ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಲೋಕಾಯುಕ್ತರು ಬಂದ್ರು ಸಿಬ್ಬಂದಿ ಇರಲಿಲ್ಲ

|
Google Oneindia Kannada News

ಶಿವಮೊಗ್ಗ, ಜೂ. 23 : ನಗರದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಆಸ್ಪತ್ರೆ ಸಿಬ್ಬಂದಿ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೋಗಿಗಳು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ದೂರು ನೀಡಿದಾಗ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ಭಾಸ್ಕರ್ ರಾವ್ ಮೆಗ್ಗಾನ್ ಆಸ್ಪತ್ರಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಲವಾರು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಲೋಕಾಯುಕ್ತರು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 Meggan Hospital

ಸೋಮವಾರ ಬೆಳಗ್ಗೆ ಕುವೆಂಪು ರಂಗ ಮಂದಿರದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಲೋಕಾಯುಕ್ತರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಮರ್ಪಕವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ವೈದ್ಯಾಧಿಕಾರಿಗಳು ಲೋಕಾಯುಕ್ತರಿಗೆ ಅಹಲವಾಲು ಸಲ್ಲಿಸಿದರು.

ಅಧಿಕಾರಿಗಳ ಗೈರು : ಲೋಕಾಯುಕ್ತರು ಸಾರ್ವಜನಿಕರ ದೂರುಗಳನ್ನು ಆಲಿಸಲು ನಗರಕ್ಕೆ ಬಂದಿದ್ದರೆ, ಅರಣ್ಯ ಇಲಾಖೆಯ ಹಲವು ಅಧಿಕಾರಿಗಳು ಲೋಕಾಯಕ್ತರಿದ್ದ ಕಾರ್ಯಕ್ರಮಕ್ಕೆ ಬರದೇ ಗೈರು ಹಾಜರಾಗಿದ್ದರು. ಶಿವಮೊಗ್ಗ, ಸಾಗರ, ಭದ್ರವಾತಿ ತಾಲೂಕುಗಳ ದೂರುಗಳೇ ಹೆಚ್ಚಾಗಿ ಸಲ್ಲಿಕೆಯಾದವು.

ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್, ಜಿಲ್ಲಾ ಪಂಚಾಯಿತಿ ಸಿಇಓ ಸಸಿಕಾಂತ ಸೆಂಥಿಲ್ ಸೇರಿದಂತೆ ಹಲವು ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆ ಆಲಿಸಿದ ಲೋಕಾಯುಕ್ತರ ಜೊತೆಗಿದ್ದರು.

ಸಾರ್ವಜನಿಕರಿಗೆ ನಿರಾಸೆ : ಲೋಕಾಯುಕ್ತರ ಭೇಟಿಯಿಂದಾಗಿ ಅಧಿಕಾರಿಗಳಿಗೆ ಸ್ವಲ್ಪ ಮಟ್ಟಿಗೆ ಭಯಪಟ್ಟರೆ ಸಾರ್ವಜನಿಕರಿಗೆ ಮಾತ್ರ ನಿರಾಸೆ ಉಂಟಾಯಿತು. ಸಾರ್ವಜನರಿಕರು ಹೊತ್ತು ತಂದ ಇಲಾಖೆಯ ಸಮಸ್ಯೆಯನ್ನು ಪರಿಹಾರ ಮಾಡಬೇಕಾದ ಅಧಿಕಾರಿಗಳೇ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಆದ್ದರಿಂದ ಸಾರ್ವಜನಿಕ ವಲಯದಲ್ಲಿ ಮೂಡಿದ್ದ ನಿರೀಕ್ಷೆಗಳು ಹುಸಿಯಾದವು.

English summary
Karnataka Lokayukta Bhaskar Rao on Monday, June 23 conducted a surprise inspection Meggan Hospital in Shimoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X