ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಭಾಷಣ ಕೇಳಲು ಜನ ಸಾಮಾನ್ಯರಿಗೆ ಎಂಟ್ರಿ'

By Mahesh
|
Google Oneindia Kannada News

ನವದೆಹಲಿ, ಆ.10: ಅಧಿಕಾರಕ್ಕೆ ಬಂದಾಗಿನಿಂದಲೂ ಹಲವು ಪ್ರಥಮಗಳ ಹರಿಕಾರ ಎನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವ ಭಾಷಣದ ವೇಳೆ ಹೊಸ ಇತಿಹಾಸ ನಿರ್ಮಿಸುತ್ತಿದ್ದಾರೆ. ಪ್ರಧಾನಿ ಭಾಷಣವನ್ನು ಕಣ್ಣಾರೆ ಕಾಣುವ ಯೋಗವನ್ನು ಜನಸಾಮಾನ್ಯರಿಗೆ ಇದೇ ಮೊದಲ ಬಾರಿಗೆ ಒದಗಿಸಲಾಗಿದೆ.

ಸ್ವಾತಂತ್ರೋತ್ಸವ ದಿನಾಚರಣೆಗೆ ದೆಹಲಿ ಮದುವಣಗಿತ್ತಿಯಂತೆ ಸಜ್ಜಾಗುತ್ತಿದೆ. ಸ್ವತಂತ್ರ ಹಬ್ಬದ ದಿನದಂದು ಪ್ರಧಾನಿಯಾಗಿ ಮೋದಿ ಅವರ ಚೊಚ್ಚಲ ಭಾಷಣ ಕೇಳಲು ಇಡೀ ವಿಶ್ವಕ್ಕೆ ಕಾದಿದೆ. ಈ ನಡುವೆ ಸುಮಾರು 10,000 ಮಂದಿಗೆ ಕೆಂಪುಕೋಟೆಯಲ್ಲಿ ಉಪಸ್ಥಿತರಿರುವ ಅವಕಾಶವನ್ನು ಮೋದಿ ಸರ್ಕಾರ ಒದಗಿಸುತ್ತಿದೆ.

PM Modi's 1st I-Day speech: 10,000 seats for commoners at Red Fort

ಇಷ್ಟೇ ಅಲ್ಲ, ದೆಹಲಿ ಸಾರಿಗೆ ಸಂಸ್ಥೆ(ಡಿಟಿಸಿ) ಆಗಸ್ಟ್ 15 ರಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆ ತನಕ ಸಾರ್ವಜನಿಕರನ್ನು ಉಚಿತವಾಗಿ ಕರೆದೊಯ್ಯಲಿದೆ. ಸಾರ್ವಜನಿಕರು ದೆಹಲಿಯ ವಿವಿಧೆಡೆಯ ಸ್ವತಂತ್ರ ಸಂಭ್ರಮವನ್ನು ಕಾಣುವ ಅವಕಾಶ ನೀಡಲಾಗುತ್ತಿದೆ ಎಂದು ದೆಹಲಿ ಸಾರಿಗೆ ಸಂಸ್ಥೆಯ ವಕ್ತಾರ ಆರ್ ಎಸ್ ಮಿನ್ಹಾಸ್ ಹೇಳಿದ್ದಾರೆ.

10,000 ಸಾರ್ವಜನಿಕರು ಕೂರಬೇಕಾದ ಸ್ಥಳ ಈಗಾಗಲೆ ನಿಗದಿಯಾಗಿದೆ. ಮೊಘಲರ ಕಾಲದ ಸ್ಮಾರಕದ ಬಲ ಭಾಗದಲ್ಲಿ ತ್ರಿವರ್ಣ ದಿರಿಸಿನಲ್ಲಿ ಶಾಲಾ ಮಕ್ಕಳು ಕೂರುವ ಸ್ಥಳದ ಪಕ್ಕದಲ್ಲಿ ಸಾರ್ವಜನಿಕರು ಉಪಸ್ಥಿತರಿರಬಹುದಾಗಿದೆ.

ಸಾರ್ವಜನಿಕರು ಮೊಬೈಲ್ ಫೋನ್, ಕೆಮೆರಾ, ಬೈನಾಕುಲರ್ಸ್, ಹ್ಯಾಂಡ್ ಬ್ಯಾಂಗ್, ಬ್ರೀಫ್ ಕೇಸ್, ಸಿಗರೇಟ್ ಲೈಟರ್, ಟ್ರಾನ್ಸಿಸ್ಟರ್, ಟಿಫಿನ್ ಬಾಕ್ಸ್, ನೀರಿನ ಬಾಟಲ್, ಲಂಚ್ ಬಾಕ್ಸ್, ಕನ್ನಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಪ್ರಧಾನಿ ಮೋದಿ ಅವರಿಗೆ ಉಗ್ರರ ಬೆದರಿಕೆ ಇರುವ ಕಾರಣ ಹಲವು ಹಂತದ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಭದ್ರತಾ ಸಿಬ್ಬಂದಿಗಳಿಂದ ತೀವ್ರ ತಪಾಸಣೆ ನಂತರವೇ ಜನರನ್ನು ಒಳಗೆ ಕಳಿಸಲಾಗುತ್ತದೆ.(ಪಿಟಿಐ)

English summary
In a first, around 10,000 common people will be present at the historic Red Fort to witness Prime Minister Narendra Modi deliver his maiden Independence Day address to the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X