ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SMS ಕಳಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ತಿಳಿಯಿರಿ

By Kiran B Hegde
|
Google Oneindia Kannada News

ನವದೆಹಲಿ, ಜ. 8: ಜನರು ಮತದಾನಕ್ಕೆ ತೆರಳಿದಾಗ ತಮ್ಮ ಹೆಸರಿಲ್ಲದಿದ್ದರೆ ಪರದಾಡುವ ದೃಷ್ಯ ಪ್ರತಿ ಚುನಾವಣೆಯಲ್ಲಿ ಕಾಣಸಿಗುತ್ತದೆ. ಆದ್ದರಿಂದಲೇ ಮತದಾರರ ಪಟ್ಟಿಯಲ್ಲಿ ಹೆಸರಿರುವ ಕುರಿತು ಮೊದಲೇ ಖಚಿತಪಡಿಸಿಕೊಳ್ಳಿ ಎಂದು ಚುನಾವಣಾಧಿಕಾರಿಗಳು ಸೂಚಿಸುತ್ತಾರೆ. ಈಗ, ನವದೆಹಲಿಯಲ್ಲಿ ಎಸ್ಎಂಎಸ್ ಕಳಿಸಿದರೆ ಮಾಹಿತಿ ನೀಡುವ ಸೌಲಭ್ಯ ಕಲ್ಪಿಸಲಾಗಿದೆ.

mobile

ನವದೆಹಲಿಯಲ್ಲಿ ಹತ್ತಿರ ಬರುತ್ತಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರು ತಮ್ಮ ಹೆಸರು ಖಚಿತಪಡಿಸಿಕೊಳ್ಳಲು ತಮ್ಮ ಮತದಾರರ ಕಾರ್ಡ್‌ ಸಂಖ್ಯೆಯನ್ನು 77382 99899 ಅಥವಾ 1950 ಕ್ಕೆ ಎಸ್ಎಂಎಸ್ ಮಾಡಿದರೆ ಸಾಕು. ಅವರಿಗೆ ದೃಢೀಕರಣ ಸಂದೇಶ ಬರುತ್ತದೆ. ಇದಲ್ಲದೆ, ಮತದಾರರು www.ceodelhi.gov.in ವೆಬ್ ಸೈಟ್‌ನಲ್ಲಿ ಕೂಡ ಹೆಸರು ಪರೀಕ್ಷಿಸಿ ದೃಢಪಡಿಸಿಕೊಳ್ಳಬಹುದು ಎಂದು ನವದೆಹಲಿಯ ಮುಖ್ಯ ಚುನಾವಣೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. [9 ಲಕ್ಷ ವಿದ್ಯುನ್ಮಾನ ಮತಯಂತ್ರಗಳು ಗುಜರಿಗೆ]

ಅಲ್ಲದೆ, ಚುನಾವಣೆ ಆಯೋಗದ ಚಟುವಟಿಕೆಗಳ ವಿವರಗಳನ್ನು ಆಯೋಗದ ಫೇಸ್ ಬುಕ್ ಪುಟದಲ್ಲಿಯೂ ನೀಡಲಾಗುವುದು. ಅಲ್ಲಿ ಮತದಾರರು ಅಭಿಪ್ರಾಯ ವ್ಯಕ್ತಪಡಿಸಬಹುದು. ಸಾಮಾಜಿಕ ಜಾಲವನ್ನು ಬಳಸುವ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯ ನೀಡಲಾಗಿದೆ. ನವದೆಹಲಿಯಲ್ಲಿ ಶೇ. 1.31ರಷ್ಟು ಜನರು ಯುವ ಮತದಾರರು ಎಂದು ಚುನಾವಣಾ ಆಯೋಗ ತಿಳಿಸಿದೆ.

English summary
Delhi's Chief Electoral Office has launched an SMS service facility to help eligible Delhiites know if their names are registered in the electoral roll. Voters can also check their name in the voters' list on the link www.ceodelhi.gov.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X