ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಮ್ಮನೆ ರೀತಿಯಲ್ಲೇ 6 ಜೀವಗಳ ರಕ್ಷಿಸಿದ ಯಡಿಯೂರಪ್ಪ

By Mahesh
|
Google Oneindia Kannada News

ಶಿವಮೊಗ್ಗ. ಆ.29: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಹಿಂದೊಮ್ಮೆ ಕೆರೆಗೆ ಬಿದ್ದ ಕಾರನ್ನು ಮೇಲಕ್ಕೆತ್ತಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದರು. ಇದೇ ರೀತಿಯ ದೃಶ್ಯ ಶಿಕಾರಿಪುರ ಸಮೀಪದ ಚಿಕ್ಕಜೋಗಿಹಳ್ಳಿ ಬಳಿ ಕೆರೆಯಲ್ಲಿ ರಿಪೀಟ್ ಆಗಿದೆ. ಈ ಬಾರಿ ಬಿಜೆಪಿ ಉಪಾಧ್ಯಕ್ಷ, ಸಂಸದ ಬಿಎಸ್ ಯಡಿಯೂರಪ್ಪ ಅವರ ಸರದಿ.

ಚಿಕ್ಕ ಜೋಗಿ ಹಳ್ಳಿ ಕೆರೆಗೆ ಕಾರು ಬಿದ್ದು, ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದ 6 ಜನರ ಪ್ರಾಣ ರಕ್ಷಿಸುವಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಯಡಿಯೂರಪ್ಪ ಹಾಗೂ ಅವರ ಬೆಂಗಾವಲು ಪಡೆ ಯಶಸ್ವಿಯಾಗಿದೆ. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮೈಸೂರಿನಲ್ಲಿ ಉತ್ತಮ ಶಿಕ್ಷಣ ಸುಧಾರಕ ಪ್ರಶಸ್ತಿ 2014 ಪಡೆಯುತ್ತಿದ್ದರು. [ಆರು ಮಂದಿ ಜೀವ ಉಳಿಸಿದ ಸಚಿವ ರತ್ನಾಕರ್ ಸಿಬ್ಬಂದಿ]

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು, ಚಾಲಕನ ನಿಯಂತ್ರಣ ತಪ್ಪಿ ಶಿಕಾರಿಪುರ ಸಮೀಪದ ಚಿಕ್ಕಜೋಗಿಹಳ್ಳಿ ಕೆರೆಗೆ ಬಿದ್ದಿದೆ. ಕಾರಿನಲ್ಲಿ ಮಗು ಸೇರಿದಂತೆ 6 ಮಂದಿ ಪ್ರಯಾಣಿಸುತ್ತಿದ್ದರು. ಕೆರೆಗೆ ಹಾರಿದ ಕಾರಿನಲ್ಲಿದ್ದವಲ್ಲರೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು.

Shikaripura : Yeddyurappa, escort personnel save six from drowning

ಇದೇ ವೇಳೆ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ 'ಜನಧನ್ ಯೋಜನೆ'ಗೆ ಚಾಲನೆ ನೀಡುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಇದೇ ಮಾರ್ಗವಾಗಿ ಶಿಕಾರಿಪುರಕ್ಕೆ ತೆರಳುತ್ತಿದ್ದರು. ಕಾರು ಕೆರೆಗೆ ಬಿದ್ದುದನ್ನು ಗಮನಿಸಿದ ಮೊದಲಿಗೆ ಯಡಿಯೂರಪ್ಪ ಅವರೇ ಗಮನಿಸಿದ್ದಾರೆ. ಕೂಡಲೇ ಸಮಯ ಪ್ರಜ್ಞೆ ಮೆರೆದು ತಮ್ಮ ಬೆಂಗಾವಲು ವಾಹನದಲ್ಲಿದ್ದ ಸಿಬ್ಬಂದಿಯೊಂದಿಗೆ ಕಾರಿನಲ್ಲಿದ್ದ 6 ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ.

ಸಂಸದ ಬಿಎಸ್ ಯಡಿಯೂರಪ್ಪ ಅವರ ಕಾರು ಚಾಲಕ ಶಿವಕುಮಾರ್ ಹಾಗೂ ಯಡಿಯೂರಪ್ಪ ಅವರ ಗನ್ ಮ್ಯಾನ್ ಕೇಶವ ಕೆರೆಗೆ ಹಾರಿ ಅಪಾಯದಲ್ಲಿದ್ದವರನ್ನು ದಡಕ್ಕೆ ಎಳೆದು ತಂದಿದ್ದಾರೆ. ಬೆಂಗಾವಲು ಪಡೆ ಪೊಲೀಸರಾದ ಎಸ್.ಸಿ ಬಸವರಾಜಪ್ಪ, ಮಂಜುನಾಥ್ ನಾಯ್ಕ್, ಹುಚ್ಚಪ್ಪ ಅವರು ಪ್ರಥಮ ಚಿಕಿತ್ಸೆ ನೀಡಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಶಶಿಧರ(30), ವಿಶ್ವಾಸ್‌(32), ವೀಣಾ(37), ಚನ್ನಬಸಮ್ಮ(50), ಶಕುಂತಲಮ್ಮ(52) ಹಾಗೂ ಒಂದು ವರ್ಷದ ಮಗು ಪ್ರಣವ್‌ ಎಂದು ಗುರುತಿಸಲಾಗಿದೆ. ಶಶಿಧರ್ ಅವರು ಶಿವಮೊಗ್ಗದ ಸರ್ಕಾರಿ ಸ್ವಾಮ್ಯದ ಮೆಗ್ಗಾನ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಉದ್ಯೋಗದಲ್ಲಿದ್ದಾರೆ. ಶಿಕಾರಿಪುರದಲ್ಲಿ ತಮ್ಮ ನೆಂಟರ ಮನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಂಸಾರ ಸಮೇತ ತೆರಳುವ ಈ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಯಡಿಯೂರಪ್ಪ ಅವರೇ ತಮ್ಮ ಕಾರಿನ ಮೂಲಕ ಶಿಕಾರಿಪುರಕ್ಕೆ ಕರೆದೊಯ್ದು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಯಡಿಯೂರಪ್ಪ ಹಾಗೂ ಅವರ ಬೆಂಗಾವಲು ಪಡೆಗೆ ಧನ್ಯವಾದ ಅರ್ಪಿಸಿದ್ದಾರೆ.

English summary
BJP vice-president and former Chief Minister B.S. Yeddyurappa and his escort personnel saved the lives of six persons, including a one-year-old child, who were drowning in a canal near ChikkaJogihalli village in Shikaripur taluk on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X