ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಪ್ರಯಾಣ ದರ ಏರಿಕೆಗೆ ಅಸ್ತು: ಸದಾನಂದ ಗೌಡ

By Srinath
|
Google Oneindia Kannada News

ನವದೆಹಲಿ, ಜೂನ್ 20: ನಿರೀಕ್ಷೆಯಂತೆ ರೈಲ್ವೆ ಪ್ರಯಾಣ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದೆ. ಜೂನ್ 25ರಿಂದ ದರ ಏರಿಕೆ ಅನ್ವಯವಾಗಲಿದೆ.

ರೈಲ್ವೆ ಸಚಿವ ಡಿವಿ ಸದಾನಂದ ಗೌಡರು ತಮ್ಮ ಚೊಚ್ಚಲ ಬಜೆಟ್ ಮಂಡನೆಗೂ ಮುನ್ನ ಪ್ರಯಾಣ ದರದ ಜತೆಜತೆಗೆ ಸಾಗಣೆ ದರವನ್ನೂ ಏರಿಸಿದ್ದಾರೆ. ಪ್ರಯಾಣ ದರ ಶೇ. 14.2 ಏರಿಕೆ ಮಾಡಲಾಗಿದೆ. ಸರಕು ಸಾಗಣೆ ದರವನ್ನು ಶೇ. 6.5 ಏರಿಸಲಾಗಿದೆ. ಗಮನಾರ್ಹವೆಂದರೆ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್ಟಿನಲ್ಲಿ ಪ್ರಯಾಣ ದರವನ್ನು ಶೇ. 10ರಷ್ಟು ಏರಿಸಿದ್ದರು.

Railway passenger train fare hiked- Railway Minister DV Sadananda Gowda
ಆದರೆ ಅದು ಜಾರಿಗೆ ಬಂದಿರಲಿಲ್ಲ. ಹಾಗಾಗಿ, ಈ ಬಾರಿ ತಾವು ಮಂಡಿಸುವ ಪೂರ್ಣ ಪ್ರಮಾಣದ ಬಜೆಟ್ ವರೆಗೂ ಕಾಯದೆ ರೈಲ್ವೆ ಸಚಿವ ಡಿವಿ ಸದಾನಂದ ಗೌಡರು ಪ್ರಯಾಣ ದರ ಏರಿಕೆಗೆ ಅಂಕಿತ ಹಾಕಿದ್ದಾರೆ.

ರೈಲ್ವೆ ಸಚಿವ ಸದಾನಂದ ಗೌಡರು ತಾವು ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ರೈಲ್ವೆ ಪ್ರಯಾಣ ದರ ಏರಿಕೆ ಬಗ್ಗೆ ಸುಳಿವು ನೀಡಿದ್ದರು. ಬಂಡವಾಳ ಹೆಚ್ಚಳ ಮಾಡಿಕೊಳ್ಳಲು ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದರು. ರೈಲ್ವೆ ಮಂಡಳಿ ಸಲ್ಲಿಸಿದ್ದ ದರ ಏರಿಕೆ ಪ್ರಸ್ತಾವನೆಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದರು.

English summary
Railway passenger train fare hiked- Railway Minister DV Sadananda Gowda. The railway board has increased a 14.2% hike in passenger fares along with a 6.5% increase in freight rates .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X