್ಯದೊಂದಿಗೆ ಆರಂಭವಾಯಿತು. ಆ ನಂತರ ಕನ್ನಡಿಗರು ಯುಕೆಯ ಸದಸ್ಯರು ಹಾಡಿದ "ಹೊತ್ತಿತೋ ಹೊತ್ತಿತು" ಎಂಬ ಹಾಡಿಗೆ ನಿಜವಾದ ಅರ್ಥವನ್ನು ನೀಡುವಂತೆ ಸಣ್ಣಮಕ್ಕಳು "ಕನ್ನಡ ಜ್ಯೋತಿ" ದೀಪವನ್ನು ಹತ್ತಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಜ್ಯೋತಿಪ್ರಕಾಶವನ್ನು ಸಭೆಯಲ್ಲಿ ಹರಡಿ ಎಲ್ಲರಿಗೂ ಸಂತಸ ಮತ್ತು ಹುರುಪನ್ನು ತಂದರು. ಆಂಗ್ಲನಾಡಿನಲ್ಲಿ ಕರ್ನಾಟಕದ ಬಾವುಟವನ್ನು ಎತ್ತಿ ಹಿಡಿಯಬೇಕಾದ ಈ ಮಕ್ಕಳುಗಳನ್ನು ತಮ್ಮ ವಾಹಿನಿಯಾಲ್ಲಿ ಪರಿಪೂರ್ಣವಾಗಿ ತೊಡಗಿಸಿ, ಮುಂದೆಬರುವ "ಸಂಸ್ಕೃತಿಯ ವಾತಾಯನವನ್ನು" ತಡೆಗಟ್ಟುವ ನಿರ್ಧಾರಕ್ಕೆ ಈ "ಕನ್ನಡಿಗರು ಯುಕೆ"ಯು ಬದ್ಧವಾಗಿದೆ.
ಕಾರ್ಯಕರ್ತರಾದ ಪವನ್ ಅವರೊಂದಿಗೆ, ಸಣ್ಣ ಮಕ್ಕಳ "ತಾಯಿ ಶಾರದೆ ಲೋಕ ಪೂಜಿತೆ" ಎಂಬ ಪ್ರಾರ್ಥನೆಯಿಂದ ಆರಂಭವಾಯಿತು. ಕನ್ನಡಿಗರು ಯು.ಕೆ ಯ ಧ್ಯೇಯದ ಪ್ರತಿಬಿಂಬವೇನೋ ಎಂಬಂತೆ, ಮಕ್ಕಳ ಕನ್ನಡದ ಬಗೆಗಿನ ಪ್ರಶ್ನಾವಳಿಗಳಿಗೆ ಉತ್ತರವೇನೋ ಎಂಬಂತೆ ವಿಜೇಂದ್ರ ರವರು "ಇದೇ ನಾಡು, ಇದೇ ಭಾಷೆ" ಮಾತು "ಕರುನಾಡ ತಾಯಿ ಸದಾ ಚಿನ್ಮಯೀ" ಹಾಡುಗಳನ್ನು ಪ್ರಸ್ತುತ ಪಡಿಸಿದರು.
ವೈವಿಧ್ಯವಾದ ಈ ಕಾರ್ಯಕ್ರಮಕ್ಕೆ ತಮ್ಮದೇ ಆದ ಮೆರುಗನ್ನು ನೀಡಿದವರು ನಮ್ಮ ಬೆಂಗಳೂರಿನ ಅಂಧ ಮಕ್ಕಳ ದಾರಿ ದೀಪವಾದ "ಸಮರ್ಥನ ಸಂಸ್ಥೆ"ಯ ತಂಡದವರು. ತಮಗೆ ದೊರೆತ ಅತಿ ಸಣ್ಣಸಮಯದಲ್ಲಿ ಸಭಿಕರನೆಲ್ಲಾ ಬಹಳಷ್ಟು ರಂಜಿಸಿ, ಸೈ ಎನಿಸಿಕಂಡ ವಿಶಾಲ ಹೃದಯಿಗಳು ಇವರು. ಕರ್ನಾಟಕದ ಜನಪದ ಗೀತೆಗಳನ್ನು ಸಭಿಕರಿಗಳಿಗೆಲ್ಲಾ ಅರ್ಪಿಸಿದ ಹೆಗ್ಗಳಿಕೆ ಮತ್ತೆ ಮಕ್ಕಳದಾಗಿದ್ದಿತು. ಕುಮಾರಿ ಸೋನು ಮತ್ತು ಕುಮಾರಿ ಬಿಂದಿಯ "ಮಾಯದಂತ ಮಳೆ" ಜನಪದ ಹಾಡಿಗೆ ನೃತ್ಯ , ಕುಮಾರಿ ಜ್ಯೋತಿ ಮತ್ತು ಕುಮಾರಿ ಅರ್ಪಿತರ " ಎಲ್ಲೋ ಜೋಗಪ್ಪ" ನೃತ್ಯ ಎಲ್ಲರ ಪ್ರಶಂಸಾರ್ಹವಾದವು. ಕುಮಾರಿ ಅಶ್ಚಿತಾಳ "ಕಮಲದಾ ಮೊಗದೊಳೆ" ಎಂಬ ಲಘು ಶಾಸ್ತ್ರೀಯ ನೃತ್ಯ ಬಹಳ ಚೆನ್ನಾಗಿ ಮೂಡಿಬಂದಿತು. ಸಂಜೆ ರಂಗೇರುತ್ತಿರುವಂತೆ "ಚುಕು ಬುಕು ರೈಲು" ಹಾಡಿಗೆ ಕುಮಾರಿ ಅನು ಮತ್ತು ಕುಮಾರಿ ಸೋನು ಅವರುಗಳು ನೃತ್ಯವನ್ನು ಅಳವಡಿಸಿ ತಮ್ಮ ಪ್ರತಿಭೆಯನ್ನು ಸಭಿಕರು ತಲೆತೂಗಿಸುವಂತೆ ತೋರಿಸಿದರು.
ಈ ಮಕ್ಕಳ ಕಲರವದ ಮಧ್ಯೆ ಮಿನುಗಿದ ತಾರೆಗಳು ಅರುಣ್, ಸರಿತಾ, ಕುಮಾರ್, ಸಂದೇಶ್ ಮತ್ತು ದೀಪಿಕ ಅವರುಗಳ ಹಾಸ್ಯನಾಟಕ, ಮದುವೆ ಮತ್ತದರ ನಿರಂತರ ವಾಗ್ದಾನವನ್ನೂ ಮತ್ತು ಮಹಿಳೆಯರ ಉಚ್ಚಸ್ಥಾನವನ್ನು ಸಭಿಕರಿಗೆ ಮತ್ತೆ ಜ್ಞಾಪಿಸಿಕೊಡಲಾಯಿತು. ಆದಿನದ ಚಳಿಯಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿದ ಯಕ್ಷಪಾತ್ರಧಾರಿ ಕುಮಾರ್ ರವರು ಜನರ ಹರ್ಷೋದ್ಗಾರಕ್ಕೆ ಪಾತ್ರರಾದರು.
ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಪ್ರತಿಬಿಂಬಿಸಿ, ರಾಜು ಹಿರೇಗೌಡರವರು ಬರೆದ, "ರಾಜಕೀಯ ಲೋಕ" ಎಂಬ ಕಿರು ಹಾಸ್ಯನಾಟಕವನ್ನು, ಶಶಿ ಮತ್ತು ತಂಡದವರು ಸೇರಿ ಕೇವಲ ಮೂವತ್ತು ನಿಮಿಷಗಳಲ್ಲಿ ಸಿದ್ಧಪಡಿಸಿ ಪ್ರಸ್ತುತಗೊಳಿಸಿ ಎಲ್ಲರ ಅಭಿನಂದನೆಗಳಿಗೆ ಪಾತ್ರರಾದರು. ಭೋಜನದ ಸಮಯದಲ್ಲೇ ಅರುಣ್ ಕುಕ್ಕೇಯವರು ಡಾಕ್ಟರ್ ರಾಜ್ ಕುಮಾರ್ ರವರ "ನಾದಮಯ ಈ ಲೋಕವೆಲ್ಲಾ" ಎಂಬ ಚಿತ್ರವನ್ನು ಎಲ್ಲರ ಕಣ್ಮುಂದೆ ತಂದಿರಿಸಿದರು. ಅಂದು ರೆಡಿಂಗ್ ನಗರವನ್ನು ರಂಗೇನಹಳ್ಳಿಯಾಗಿ ಕೋಲಾಟದ ತಂಡದವರು ಮಾರ್ಪಡಿಸಿದ್ದರು. ಕನ್ನಡಿಗರು ಯು.ಕೆ ಸಮಿತಿಯ ತಂಡದವರು ಈ ಕೋಲಾಟವನ್ನು ಪ್ರೇಕ್ಷಕರ ಕೋರಿಕೆಯಂತೆ ಎರಡು ಬಾರಿ ಪ್ರದರ್ಶಿಸಿದರು.
ಕನ್ನಡಿಗರು ಯು.ಕೆ ಕಾರ್ಯಕ್ರಮಗಳಿಗೆಲ್ಲ ತಮ್ಮ ಸಂಪೂರ್ಣ ಸಹಕಾರ, ಬೆಂಬಲ ಮತ್ತು ಯೋಗದಾನವನ್ನು ಮಾಡುತ್ತ ಬಂದಿರುವ ಮತ್ತು ಸದ್ಯದ ಆಂಗ್ಲ ನಾಡಿನ ಕನ್ನಡಿಗರು ಮತ್ತು ಕನ್ನಡೇತರರ ಮನದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಶ್ರೀಮತಿ ಶ್ರೀದೇವಿ ವಿಜೇಂದ್ರ ಮತ್ತು ವಿಜೇಂದ್ರ ಈ ಕಾರ್ಯಕ್ರಮದಲ್ಲೂ ತಮ್ಮ ಅಮೋಘವಾದ ಹಾಡುಗಾರಿಕೆಯಿಂದ ಹಿರಿಯರ ಮತ್ತು ಕಿರಿಯರ ಮನ ಗೆದ್ದರು. ಅಷ್ಟೇ ಅಲ್ಲದೆ, ಹಿರಿಯ ಮತ್ತು ಕಿರಿಯ ತಲೆಮಾರುಗಳೆಲ್ಲಾ ಇವರ ಹಾಡಿಗೆ ಹೆಜ್ಜೆಹಾಕಿ ತಮ್ಮ ಸಂತೃಪ್ತಿಯನ್ನು ವ್ಯಕ್ತ ಪಡಿಸಿದರು.
ಪವನ್ ಮತ್ತು ಗಾಯತ್ರಿಯವರು ಈ ರಾಜ್ಯೋತ್ಸವದ ಕಾರ್ಯಕ್ರಮಗಳನೆಲ್ಲವನ್ನೂ ಸರಾಗವಾಗಿ ಪ್ರಸ್ತುತಗೊಳಿಸಿದರು. ಈ ರಾಜ್ಯೊತ್ಸವದ ಕಾರ್ಯಕರ್ತರಾದ ಶಶಿಕಾಂತ್ ತಮ್ಮ ಅಭಿನಂದನೆಗಳೊಂದಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಿದರು. ಅಂತೂ ಇಡೀ ಸಮಾರಂಭ ಕನ್ನಡತನವನ್ನು ಆಂಗ್ಲ ನಾಡಿನಲ್ಲಿ ಸ್ಥಿರಪಡಿಸುವ ಇರಾದೆಗಳನ್ನು ವ್ಯಕ್ತಪಡಿಸುವಲ್ಲಿ ಯಶಸ್ವಿಯಾಯಿತು.
ರೆಡಿಂಗ್ ರಾಜ್ಯೋತ್ಸವದ ಚಿತ್ರಗಳು
- ಪವನ್ ಮೈಸೂರು ಮತ್ತು ರಾಜಾರಾಮ್ ಕಾವಳೆ
ಆಂಗ್ಲನಾಡಿನ ರೆಡಿಂಗ್ ನಗರದಲ್ಲಿ "ಕನ್ನಡಿಗರು.ಯು.ಕೆ" ಸಂಗಡಿಗರು, ಕರ್ನಾಟಕದ ಐವತ್ತೊಂದನೆಯ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಶನಿವಾರ ನವೆಂಬರ್ 3ರಂದು ಬಹು ವಿಜೃಂಭಣೆಯಿಂದ ಆಚರಿಸಿದರು. ಕಳೆದ ನಾಲ್ಕು ವರ್ಷಗಳಿಂದ ಆಂಗ್ಲನಾಡಿಗೆ ಆಗಮಿಸಿದ ಮತ್ತು ಆಗಮಿಸುತ್ತಿರುವ ಈ ನವಕನ್ನಡಿಗರು, "ಕನ್ನಡಿಗರು ಯುಕೆ" ಎಂಬ ಸಂಘವನ್ನು ರೆಡಿಂಗ್ ನಗರಲ್ಲಿ ಸ್ಥಾಪಿಸಿ ಈಗಾಗಲೇ ಆರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಆಂಗ್ಲನಾಡಿನಲ್ಲಿ ತಮ್ಮ ತಾಯ್ನಾಡಿನ ಸಂಸ್ಕೃತಿಯನ್ನು ಸ್ಥಿರಪಡಿಸಲು ಆರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಈ ನವಯುವ ಕನ್ನಡಿಗರು ಕಂಕಣಬದ್ಧರಾಗಿದ್ದಾರೆ.ಈ ರಾಜ್ಯೋತ್ಸವದ ಸಮಾರಂಭವು, ಶ್ರೀಮತಿ ಮಲ್ಲಿಕಾ ಅವರ ಪುಷ್ಪಾಂಜಲಿ ನೃತ್ಯದೊಂದಿಗೆ ಆರಂಭವಾಯಿತು. ಆ ನಂತರ ಕನ್ನಡಿಗರು ಯುಕೆಯ ಸದಸ್ಯರು ಹಾಡಿದ "ಹೊತ್ತಿತೋ ಹೊತ್ತಿತು" ಎಂಬ ಹಾಡಿಗೆ ನಿಜವಾದ ಅರ್ಥವನ್ನು ನೀಡುವಂತೆ ಸಣ್ಣಮಕ್ಕಳು "ಕನ್ನಡ ಜ್ಯೋತಿ" ದೀಪವನ್ನು ಹತ್ತಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಜ್ಯೋತಿಪ್ರಕಾಶವನ್ನು ಸಭೆಯಲ್ಲಿ ಹರಡಿ ಎಲ್ಲರಿಗೂ ಸಂತಸ ಮತ್ತು ಹುರುಪನ್ನು ತಂದರು. ಆಂಗ್ಲನಾಡಿನಲ್ಲಿ ಕರ್ನಾಟಕದ ಬಾವುಟವನ್ನು ಎತ್ತಿ ಹಿಡಿಯಬೇಕಾದ ಈ ಮಕ್ಕಳುಗಳನ್ನು ತಮ್ಮ ವಾಹಿನಿಯಾಲ್ಲಿ ಪರಿಪೂರ್ಣವಾಗಿ ತೊಡಗಿಸಿ, ಮುಂದೆಬರುವ "ಸಂಸ್ಕೃತಿಯ ವಾತಾಯನವನ್ನು" ತಡೆಗಟ್ಟುವ ನಿರ್ಧಾರಕ್ಕೆ ಈ "ಕನ್ನಡಿಗರು ಯುಕೆ"ಯು ಬದ್ಧವಾಗಿದೆ.