ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್.ಟಿ.ಒ ನಿರ್ಮೂಲನೆಯಾಗಲಿದೆ: ನಿತಿನ್ ಗಡ್ಕರಿ

By Mahesh
|
Google Oneindia Kannada News

ನವದೆಹಲಿ, ಆ.19: ಭ್ರಷ್ಟಾಚಾರದ ಕೂಪಗಳಾಗಿರುವ ಪ್ರಾದೇಶಿಕ ಸಾರಿಗೆ ಕಚೇರಿ (RTO)ಗಳನ್ನು ರದ್ದು ಮಾಡಿ, ಆರ್ ಟಿಒ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸಿ ಹೊಸ ಸುಧಾರಿತ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವಾಹನ ಚಲಾವಣೆ ಪರವಾನಗಿ ವಿತರಣೆಗೆ ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಹೊಸ ವ್ಯವಸ್ಥೆಯಲ್ಲಿ ಡ್ರೈವಿಂಗ್ ಲೈಸನ್ಸ್ ವಿತರಣೆ ಸರಳವಾಗಿದ್ದರೂ ಸಂಚಾರ ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಗಡ್ಕರಿ ಹೇಳಿದ್ದಾರೆ.

ಮೋಟಾರು ವಾಹನ ಕಾಯ್ದೆಗೆಸಮಗ್ರ ಬದಲಾವಣೆ ತರುವುದು. ಅಂದರೆ ಹಾಲಿ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಹೊಸ ಸರಳೀಕೃತ ವ್ಯವಸ್ಥೆಯಿಂದ ಜನರಿಗೆ ಹೆಚ್ಚಿನ ಅನುಕೂಲತೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ.

RTOs will be abolished soon: Nitin Gadkari

ಕೇಂದ್ರ ಸಾರಿಗೆ ಖಾತೆಯ ಮೂಲಗಳ ಪ್ರಕಾರ, ಈಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‍ಟಿಒ)ಗಳ ಅಧಿಕಾರದ ವ್ಯಾಪ್ತಿ ಮತ್ತು ಪದವಿಗಳ ಕುರಿತಂತೆ ಹೊಸ ರೀತಿಯ ವ್ಯಾಖ್ಯಾ ನೀಡಲು ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳಿಗೆ ಹಾಲಿ ಇರುವ ಕೆಲವು ವಿವೇಚನಾಧಿಕಾರಿಗಳನ್ನು ಮೊಟಕುಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ವಾಹನ ಚಾಲನಾ ಪರವಾನಗಿ ನೀಡಿಕೆಯಲ್ಲಿ ಹೆಚ್ಚು ಹೆಚ್ಚು ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಕನಿಷ್ಠ ಪ್ರಮಾಣದಲ್ಲಿ ಮಾನವ ಶಕ್ತಿಯ ಹಸ್ತಕ್ಷೇಪವನ್ನು ಕಡಿತಗೊಳಿಸುವ ಸಲುವಾಗಿ ಹೊಸ ವ್ಯವಸ್ಥೆ ಜಾರಿಗೆ ಸರ್ಕಾರ ತೀಕ್ಷ್ಣವಾಗಿ ಚಿಂತನೆ ನಡೆಸಿದೆ. ಸಾರಿಗೆ ಇಲಾಖೆಯ ಈ ಯೋಜನೆ ಕಾರ್ಯಗತವಾಗಿಬಿಟ್ಟರೆ, ಪ್ರಸಕ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಅಧಿಕಾರಕ್ಕೆ ಕತ್ತರಿ ಬೀಳಲಿದೆ ಎಂದು ತಿಳಿದು ಬಂದಿದೆ.

ಪುಣೆಯ ಕಾರ್ಯನಿರತ ಪತ್ರಕರ್ತರ ಸಂಘ(PUWJ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಮಾತನಾಡುತ್ತಾ, ಹಳೆ ಕಾನೂನು ಬದಲಿಸಬೇಕಿದೆ. ಹೊಸ ತಂತ್ರಜ್ಞಾನಗಳ ಬಳಕೆ ಹೆಚ್ಚಬೇಕಿದೆ. "Tithe Laxmi darshanacha khel chalto (money rules there)." ಎಂದು ಭ್ರಷ್ಟರಿಗೆ ಕಾನೂನು ಮೂಲಕ ಪಾಠ ಕಲಿಸಬೇಕಿದೆ ಎಂದಿದ್ದಾರೆ.

English summary
Pune: Road Transport and Highways Minister Nitin Gadkari announced that the central government would soon scrap regional transport offices (RTO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X