ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪ್ರಧಾನಿ ಅಭ್ಯರ್ಥಿ: ಬಿಜೆಪಿ ಅಧಿಕೃತ ಘೋಷಣೆ

By Srinath
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರೊಂದಿಗೆ 63ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ನರೇಂದ್ರ ದಾಮೋದರದಾಸ್ ಮೂಲಚಂದ್ ಮೋದಿಗೆ ಪಕ್ಷವು ಭರ್ಜರಿ ಕಾಣಿಕೆ ನೀಡಿದೆ.

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಕಡುವಿರೋಧದ ನಡುವೆಯೂ ಈ ಘೋಷಣೆ ಹೊರಬಿದ್ದಿರುವುದು ಗಮನಾರ್ಹ. 'ನರೇಂದ್ರ ಮೋದಿ ಅವರು ಪಕ್ಷದ ವತಿಯಿಂದ ಪ್ರಧಾನಿ ಅಭ್ಯರ್ಥಿ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಇದೀಗತಾನೆ (ಶುಕ್ರವಾರ ಸಂಜೆ 6.25ಕ್ಕೆ) ಘೋಷಿಸಿದ್ದಾರೆ.

Narendra Modi will be BJP Prime Minister candidate

ನವದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷ ಸಂಸದೀಯ ಮಂಡಳಿ ಸಭೆಯ ನಂತರ ರಾಜನಾಥ್ ಸಿಂಗ್ ಅವರು ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಕಟಿಸಿದ್ದಾರೆ. ಮೋದಿ ಹೆಸರು ಘೋಷಣೆಯಾಗುತ್ತಿದ್ದಂತೆ ಕಚೇರಿಯ ಎದುರು ಹಾಜರಿದ್ದ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.

ಘೋಷಣೆ ಹೊರಬೀಳುತ್ತಿದ್ದಂತೆ ರಾಜನಾಥ್ ಸಿಂಗ್ ಅವರು ಮೋದಿ ಅವರ ಕೊರಳಿಗೆ ಬೃಹತ್ ಹೂವಿನ ಹಾರವನ್ನು ಹಾಕಿ, ಅಪ್ಪಿಕೊಂಡರು. ನಂತರ ಒಬ್ಬೊಬ್ಬರಾಗಿ ಎಲ್ಲ ನಾಯಕರೂ ಮೋದಿ ಅವರಿಗೆ ಹೂಗುಚ್ಛ ನೀಡಿ, ಅಭಿನಂದಿಸಿದರು.

ಇಂದು ಬೆಳಗ್ಗೆಯೇ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಹೆಸರು ಅಂತಿಮಗೊಂಡಿತ್ತು. ಹಾಗಾಗಿ ಅಹಮದಾಬಾದಿನಿಂದ ತಕ್ಷಣ ವಿಶೇಷ ವಿಮಾನದಲ್ಲಿ ದೆಹಲಿಗೆ ಹೊರಟು ಬರುವಂತೆ ಮೋದಿ ಅವರಿಗೆ ರಾಜನಾಥ್ ಸಿಂಗ್ ಸೂಚಿಸಿದ್ದರು. ಅಡ್ವಾಣಿ ಅವರನ್ನು ಹೊರತುಪಡಿಸಿ ಸುಷ್ಮಾ ಸ್ವರಾಜ್ ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ನಿತಿನ್ ಗಡ್ಕರಿ, ಅನಂತಕುಮಾರ್. ಮುರಳಿ ಮನೋಹರ ಜೋಶಿ, ಅಮಿತ್ ಷಾ ಸೇರಿದಂತೆ ಮಂಡಳಿಯ ಎಲ್ಲ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ಸಭೆಗೂ ಮುನ್ನ, ಬಿಜೆಪಿ ಕಚೇರಿಯಲ್ಲಿ ಉಪಸ್ಥಿತರಿದ್ದ ಅಡ್ವಾಣಿ ಅವರು ಸಭೆಯಲ್ಲಿ ಪಾಲ್ಗೊಳ್ಳದೆ, ಮೋದಿ ಹೆಸರಿನ ಘೋಷಣೆಗೆ ಹಸಿರು ನಿಶಾನೆ ತೋರಿಸಿ, ಸಭೆ ಆರಂಭಕ್ಕೂ ಮುನ್ನವೆ ಕಚೇರಿಯಿಂದ ಹೊರ ನಡೆದಿದ್ದರು.

English summary
Narendra Modi will be BJP Prime Minister candidate for 2014 Lok Sabha Elections - announces BJP president Rajanth Singh on Sept 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X