ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದರ 1 ರೂ. ಇಳಿಕೆ, ಡಿಸೇಲ್ ಏರಿಕೆ

|
Google Oneindia Kannada News

ನವದೆಹಲಿ, ಆ.1 : ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು 1.09 ರೂ. ಕಡಿತಗೊಳಿಸಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬಂದಿದೆ. ಡೀಸೆಲ್ ದರ ಪ್ರತಿ ಲೀಟರ್ ಗೆ 56 ಪೈಸೆ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ದರಗಳ ಏರಿಳಿತಗಳ ಅನುಸಾರ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದ್ದು ಲೀಟರ್ ಗೆ 1.09 ರೂ. ಇಳಿಕೆಯಾಗಿದೆ. ಡೀಸೆಲ್ ಬೆಲೆಯನ್ನು 56 ಪೈಸೆ ಹೆಚ್ಚಿಸಲಾಗಿದ್ದು ಗುರುವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬಂದಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

Petrol

ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಗೃಹ ಬಳಕೆಯ ಸಬ್ಸಿಡಿಯೇತರ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ದರದಲ್ಲೂ 2.50 ರೂ. ಇಳಿಕೆಯಾಗಿದೆ. ವರ್ಷದ 12 ಸಿಲಿಂಡರ್ ಗಳ ಕೋಟಾ ಮುಗಿದ ಬಳಿಕ ಖರೀದಿಸುವ ಹೆಚ್ಚುವರಿ 14.2 ಕೆಜಿ ಸಿಲಿಂಡರ್ ಬೆಲೆ 2.50 ರೂ. ಅಗ್ಗವಾಗಲಿದೆ.

ಈ ದರ ಇಳಿಕೆಯಿಂದಾಗಿ ಮೂರು ತಿಂಗಳ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಮಾಡಿದಂತಾಗಿದೆ. ಕಳೆದ ಏಪ್ರಿಲ್ 15ರಂದು ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 70 ಪೈಸೆ ಇಳಿಸಿತ್ತು. ಇದಾದ ನಂತರ ಜೂನ್ 30ರಂದು ಪೆಟ್ರೋಲ್ 1.69 ರೂ. ಹಾಗೂ ಡೀಸೆಲ್ 50 ಪೈಸೆ ಏರಿಕೆಯಾಗಿತ್ತು. [ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ]

ಬೆಂಗಳೂರಿನಲ್ಲಿ ದರ ಎಷ್ಟು : ನಗರದ ಒಳ ಭಾಗದ ಬಂಕ್‌­ ಗಳಲ್ಲಿ ಈ ಹಿಂದೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ 81.11 ಇತ್ತು. ಇದೀಗ 79.49 ರೂ ಆಗಿದೆ. ನಗರದ ಹೊರ ಭಾಗದ ಬಂಕ್‌ ಗಳಲ್ಲಿ ರೂ 80.56 ಇದ್ದ ಲೀಟರ್ ಪೆಟ್ರೋಲ್ ದರ, ಈಗ ರೂ 78.94ಕ್ಕೆ ಇಳಿಕೆ­ಯಾಗಿದೆ.

English summary
Petrol price cut by Rs 1.09 per liter, while diesel rates were hiked by 56 paise a liter. The revisions will be effective from Friday midnight said, Indian Oil Corp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X