ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಸೆಂಜರ್ ರೈಲುಗಳಿಗೂ ತತ್ಕಾಲ್‌ ಬುಕ್ಕಿಂಗ್‌

|
Google Oneindia Kannada News

ಬೆಂಗಳೂರು, ಸೆ.28 : ರೈಲ್ವೆ ಇಲಾಖೆ ಹೊಸದೊಂದು ಯೋಜನೆ ಜಾರಿಗೆ ತರಲು ಮುಂದಾಗಿದೆ. ಈ ಯೋಜನೆ ಪ್ರಕಾರ ಪ್ಯಾಸೆಂಜರ್ ರೈಲುಗಳಿಗೂ ಮುಂಗಡವಾಗಿ ತತ್ಕಾಲ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.

ಸದ್ಯ ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ಮತ್ತು ರಾಜಧಾನಿ, ತುರಂತೋ, ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ಮಾತ್ರ ತತ್ಕಾಲ್‌ ಸೇವೆ ಮೂಲಕ ಟಿಕೆಟ್ ಬುಕ್ ಮಾಡುವ ಸೌಲಭ್ಯವಿತ್ತು. ಸದ್ಯ ಇದನ್ನು ವಿಸ್ತರಣೆ ಮಾಡಿ, ಪ್ಯಾಸೆಂಜರ್ ರೈಲುಗಳಿಗೂ ತತ್ಕಾಲ್‌ ಸೇವೆ ಒದಗಿಸಲು ಇಲಾಖೆ ಚಿಂತಿಸಿದೆ.

Indian Railways

ಈ ಕುರಿತ ಪ್ರಸ್ತಾವನೆಯನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿದೆ. ತುರ್ತು ಪ್ರಯಾಣದ ಸಂದರ್ಭದಲ್ಲಿ ಜನರಿಗೆ ಅನುಕೂಲ ಮಾಡಿಕೊಡಲು ತತ್ಕಾಲ್‌ ಸೇವೆಯನ್ನು ಪ್ಯಾಸೆಂಜರ್ ರೈಲುಗಳಿಗೂ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ಯೋಜನೆ ಪ್ರಕಾರ ಸ್ಲಿಪರ್ ವ್ಯವಸ್ಥೆ ಮತ್ತು ಸೆಕೆಂಡ್‌ ಕ್ಲಾಸ್‌ (ಸಿಟ್ಟಿಂಗ್‌) ಸೀಟುಗಳನ್ನು ಹೊಂದಿರುವ ಪ್ಯಾಸೆಂಜರ್ ರೈಲುಗಳಿಗೆ ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಸೇವೆ ಲಭ್ಯವಾಗಲಿದೆ. ಈ ಯೋಜನೆಯ ಅನ್ವಯ ದರದ ನಿಗದಿ ಮಾಡುವ ಕಾರ್ಯ ಸದ್ಯ ನಡೆಯುತ್ತಿದೆ.

ಪ್ಯಾಸೆಂಜರ್ ರೈಲುಗಳಲ್ಲಿ ಶೇ.60ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಕರಿದ್ದಲ್ಲಿ ಮಾತ್ರ ಸೇವೆ ದೊರೆಯಲಿದೆ. ಸೆಕೆಂಡ್‌ ಕ್ಲಾಸ್‌ (ಸಿಟ್ಟಿಂಗ್‌)ಗೆ ತತ್ಕಾಲ್‌ ಟಿಕೆಟ್‌ ದರ ಮೂಲ ದರದ ಶೇ.10ರಷ್ಟು ಅಂದರೆ ಸುಮಾರು 10 ರಿಂದ 15 ರೂ.ವರೆಗೆ ಇರಲಿದೆ.

ಪ್ಯಾಸೆಂಜರ್ ಜೊತೆಗೆ ಎ.ಸಿ. ಮೊದಲನೇ ದರ್ಜೆ ಪ್ರಯಾಣಕ್ಕೂ ತತ್ಕಾಲ್‌ ಸೌಲಭ್ಯ ವಿಸ್ತಣರೆ ಮಾಡಲು ರೈಲ್ವೇ ಇಲಾಖೆ ಚಿಂತನೆ ನಡೆಸುತ್ತಿದೆ. ಈ ಯೋಜನೆಗಳು ಶೀಘ್ರವೇ ಪ್ರಯಾಣಿಕರಿಗೆ ಲಭ್ಯವಾಗಲಿವೆ.

English summary
Railways has decided to introduce the Tatkal scheme for booking of tickets in passenger trains.Till now, Tatkal is available for Mail and Express trains including premier services like Rajdhani, Duronto and Shatabdi. It has been decided to allow Tatkal booking in passenger trains so that travellers can use the facility in emergency, said Railway Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X