ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PF ಹಿಂಪಾವತಿ ಇನ್ನು ಆನ್‌ ಲೈನ್ ಮೂಲಕ!

By Srinath
|
Google Oneindia Kannada News

ನವದೆಹಲಿ. ಏ. 18: ಇದೇ ಸೆಪ್ಟೆಂಬರಿನಿಂದ ತನ್ನ ಎಲ್ಲಾ ಚಂದಾದಾರರಿಗೂ ಆನ್‌ ಲೈನ್ ಮೂಲಕವೇ ಸರ್ವ ಸೇವೆಗಳನ್ನು ಒದಗಿಸಲು ನೌಕರರ ಭವಿಷ್ಯ ನಿಧಿ ಮಂಡಳಿಯು (ಇಪಿಎಫ್ಒ‌) ಸರ್ವ ಸಜ್ಜಾಗಿದೆ.

ಅಂದರೆ Employees' Provident Fund Organisation ಸಂಸ್ಥೆಯು ಸೆ. 1ರಿಂದ ತನ್ನೆಲ್ಲ ವಹಿವಾಟು ಪಾವತಿಗಳನ್ನು ನೇರವಾಗಿ ಇ-ಪಾವತಿ ಮೂಲಕ (e-payment) ನೆರವೇರಿಸಲಿದೆ. ಸದ್ಯಕ್ಕೆ ಶೇ. 93ರಷ್ಟು ಸೌಲಭ್ಯಗಳು ಆನ್‌ ಲೈನ್ ಮೂಲಕ ವರ್ಗಾವಣೆಯಾಗುತ್ತಿವೆ.

no-cheque-provident-fund-withdrawal-through-online-banking-epfo
ಇನ್ನು ಮುಂದೆ, ಪಿಎಫ್ ಹಿಂತೆಗೆತ ಮೊತ್ತವನ್ನೂ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇನ್ನು, ಚೆಕ್ ಅಥವಾ ಬ್ಯಾಂಕ್ ಡ್ರಾಫ್ಟ್‌ ಅಗತ್ಯ ಇಲ್ಲ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯು ಸುಮಾರು 44 ಲಕ್ಷ ಪಿಂಚಣಿದಾರರಿಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಾವತಿಸುತ್ತದೆ. ಪಿಂಚಣಿ ಮಾಹಿತಿಗಳ ಡಿಜಿಟಲೀಕರಣ ಮೂರು-ನಾಲ್ಕು ತಿಂಗಳಿನಲ್ಲಿ ಮುಕ್ತಾಯವಾಗಲಿದೆ. ಅದಾಗುತ್ತಿದ್ದಂತೆ ಪ್ರತಿ ತಿಂಗಳೂ ಪಿಂಚಣಿಯನ್ನೂ ಸಹ ಆನ್‌ ಲೈನ್ ಮೂಲಕ ಪಡೆಯಬಹುದಾಗಿದೆ.

ಆನ್‌ ಲೈನ್ ಪದ್ಧತಿಯಲ್ಲಿ ಹಣ ಪಾವತಿಸುವುದರಿಂದ ಸಂಸ್ಥೆಯ ಕಾರ್ಯದಕ್ಷತೆ ಹೆಚ್ಚಲಿದ್ದು, ಪಾರದರ್ಶಕತೆಯೂ ಏರಲಿದೆ ಮತ್ತು ಕಾಗದ ಪತ್ರಗಳ ಹೊರೆ ಗಣನೀಯವಾಗಿ ತಗ್ಗಲಿದೆ. (PTI)

English summary
No cheque- Provident Fund withdrawal through online banking- EPFO. The Employees' Provident Fund Organisation (EPFO) has decided to make all payments to its beneficiaries through electronic mode from September this year, including provident fund claims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X