ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಯಾಸ್ ದರ ಅಲ್ಪ ಇಳಿಕೆ: ಗ್ರಾಹಕ ಸ್ವಲ್ಪ ಖುಷ್!

By Srinath
|
Google Oneindia Kannada News

non-subsidised-cooking-gas-rate-reduced-as-crude-oil-price-lowered-rs-strengthened
ನವದೆಹಲಿ, ಜೂನ್ 3: ನೂತನ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರೂಪಾಯಿ ಮೌಲ್ಯ ಚೇತರಿಕೆ ಕಾಣುತ್ತಿರುವ ಫಲವಾಗಿ ಅಂತಾರಾಷ್ಟ್ರೀಯ ವಿನಿಮಯಗಳ ಮೇಲಿನ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಅದರಲ್ಲೂ ಕಚ್ಚಾ ತೈಲ ಆಮದು ಮೇಲಿನ ಹೊರೆ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. ಜತೆಗೆ ವಿಶ್ವ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯೂ ಸ್ವಲ್ಪ ಕಮ್ಮಿಯಾಗಿದೆ.

ಇದರ ಫಲವನ್ನು ದೇಶೀಯ ತೈಲ ಕಂಪನಿಗಳು ನೇರವಾಗಿ ಅಡುಗೆ ಅನಿಲ ಗ್ರಾಹಕರಿಗೆ ಉಣಬಡಿಸಿದೆ. ಹಾಗಾಗಿ ಸಬ್ಸಿಡಿ ನಂತರದ ಗ್ಯಾಸ್ ಸಿಲಿಂಡರಿನ ಬೆಲೆಯನ್ನು ಲೆಕ್ಕಾಚಾರ ಹಾಕಿ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ.

ಅಂದರೆ ವಾರ್ಷಿಕ 12 ಸಿಲಿಂಡರುಗಳನ್ನು ಬಳಸಿದ ಬಳಿಕ ಗ್ರಾಹಕರು ಖರೀದಿಸುವ ಸಬ್ಸಿಡಿಯೇತರ ಸಿಲಿಂಡರಿನ ಬೆಲೆಯನ್ನು 24 ರೂ. ನಷ್ಟು ಕಡಿಮೆ ಮಾಡಿದೆ. ದಿಲ್ಲಿಯಲ್ಲಿ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರಿನ ಬೆಲೆ ಈ ಹಿಂದೆ 928.50 ರೂ. ಇತ್ತು. ಅದೀಗ 905 ರೂ. ಗೆ ಲಭ್ಯವಾಗಲಿದೆ. ಅದೇ ವಾರ್ಷಿಕ 12 ಸಿಲಿಂಡರುಗಳ ಸಬ್ಸಿಡಿ ಗ್ಯಾಸಿನ ಬೆಲೆ ಸಿಲಿಂಡರಿಗೆ 414 ರೂ. ಇದೆ.

LPG ಬಾಬತ್ತಿನಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ನಷ್ಟದ ಪ್ರಮಾಣ ಒಂದು ಸಿಲಿಂಡರಿಗೆ 449.14 ರೂ ಇದ್ದದ್ದು 432.71 ರೂ. ಗೆ ಕುಗ್ಗಿದೆ ಎಂದು ಇಂಡಿಯನ್ ಆಯಿಲ್ ಕಂಪನಿ ಹೇಳಿದೆ.

ಪ್ರತಿ ತಿಂಗಳ ಮೊದಲ ದಿನ ಹಿಂದಿನ ತಿಂಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯ ಏರಿಳಿತವನ್ನು ಅನುಸರಿಸಿ ದೇಶೀಯ ಸರಕಾರಿ ತೈಲ ಕಂಪನಿಗಳು ವಿಮಾನದ ಇಂಧನ ಮತ್ತು ಸಬ್ಸಿಡಿಯೇತರ ಗ್ಯಾಸ್ ಸಿಲಿಂಡರಿನ ಬೆಲೆಯನ್ನು ನಿರ್ಣಯಿಸುತ್ತದೆ. ಅಂದಹಾಗೆ ವಿಮಾನ ಇಂಧನದ ಬೆಲೆಯೂ ಈ ಬಾರಿ ತಗ್ಗಿದೆ.

English summary
Non-subsidised cooking gas rate reduced thanks to crude oil price reduction and rupee strengthen. With a lowering of international crude oil prices and strengthening of the rupee, oil marketing companies (OMCs) Monday cut the price of non-subsidised cooking gas, which customers buy after using up their quota of 12 subsidised cylinders, by Rs. 23.50 per cylinder. OMCs revise jet fuel and non-subsidised cooking gas prices on the first of every month, based on the average international prices in the preceding month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X