ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾರೆಯರನ್ನು ನೋಡಲು ಜನ ಸೇರುತ್ತಾರೆ : ಬಿಎಸ್ವೈ

By ಗುರು ಕುಂಟವಳ್ಳಿ
|
Google Oneindia Kannada News

ಪ್ರಶ್ನೆ : ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ, ಇದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ?

ಯಡಿಯೂರಪ್ಪ : ನೋಡಿ, ಹಿಂದಿನ ಚುನಾವಣೆಯಲ್ಲಿ ನನ್ನ ಸರ್ಕಾರವಿತ್ತು, ಶಾಸಕರಿದ್ದರು. ಈ ಬಾರಿ ನಮ್ಮ ಶಾಸಕರಿಲ್ಲ ಎಂಬುದು ಸತ್ಯ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರೇ ನನ್ನ ಶಕ್ತಿ. ಶಾಸಕರಿಲ್ಲ ಎಂಬುದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ.

ಪ್ರಶ್ನೆ : ಕ್ಷೇತ್ರದ ಪ್ರಮುಖ ಸಮಸ್ಯೆಯಾದ ಬಗರ್ ಹುಕುಂಗೆ ಪರಿಹಾರವಿಲ್ಲವೆ?

ಯಡಿಯೂರಪ್ಪ : ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು. ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಸಮಸ್ಯೆ ಬಗೆಹರಿಸಬೇಕಾಗಿರುವುದು ಅವರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅವರು ಇಚ್ಚಾಶಕ್ತಿಯಿಂದ ಇದನ್ನು ಮಾಡಿಸಿ ರೈತರಿಗೆ ನೆರವಾಗಬೇಕು. ಸಚಿವರಾದ ಕಿಮ್ಮನೆ ರತ್ಮಾಕರ್, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಈ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಗೊತ್ತು. ಕೇಂದ್ರದ ಮೇಲೆ ಒತ್ತಡ ತಂದು ಅವರು ಅದನ್ನು ಸರಿಪಡಿಸಬಹುದು. ನಾನು ಸಂಸದನಾದ ನಂತರ ಈ ಬಗ್ಗೆ ಚರ್ಚೆ ಮಾಡುತ್ತೇನೆ.

Shimoga BJP candidate BS Yeddyurappa interview

ಪ್ರಶ್ನೆ : ನಿಮ್ಮ ಚುನಾವಣಾ ಪ್ರಚಾರದ ಪ್ರಮುಖ ವಿಷಯವೇನು?

ಯಡಿಯೂರಪ್ಪ: ನೋಡಿ ಇಲ್ಲಿ ಎರಡು ಅಂಶಗಳಿವೆ. ಒಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತ ಮತ್ತು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಎರಡು ದೇಶದಲ್ಲಿ ಹೊಸ ಶಕ್ತಿಯ ಉದಯವಾಗಿದೆ ಅದು ನರೇಂದ್ರ ಮೋದಿ. ದೇಶದ ಜನರು ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ, ಇದನ್ನು ಜನರಿಗೆ ತಿಳಿಸುತ್ತಿದ್ದೇನೆ.

ಪ್ರಶ್ನೆ : ಕ್ಷೇತ್ರದ ತುಂಬಾ ಸಿನಿ ತಾರೆಯರು ಪ್ರಚಾರ ನಡೆಸುತ್ತಿದ್ದಾರೆ, ಏನು ಹೇಳುತ್ತೀರಿ?

ಯಡಿಯೂರಪ್ಪ : ಸಿನಿಮಾ ನಟ-ನಟಿಯರನ್ನು ನೋಡುಡುವಂತಹ ಅವಕಾಶ ಶಿವಮೊಗ್ಗದ ಜನರಿಗೆ ಸಿಕ್ಕಿದೆ. ತೆರೆ ಮೇಲೆ ಮಾತ್ರ ಕಾಣುತ್ತಿದ್ದವರು ಇಂದು ಅವರ ಮನೆಬಾಗಿಲಿಗೆ ಬರುತ್ತಿದ್ದಾರೆ ಇದು ಒಳ್ಳೆಯದಲ್ಲವೇ?. ತಾರೆಯರ ಪ್ರಚಾರ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಟ-ನಟಿಯರನ್ನು ನೋಡಲು ಜನ ಸೇರುವುದರಲ್ಲಿ ತಪ್ಪಿಲ್ಲ ಬಿಡಿ.

English summary
Elections 2014 : Former CM and Shimoga Lok Sabha constituency BJP candidate BS Yeddyurappa shares his ideas in an interview with Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X