ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಕು ಕಾರ್ಯಾಚರಣೆ ಕಾನೂನುಬಾಹಿರ: ಸು.ಕೋರ್ಟ್

By Srinath
|
Google Oneindia Kannada News

ನವದೆಹಲಿ, ಏ. 25: ಕುಟುಕು ಕಾರ್ಯಾಚರಣೆಯು ದುರುಪಯೋಗ ಆಗುತ್ತಿರುವುದನ್ನು ಮನಗಂಡ ಸುಪ್ರೀಂ ಕೋರ್ಟ್, sting operation ಕಾನೂನುಬಾಹಿರ ಎಂದು ಖಡಕ್ ತೀರ್ಪು ನೀಡಿದೆ.

ವ್ಯಕ್ತಿಯನ್ನು ಪ್ರಲೋಭೆಗೆ ಒಡ್ಡುತ್ತಾ ಕುಟುಕು ಕಾರ್ಯಾಚರಣೆ ನಡೆಸುವುದರ ವಿರುದ್ಧ ಸಂಶಯ/ ಅನುಮಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, sting operationಗಳನ್ನು ಕಾನೂನು ಚೌಕಟ್ಟು ವ್ಯಾಪ್ತಿಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಮೆರಿಕ ಮತ್ತಿತರ ಕೆಲ ರಾಷ್ಟ್ರಗಳಲ್ಲಿ ಸೀಮಿತ ರೀತಿಯಲ್ಲಿ sting operationಗೆ ಕಾನೂನು ಮಾನ್ಯತೆ ಇದೆ. ಆದರೆ ಅದನ್ನು ಭಾರತದಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ಅವರು ಈ ಸಂಬಂಧ ತೀರ್ಪು ನೀಡಿದ್ದು, ಸಾರ್ವಜನಿಕ ಹಿತಾಸಕ್ತಿ ಆಧಾರದಲ್ಲಿ ಕುಟುಕು ಕಾರ್ಯಾಚರಣೆಗೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಇದಕ್ಕೆ ಸಂಬಂಧಪಟ್ಟಂತೆ ಒಂದೊಂದೇ ಪ್ರಕರಣವನ್ನು ಕೂಲಂಕಶವಾಗಿ ಅಧ್ಯಯನ ಮಾಡುತ್ತಾ ಹೋದರೆ ಮೂಲ ಆಶಯಕ್ಕೆ ವಿರುದ್ಧವಾಗಿ, ಅದರ ದುರುಪಯೋಗವಾಗಿರುವುದು ಕಂಡುಬರುತ್ತದೆ. ಹಾಗಾಗಿ ಅದಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುಟುಕು ಕಾರ್ಯಾಚರಣೆಯು ವಾಸ್ತವವಾಗಿ ಮರಾಮೋಸದ ಕಾರ್ಯಾಚರಣೆಯಾಗಿದೆ. ಇದರಲ್ಲಿ ಅಪರಾಧಿಯನ್ನು ಹಿಡಿಯುವ ಸದುದ್ದೇಶವೇ ಇದ್ದರೂ ಕೆಲವು ನೈತಿಕ ಪ್ರಶ್ನೆಗಳನ್ನು ಹುಟ್ಟಿಹಾಕುತ್ತದೆ. ಬಾಧಿತ ವ್ಯಕ್ತಿಯನ್ನು (ಸಾಬೀತು ಆಗುವವರೆಗೂ ಅಮಾಯಕನೇ) ಅಪರಾಧ ಮಾಡುವಂತೆ ಪ್ರೇರೇಪಿಸುವ/ಪ್ರಲೋಭೆಗೊಡ್ಡುವಂತಹ ಕ್ರಿಯೆ ಇದಾಗಿದೆ.

Supreme Court Chief Justice P Sathasivam

ಸಂಪೂರ್ಣ ಕೃತ್ರಿಮ ಮತ್ತು ಗೌಪ್ಯತೆಯಿಂದ ನಡೆಸುವ ಈ ಕಾರ್ಯಾಚರಣೆಯು ಆರೋಪಿಯ ಪರ ಅನೇಕ ಸಂದೇಹಗಳನ್ನು ಸೃಷ್ಟಿಸುತ್ತದೆ. ಇಷ್ಟಕ್ಕೂ ಇದರಲ್ಲಿ ಆರೋಪಿಯನ್ನು ಎಷ್ಟರಮಟ್ಟಿಗೆ ಹೊಣೆಯಾಗಿಸಲು ಸಾಧ್ಯ. ಏಕೆಂದರೆ ಪ್ರಲೋಭೆ/ ಆಸೆ ತೋರಿಸದಿದ್ದರೆ ಆರೋಪಿಯು ಆ ಅಪರಾಧವನ್ನು ಮಾಡುತ್ತಲೇ ಇರಲಿಲ್ಲವೇನೋ? ಎಂಬ ಮೂಲಭೂತ ಪ್ರಶ್ನೆಯನ್ನೇ ಎತ್ತಿದ್ದಾರೆ ಮುಖ್ಯ ನ್ಯಾಯಮೂರ್ತಿ ಸದಾಶಿವಂ ಅವರು.

ಅಂತಿಮವಾಗಿ, ಹೀಗೆ ಪ್ರಲೋಭೆಗೊಡ್ಡುವ/ ಅಪರಾಧ ಮಾಡುವ ಮನ:ಸ್ಥಿತಿಗೆ ತಳ್ಳುವ ಕುಟುಕು ಕಾರ್ಯಾಚರಣೆಯ ವ್ಯಕ್ತಿಯಿಂದಲೂ (sting operator) ಅಪರಾಧ ಎಸಗಿದಂತಾಗುವುದಿಲ್ಲವೇ? ಆತನನ್ನೂ ಜವಾಬ್ದಾರಿಯನ್ನಾಗಿಸಬಹುಲ್ಲವಾ? ಎಂದೂ ಚೀಫ್ ಜಸ್ಟೀಸ್ ಸದಾಶಿವಂ ಪ್ರಶ್ನಿಸಿದ್ದಾರೆ. ಈ ಬಗ್ಗೆ ಆರೋಗ್ಯವಂತ ಚರ್ಚೆಯಾಗಲಿ.

English summary
Sting Operations not Legal Says Supreme Court Chief Justice P Sathasivam. Being essentially a deceptive operation, though designed to nab a criminal, a sting operation raises certain moral and ethical questions. The victim, who is otherwise innocent, is lured into committing a crime on the assurance of absolute secrecy and confidentiality of the circumstances raising the potential question as to how such a victim can be held responsible for the crime which he would not have committed, but for the enticement felt CJI
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X