ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಪ್ರಧಾನಿ ಆದ್ರೆ ಕರ್ನಾಟಕದಲ್ಲಿರೋಲ್ಲ!

|
Google Oneindia Kannada News

ಶಿವಮೊಗ್ಗ, ಏ.12 : ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಮತ್ತು ರಾಜ್ಯ ತೊರೆಯುವ ಮಾತನ್ನಾಡಿದ್ದಾರೆ. ಆದರೆ, ಅದಕ್ಕೆ ಬಿಜೆಪಿ 276 ಸ್ಥಾನಗಳಿಸಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕಂತೆ.

ಶನಿವಾರ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ನಡೆಸಲು ಆಗಮಿಸಿದ ದೇವೇಗೌಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. "ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 276 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ತಾವು ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ" ಈ ಸಂದರ್ಭದಲ್ಲಿ ತಿಳಿಸಿದರು.

HD Deve Gowda

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಒಂದು ವೇಳೆ ಮೋದಿ ಪ್ರಧಾನ ಮಂತ್ರಿಯಾದರೆ,ತಾವು ಕರ್ನಾಟಕವನ್ನು ತೊರೆಯುತ್ತೇನೆ" ಎಂದು ಹೇಳಿದರು. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಗೌಡರು ಪ್ರಶ್ನೆ ಮಾಡಿದರು.

ನಮಗೆ ರಾಜಕಾರಣ ಗೊತ್ತಿಲ್ಲವೇನ್ರೀ?, ಅದು ಹೇಗೆ ಬಿಜೆಪಿ 276 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ದೇವೇಗೌಡರು ಪ್ರಶ್ನಿಸಿದರು. ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಗೌಡರು, ಎರಡೂ ರಾಷ್ಟ್ರೀಯ ಪಕ್ಷಗಳು ಜನರಿಗೆ ಏನು ಕೊಡುಗೆ ಕೊಟ್ಟಿವೆ ಎಂದರು. [ಯಡಿಯೂರಪ್ಪ ಸಂದರ್ಶನ ಓದಿ]

ಎಲ್ಲಿದೆ ಮೋದಿ ಅಲೆ : ದೇಶದಲ್ಲಿ ನರೇಂದ್ರ ಮೋದಿ ಅಲೆ ಇಲ್ಲವೇ ಇಲ್ಲ. ಆದರೆ, ಬಿಜೆಪಿ ಮೋದಿ ಅಲೆ ಇದೆ ಹೇಳಿಕೊಳ್ಳುತ್ತಿದೆ ಎಂದು ಹೇಳಿದ ಗೌಡರು, ಮೋದಿ ಈ ದೇಶದ ಪ್ರಧಾನಿಯಾಗುವುದಿಲ್ಲ. ಇದು ನನ್ನ ರಾಜಕೀಯ ಅನುಭವದ ಭವಿಷ್ಯ ಎಂದು ಹೇಳಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯುಆರ್ ಅನಂತಮೂರ್ತಿ ಸಹ ಮೋದಿ ಪ್ರಧಾನಿಯಾದರೆ ದೇಶದಲ್ಲಿರೋಲ್ಲ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಸದ್ಯ ದೇವೇಗೌಡರ ಸರದಿ. ಗೌಡರು ಕರ್ನಾಟಕದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. [ಅನಂತಮೂರ್ತಿ ಹೇಳಿದ್ದೇನು]

English summary
Elections 2014 : Former Prime Minister and JDS chief HD Deve Gowda has said, he will not live in a state with Narendra Modi as the Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X