ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಾರಾಮ್ ಬಾಪುಗೇಕೆ ಜಾಮೀನು ನೀಡಬೇಕು?

By Mahesh
|
Google Oneindia Kannada News

ನವದೆಹಲಿ, ಸೆ.23: ಅಪ್ರಾಪ್ತ ವಯಸ್ಕ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತು ಜೈಲು ಸೇರಿರುವ ಸ್ವಯಂಘೋಷಿತ ದೇವಮಾನ ಅಸಾರಾಮ್ ಬಾಪು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಬಾಪು ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಸುಪ್ರೀಂಕೋರ್ಟಿನಲ್ಲಿ ಮಂಗಳವಾರ ತಿರಸ್ಕಾರಗೊಂಡಿದೆ. ಅಸಾರಾಮ್ ಬಾಪುಗೇಕೆ ಜಾಮೀನು ನೀಡಬೇಕು? ಎಂದು ಕೋರ್ಟ್ ಪ್ರಶ್ನಿಸಿದೆ.

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜೋಧಪುರದ ಕೋರ್ಟ್ ಅಸಾರಾಮ್ ಬಾಪು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಜಾಮೀನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಬಾಪು ಬನ್ ಗಯಾ ದೇವಮಾನವ]

Rape: Setback for Godman Asaram Bapu; NO bail, only jail, says Supreme Court

72 ವರ್ಷ ವಯಸ್ಸಿನ ಗುರು ಅಸಾರಾಮ್ ಬಾಪು ಅವರು 16 ವರ್ಷ ವಯಸ್ಸಿನ ಯುವತಿ ಮೇಲೆ ಆಗಸ್ಟ್ 20, 2013ರಂದು ಜೋಧಪುರದ ಆಶ್ರಮದಲ್ಲಿ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದಾರೆ. ಬಾಪು ಅವರಿಗೆ ಜಾಮೀನು ನೀಡುವ ಯಾವುದೇ ಆತುರ ಕೋರ್ಟಿಗಿಲ್ಲ. ಇನ್ನೂ ವಿಚಾರಣೆ ಮುಗಿದಿಲ್ಲ. ಸಾಕ್ಷಿಗಳು ವಿಚಾರಣೆಗೊಳಲ್ಪಟ್ಟಿಲ್ಲ ಈ ಹಂತದಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟಿನ ನ್ಯಾ. ಟಿಎಸ್ ಠಾಕೂರ್ ಹೇಳಿದ್ದಾರೆ.

ಅಸಾರಾಂ ಹಾಗೂ ನಾರಾಯಣ ಸಾಯಿ ವಿರುದ್ಧ ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿತ್ತು. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. [ಅಸಾರಮ್ ಬಾಪು 10 ವಿವಾದಗಳು]

ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಲೈಂಗಿಕ ಕಿರುಕುಳ, ಅಕ್ರಮ ಬಂಧನ, ಕಾನೂನು ಬಾಹಿರ ಒಟ್ಟುಸೇರುವಿಕೆ, ಶಸ್ತ್ರಾಸ್ತ್ರ, ಮಾರಕ ಆಯುಧಗಳಿಂದ ಬೆದರಿಸಿರುವುದು ಎಂಬಿತ್ಯಾದಿ ಆರೋಪಗಳನ್ನು ಬಾಪೂ ಮೇಲೆ ಹೊರೆಸಲಾಗಿದೆ.(ಪಿಟಿಐ)

English summary
In a latest setback for self-styled godman Asaram Bapu, the Supreme Court on Tuesday, Sept 23 rejected his bail plea in connection with a rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X