ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಭ್ರಷ್ಟಾಚಾರದಲ್ಲಿಯೇ ಕಾಲಹರಣ ಮಾಡಿದೆ

|
Google Oneindia Kannada News

ನವದೆಹಲಿ, ಮಾ. 31 : "ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಸಾಧಿಸಿದ್ದೇನು ಇಲ್ಲ. ಹಗರಣನ್ನು ಮೈಮೇಲೆ ಎಳೆದುಕೊಂಡು ಅವುಗಳನ್ನು ಮುಚ್ಚಿಹಾಕುವುದರಲ್ಲೇ ಕಾಲಹರಣ ಮಾಡಿದೆ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಅಸ್ಸಾಂನ ಇಟಾನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ ಸರ್ಕಾರದ ಈಗಿನ ಪರಿಸ್ಥಿತಿಯನ್ನು ನೋಡಿದರೆ, ಅದು ಚುನಾವಣೆಯಲ್ಲಿ ಎರಡಂಕಿಯಷ್ಟು ಸ್ಥಾನಗಳನ್ನು ಪಡೆಯುವುದು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

Narendra Modi

ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಹಗರಣಗಳನ್ನು ಮೈಮೇಲೆ ಎಳೆದುಕೊಂಡು ಅವುಗಳನ್ನು ಮುಚ್ಚಿಹಾಕುವುದರಲ್ಲೇ ಕಾಲಹರಣ ಮಾಡುತ್ತಿದೆ. ಜನರಿಗಾಗಿ ಸರ್ಕಾರ ಏನೂ ಮಾಡಿಲ್ಲ, ದೇಶದ ಜನತೆ ಇದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮೋದಿ ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಮೋದಿ ಭಾಷಣದ ಮುಖ್ಯಾಂಶಗಳು

* ಕಾಂಗ್ರೆಸ್ ಸರ್ಕಾರ 10 ವರ್ಷಗಳಲ್ಲಿ ದುರಾಡಳಿತ ನಡೆಸಿ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ
* ಹಗರಣಗಳನ್ನು ಮುಚ್ಚಿ ಹಾಕುವುದರಲ್ಲೇ ಕಾಂಗ್ರೆಸ್ ಕಾಲಹರಣ ಮಾಡಿದೆ
* ಭ್ರಷ್ಟಾಚಾರದಿಂದ ತುಂಬಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕಪಾಠ ಕಲಿಸುತ್ತಾರೆ
* ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಎರಡಂಕಿಯಷ್ಟು ಸ್ಥಾನಗಳಿಸುವುದಿಲ್ಲ

* ಅಸ್ಸಾಂ ಮುಖ್ಯಮಂತ್ರಿ ತರುಣ್ ಗಗೋಯ್ ಅವರು ಸುಮಾರು 10 ಬಾರಿ ದೆಹಲಿಗೆ ಆಗಮಿಸಿ, ಮೇಡಂ (ಸೋನಿಯಾ ಗಾಂಧಿ)ರನ್ನು ಭೇಟಿ ಮಾಡಿದ್ದಾರೆ.
* ತಮ್ಮ ರಾಜ್ಯದ ಜನತೆಯನ್ನು ಭೇಟಿ ಮಾಡಿ ಸಮಸ್ಯೆ ಆಲಿಸಲು ನಿಮ್ಮ ಸಿಎಂಗೆ ಸಮಯ ಸಿಗುತ್ತಿಲ್ಲ
* ಗಡಿಯಲ್ಲಿ ಎರಡು ರಾಜ್ಯಗಳ ಜನರು ಬಡಿದಾಡಿಕೊಂಡು ಸಾಯುತ್ತಿದ್ದಾರೆ. ಅಲ್ಲಿನ ಸಮಸ್ಯೆ ನಿವಾರಣೆ ಆಗಿಲ್ಲ
* ಕಾಂಗ್ರೆಸ್ ನಾಯಕರು ಎಂದೂ ಜನರ ಬಳಿಗೆ ಹೋಗಿ ಸಮಸ್ಯೆ ಕೇಳಿಲ್ಲ

* ಕಾಂಗ್ರೆಸ್ ಗಡಿ ಭಾಗದ ರಾಜ್ಯಗಳನ್ನು ಯಾವಾಗಲೂ ನಿರ್ಲಕ್ಷಿಸುತ್ತದೆ
* ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ, ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ

English summary
Elections 2014 : Raising a fierce poll pitch in Assam, BJP's Prime Ministerial candidate Narendra Modi on Monday slammed Congress President Sonia Gandhi for playing 'politics of survival'. "Congress has crossed all limits of mis-rule in the last decade," Modi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X