ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ ವೋಟರ್ ಚುನಾವಣಾ ಸಮೀಕ್ಷೆಗಳು ಸುಳ್ಳೋ ಸುಳ್ಳು

By Srinath
|
Google Oneindia Kannada News

News Express Television sting proclaims Poll Surveys bogous
ನವದೆಹಲಿ, ಫೆ.26- 'ಚುನಾವಣೆ ಸಮೀಕ್ಷೆಗಳು ನಿಜವಲ್ಲ. ಅವು ನಂಬಿಕಾರ್ಹ ಅಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಅದು ಅಷ್ಟೂ ಮತದಾರರನ್ನು ಪ್ರತಿನಿಧಿಸುವುದಿಲ್ಲ' ಎಂದು ರಾಜಕೀಯ ಪಕ್ಷಗಳು ಬೊಂಬಡಾ ಹೊಡೆಯುತ್ತಿರುವ ಹೊತ್ತಿನಲ್ಲೇ ಅವರ ನಂಬಿಕೆಗೆ ನೀರೆರೆಯುವಂತಹ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಸಮೀಕ್ಷೆಗಳಿಗೆ ಮಸಿ: ಸಮೀಕ್ಷಾ ಸಂಸ್ಥೆಗಳ ನೆರವಿನೊಂದಿಗೆ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ಪ್ರಕಟಿಸುವ ಚುನಾವಣಾ ಪೂರ್ವ ಸಮೀಕ್ಷೆಗಳು ಕೃತ್ರಿಮ ಎಂಬುದು ಈಗ ಸಾಬೀತಾಗಿದೆ. ಹಾಗಾಗಿ ಚುನಾವಣಾ ಸಮೀಕ್ಷೆಗಳ ಭವಿಷ್ಯ ಈಗ ಮಸುಕಾಗಿವೆ. ಜತೆಗೆ ಇದುವರೆಗಿನ ಸಮೀಕ್ಷೆಗಳು ಮುಂದಿನ ಮಹಾ ಸಮರದ ಮೇಲೆ ಯಾವ ರೀತಿಯ ಪರಿಣಾಮ/ ಅಡ್ಡ ಪರಿಣಾಮಗಳು ಬೀರುತ್ತವೆ ಎಂಬ ಕುತೂಹಲವೂ ಗರಿಗೆದರಿದೆ.

NewsExpress sting ಕಾರ್ಯಾಚರಣೆಯು C-Voter ಸೇರಿದಂತೆ ಒಟ್ಟು 11 ಏಜೆನ್ಸಿಗಳನ್ನು ತನ್ನ ಕುಟುಕು ಕಾರ್ಯಾಚರಣೆಗೆ ಗುರಿಪಡಿಸಿ, ಅವುಗಳ ಜಾತಕವನ್ನು ಹರಾಜಿಗೆ ಹಾಕಿದೆ. C-Voter ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಸಮೂಹ ಮತ್ತು ಇಂಡಿಯಾ ಟುಡೆ ಸಮೂಹದ ಜತೆ ಕೈಜೋಡಿಸಿ, ಸಮೀಕ್ಷೆಗಳನ್ನು ಮೋಸದಿಂದ ಜೋಡಿಸಿತ್ತು ಎಂಬುದು ಇದೀಗ ಜಗಜ್ಜಾಹೀರಾಗಿದೆ.

NewsExpress channel ನಡೆಸಿರುವ ಕುಟುಕು ಕಾರ್ಯಾಚರಣೆಯಿಂದ ಚುನಾವಣಾ ಸಮೀಕ್ಷೆಗಳು ಕಪಟ ಎಂಬುದು ಸಾಬೀತಾಗುತ್ತಿದ್ದಂತೆ India Today ಸಮೂಹವು ಸಮೀಕ್ಷೆಗಾಗಿ ನೇಮಿಸಿಕೊಂಡಿದ್ದ C-Voter agency ಜತೆಗಿನ ಒಪ್ಪಂದವನ್ನು ರದ್ದುಪಡಿಸಿದೆ!

ಚುನಾವಣಾ ಪೂರ್ವ ಸಮೀಕ್ಷೆಗಳು ಮೋಸದ್ದು. ಅವುಗಳನ್ನು ಸ್ಥಗಿತಗೊಳಿಸಬೇಕು ಎಂದು ಇತ್ತೀಚೆಗೆ ಅನೇಕ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿತ್ತು ಎಂಬುದು ಗಮನಾರ್ಹ. 'Operation Prime Minister' ಹೆಸರಿನ ನ್ಯೂಸ್ ಎಕ್ಸ್ ಪ್ರೆಸ್ ಕುಟುಕು ಕಾರ್ಯಾಚರಣೆಯ ಸಮ್ಮುಖದಲ್ಲಿ ಆಯೋಗ ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ.

ಸಮೀಕ್ಷೆಗಳು ಬೋಗಸ್ಸೋ ಬೋಗಸ್ಸು; ಬರಿ ಗ್ಯಾಸು:
NewsExpress sting ಪ್ರಕಾರ ಸಮೀಕ್ಷಾ ಏಜೆನ್ಸಿಗಳು 2 ಮಾದರಿಯ ಸಮೀಕ್ಷೆಗಳನ್ನು ಹಣಕ್ಕಾಗಿ ಮಾರಿಕೊಳ್ಳುತ್ತವೆಯಂತೆ. ಒಂದು ವಾಸ್ತವವಾದ ಖಡಕ್ ಸಮೀಕ್ಷೆ ಮತ್ತೊಂದು ಕೃತ್ತಿಮ/ ತಿದ್ದಿದ ಸಮೀಕ್ಷಾ ಫಲಿತಾಂಶಗಳು!

NewsExpress ವರದಿಗಾರರು 'ತಾವು ನಿರ್ದಿಷ್ಟ ಪಕ್ಷಗಳ ಪ್ರತಿನಿಧಿಗಳು. ಸಮೀಕ್ಷೆಗಳು ತಮ್ಮ ಪಕ್ಷದ ಪರವಾಗಿರಬೇಕು' ಎಂದು ಹೇಳಿ ಹಣ ಮುಂದಿಡುತ್ತಿದ್ದಂತೆ ಈ ಸಮೀಕ್ಷಾ ಏಜೆನ್ಸಿಗಳು ಸುಳ್ಳು ಮಾದರಿಯ ಫಲಿತಾಂಶಗಳನ್ನು ಆ ಪಕ್ಷಗಳ ಪರವಾಗಿ ಮಂಡಿಸಿವೆಯಂತೆ. ಅಷ್ಟೇ ಅಲ್ಲ. ಅದೇ ಸುಳ್ಳು ಫಲಿತಾಂಶಗಳನ್ನು ಟಿವಿ ಚಾನೆಲ್ಲುಗಳಲ್ಲಿ ಪ್ರಸಾರವಾಗುವಂತೆ ನೋಡಿಕೊಳ್ಳುತ್ತೇವೆ. ಆದರೆ ಅದಕ್ಕು ಪ್ರತ್ಯೇಕವಾಗಿ ಹಣ ನೀಡಬೇಕು ಎಂದು ದುಂಬಾಲು ಬಿದ್ದವಂತೆ!

English summary
NewsExpress television sting proclaims poll surveys are bogous. Poll Surveys credibility questioned. Pending a complete investigation into the allegations made against several survey agencies following a television sting by NewsExpress channel, the India Today group has suspended its partnership with the C-Voter agency for the coming Lok Sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X