ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಎನ್‌ಕೌಂಟರ್‌ಗೆ ಸುಪ್ರೀಂಕೋರ್ಟ್‌ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಸೆ. 23 : ಪೊಲೀಸ್ ಎನ್‌ಕೌಂಟರ್‌ಗಳ ಕುರಿತು ಮಾರ್ಗ ಸೂಚಿಯೊಂದನ್ನು ಸಿದ್ಧಪಡಿಸಿ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ. ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳಿಗೆ ತಕ್ಷಣ ಬಡ್ತಿ ನೀಡ ಬಾರದು ಮತ್ತು ಪ್ರಶಸ್ತಿಗಳನ್ನು ನೀಡಬಾರದು ಎಂದು ಮಾರ್ಗಸೂಚಿಯಲ್ಲಿ ಕೋರ್ಟ್ ಸ್ಪಷ್ಟಪಡಿಸಿದೆ.

ದೇಶದಲ್ಲಿ ನಕಲಿ ಎನ್‍ಕೌಂಟರ್‍ಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದ ಮುಂಬೈನ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ್ತು ಎಚ್.ಎಸ್.ಬೇಡಿ ಅವರ ನ್ಯಾಯಪೀಠ ಈ ಆದೇಶವನ್ನು ನೀಡಿದೆ.

ನೂತನ ಮಾರ್ಗಸೂಚಿಯ ಅನ್ವಯ ಎನ್‌ಕೌಂಟರ್‌ಗಳನ್ನು ಕಡ್ಡಾಯವಾಗಿ ದಾಖಲು ಮಾಡಬೇಕು ಎಂದು ಹೇಳಿರುವ ಕೋರ್ಟ್, ಬರವಣಿಗೆ ಅಥವಾ ವಿದ್ಯುನ್ಮಾನ ರೂಪದಲ್ಲಿ ದಾಖಲು ಮಾಡಬೇಕು ಎಂದು ಸೂಚನೆ ನೀಡಿದೆ. [ಇಶ್ರತ್ ನಕಲಿ ಎನ್ ಕೌಂಟರ್: ಪೂರ್ಣ ವರದಿ]

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಈ ಮಾರ್ಗಸೂಚಿಯ ಕರಡನ್ನು ಸಿದ್ಧಪಡಿಸಿದ್ದು, ಸುಪ್ರೀಂಕೋರ್ಟ್‌ ಆದೇಶದ ಜೊತೆ ಈ ಮಾರ್ಗಸೂಚಿ ಎಲ್ಲಾ ರಾಜ್ಯಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನೆಯಾಗಲಿದೆ.

supreme court

ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ

* ಎನ್‌ಕೌಂಟರ್‌ಗಳನ್ನು ಕಡ್ಡಾಯವಾಗಿ ಆಯಾ ರಾಜ್ಯಗಳು ಸಿಐಡಿ ಮೂಲಕ ತನಿಖೆ ನಡೆಸಬೇಕು
* ಎನ್‌ಕೌಂಟರ್‌ಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಪೊಲೀಸ್‌ ಇಲಾಖೆ ಸುಪರ್ದಿಗೆ ನೀಡಬೇಕು
* ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿರುವ ಪೊಲೀಸರಿಗೆ ಕೂಡಲೆ ಬಡ್ತಿ, ಪ್ರಶಸ್ತಿಗಳನ್ನು ನೀಡಬಾರದು
* ತನಿಖೆ ಮುಗಿದ ಬಳಿಕ ಪ್ರಶಸ್ತಿ ಅಥವಾ ಬಡ್ತಿ ನೀಡಬಹುದು

English summary
In a landmark judgment by the Supreme Court of India, Court issued guidelines on police encounters which mandates filing of FIR in all such cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X