ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಪಕ್ಷ ಸ್ಥಾನ : ಕಾಂಗ್ರೆಸ್ ಮನವಿ ತಿರಸ್ಕಾರ

|
Google Oneindia Kannada News

ನವದೆಹಲಿ, ಆ.20 : ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಪಡೆಯವ ಕಾಂಗ್ರೆಸ್ ಪಕ್ಷದ ಪ್ರಯತ್ನ ಫಲನೀಡಿಲ್ಲ. ಕಾಂಗ್ರೆಸ್ ಬೇಡಿಕೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಮಂಗಳವಾರ ಅಧಿಕೃತವಾಗಿ ತಿರಸ್ಕರಿಸಿದ್ದಾರೆ. ಹಿಂದಿನ ನಿದರ್ಶನ ಮತ್ತು ಸಂಪ್ರದಾಯ ಆಧರಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಕಾಂಗ್ರೆಸ್ ಪಕ್ಷ ಬೇಡಿಕೆಯನ್ನು ತಿರಸ್ಕರಿಸಿರುವ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನ ನೀಡಲಾಗದು. ನನ್ನ ನಿರ್ಧಾರ ಹಿಂದಿನ ನಿದರ್ಶನಗಳನ್ನು ಆಧರಿಸಿದೆ ಮತ್ತು ಅಟಾರ್ನಿ ಜನರಲ್ ಮುಕುಲ್ ರೋಹತ ಅವರ ಸಲಹೆಯನ್ನು ಈ ಬಗ್ಗೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Sumitra Mahajan

ಕಳೆದ ತಿಂಗಳು ಶರದ್ ಪವಾರ್‌ ನೇತೃತ್ವದ ಎನ್‌ಸಿಪಿ ಸೇರಿದಂತೆ ಯುಪಿಎ ಮೈತ್ರಿಕೂಟದ 60 ಸಂಸದರ ಸಹಿ ಉಳ್ಳ ಮನವಿಯನ್ನು ಸ್ಪೀಕರ್‌ಗೆ ಸಲ್ಲಿಸಿದ್ದ ಕಾಂಗ್ರೆಸ್, ಪ್ರತಿಪಕ್ಷ ಸ್ಥಾನಕ್ಕೆ ಬೇಡಿಕೆ ಮುಂದಿಟ್ಟಿತ್ತು. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷದ ನಾಯಕರೆಂದು ಗುರುತಿಸುವಂತೆ ಮನವಿ ಮಾಡಿತ್ತು.

ಈ ಮನವಿ ಕುರಿತು ಪ್ರತಿಕ್ರಿಯೆ ನೀಡಿದ್ದ ಸುಮಿತ್ರಾ ಮಹಾಜನ್ ಅವರು, ಪ್ರತಿಪಕ್ಷ ಸ್ಥಾನ ನೀಡುವ ವಿಷಯವು ಸ್ಪೀಕರ್‌ ವಿವೇಚನೆಗೆ ಬರುವುದಿಲ್ಲ. ಈ ಸಂಬಂಧ ನೀತಿ ನಿಯಮಗಳನ್ನು ಸ್ಪೀಕರ್ ಪಾಲಿಸುತ್ತಾರೆ. ಅದರ ಹೊರತು ಪ್ರತಿಪಕ್ಷ ಸ್ಥಾನದ ನಿಯಮಗಳು ಬದಲಾಗಬೇಕು ಎಂದು ಯಾರಾದರೂ ಬಯಸುವುದಾದರೆ, ಇದಕ್ಕಾಗಿ ಸಮಿತಿಯನ್ನು ರೂಪಿಸಬೇಕು ಎಂದು ಹೇಳಿದ್ದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆದಿದ್ದರೂ, ಪ್ರತಿಪಕ್ಷ ಸ್ಥಾನಕ್ಕಾಗಿ ಪ್ರಯತ್ನ ನಡೆಸಿತ್ತು. ಚುನಾವಣೆಗೆ ಮೊದಲೇ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ರೂಪುಗೊಂಡಿದ್ದು, ಶೇ. 10ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಹೊಂದಿದೆ. ಆದ್ದರಿಂದ ಪ್ರತಿಪಕ್ಷ ಸ್ಥಾನ ನೀಡಬೇಕು ಎಂದು ಹಕ್ಕು ಮಂಡಿಸಿತ್ತು.

ಖರ್ಗೆ ಪ್ರತಿಕ್ರಿಯೆ : ಸ್ಪೀಕರ್ ಪ್ರತಿಪಕ್ಷ ಸ್ಥಾನದ ಮನವಿಯನ್ನು ತಿರಸ್ಕರಿಸುವ ಬಗ್ಗೆ ಹೇಳಿಕೆ ನೀಡಿರುವ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಪಕ್ಷದ ಹೈಕಮಾಂಡ್ ಜತೆ ಈ ವಿಷಯ ಚರ್ಚಿಸುತ್ತೇನೆ. ಪ್ರತಿಪಕ್ಷ ನಾಯಕನಾಗಿ ಗುರುತಿಸಿಕೊಳ್ಳುವುದು ಒಂದು ವಿಷಯವಾದರೆ, ನಾಯಕನಾಗಿ ಕೆಲಸ ಮಾಡುವುದು ಮತ್ತೊಂದು ಸಂಗತಿ ಎಂದು ಹೇಳಿದ್ದಾರೆ.

English summary
Lok Sabha speaker Sumitra Mahajan on Tuesday formally rejected the Congress party’s demand for the post of leader of the opposition (LoP) in the Lower House of Parliament because the party doesn’t have enough representatives in the Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X