ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಮುಂಡೆ ದರ್ಶನ ಪಡೆದ ರಾಹುಲ್; ಚಾಲಕನ ಸೆರೆ

By Srinath
|
Google Oneindia Kannada News

ನವದೆಹಲಿ, ಜೂನ್ 3: ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಅಕಾಲಿಕ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಅನೇಕ ಮುಖಂಡರು ಮೃತರ ಅಂತಿಮ ದರ್ಶನಕ್ಕೆ ರಾಜಧಾನಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಸಾಲುಗಟ್ಟಿ ಬರುತ್ತಿದ್ದಾರೆ. ಇದೀಗತಾನೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಸಚಿವ ಮುಂಡೆ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ನಾಯಕರು, ಬಿಜೆಪಿ ನಾಯಕರಾದ ನಿತನ್ ಗಡ್ಕರಿ, ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ್, ಸಿದ್ದೇಶ್ವರ್, ಸ್ಮೃತಿ ಇರಾನಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಚಾಲಕ Imperial Hotel ಉದ್ಯೋಗಿ: ಬೆಳಗ್ಗೆ 6.30ರಲ್ಲಿ ಏನಾಗಿತ್ತೆಂದರೆ ಮುಂಬೈಗೆ ತೆರಳಲು ಸಚಿವ ಗೋಪಿನಾಥ್ ಮುಂಡೆ ಅವರು Maruti Suzuki SX4 (DL 8C BF 0034) ಕಾರಿನಲ್ಲಿ ಬೆಂಗಾವಲು ಪಡೆಯ ನೆರವಿಲ್ಲದೆ ಆಪ್ತ ಸಹಾಯಕ ಮತ್ತು ಕಾರಿನ ಚಾಲಕನ ಜತೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿದ್ದರು. (ಗೋಪಿನಾಥ್ ಮುಂಡೆ ಸಾವು: ಇದೇನಿದು ಶೋಭಾಡೆ ಸಂಸ್ಕಾರ?)

ಆದರೆ ತುಘಲಕ್ ರಸ್ತೆಯಲ್ಲಿ ಅರವಿಂದ್ ಚೌಕ್ ಬಳಿಗೆ ಬರುವ ವೇಳೆಗೆ ಗುರುವಿಂದರ್ ಸಿಂಗ್ ಎಂಬ 32 ವರ್ಷದ ವ್ಯಕ್ತಿ ತಮ್ಮ ಕಾರನ್ನು (Tata Indica car) ವೇಗವಾಗಿ ಓಡಿಸುತ್ತಾ ಬಂದಿದ್ದಾರೆ. ಆದರೆ ಆಯತಪ್ಪಿ ಮುಂದೆ ಸಾಗುತ್ತಿದ್ದ (ಸಚಿವ ಮುಂಡೆ) ಕಾರಿನ ಎಡ ಭಾಗಕ್ಕೆ (ಹಿಂದಿನ ಸೀಟಿನ ಬಳಿ) ಲಘುವಾಗಿ ಡಿಕ್ಕಿ ಹೊಡೆದಿದ್ದಾರೆ. ಅದೇ ಸೀಟಿನಲ್ಲಿ ಕುಳಿತಿದ್ದ ಸಚಿವ ಮುಂಡೆ ಅಪಘಾತಕ್ಕಿಂತ ಹೆಚ್ಚಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಮುಂದೆ ಹೃಯಾಘಾತದಿಂದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇತ್ತ (ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ) ಸಚಿವ ಮುಂಡೆ ಅವರ ಆಪ್ತ ಸಹಾಯಕ ಮತ್ತು ಕಾರಿನ ಚಾಲಕನಿಗೆ ಲಘುವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಪಘಾತಕ್ಕೆ ಕಾರಣವಾದ (ಮುಂದೆ ಸಾವಿಗೂ ಕಾರಣನಾದ) ಆರೋಪದ ಮೇಲೆ ಗುರುವಿಂದರ್ ಸಿಂಗ್ ಅವರನ್ನು ಬಂಧಿಸಿ, ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ದಿಲ್ಲಿ ಪೊಲೀಸ್ ಜಂಟಿ ಆಯುಕ್ತ ಎಂಕೆ ಮೀನಾ ತಿಳಿಸಿದ್ದಾರೆ. (ಅಪಘಾತ: ಸಚಿವ ಮುಂಡೆ ಸಾವು, ವೈದ್ಯರು ಏನನ್ತಾರೆ?)

union-minister-gopinath-munde-death-car-driver-gurvinder-singh-arrested
English summary
Union Minister Gopinath Munde death: The car driver Gurvinder Singh arrested in Delhi. Singh, 32, was driving his personal Tata Indica car, which rammed into the senior Bharatiya Janata Party leader's Maruti Suzuki SX4 on the side he was sitting, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X