ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಯವಿಟ್ಟು ಕಾಲಿಗೆ ಎರಗಬೇಡಿ', ಪ್ರಧಾನಿ ಮೋದಿ ರಿಕ್ವೆಸ್ಟ್

By Mahesh
|
Google Oneindia Kannada News

ನವದೆಹಲಿ, ಜೂ.6: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವಾಲಯ ಹಾಗೂ ಸಹದ್ಯೋಗಿಗಳ ಕಾರ್ಯ ವೈಖರಿಯಲ್ಲಿ ಸುಧಾರಣೆ ತರಲು ಸಾಕಷ್ಟು ಬದಲಾವಣೆ ತರುತ್ತಿದ್ದಾರೆ. ಕಚೇರಿ ಕೆಲಸದ ಜತೆಗೆ ಸಹದ್ಯೋಗಿಗಳ ನಡಾವಳಿ ಬಗ್ಗೆ ಕೂಡಾ ಮೋದಿ ಅವರು ಹೊಸ ಫರ್ಮಾನು ಹೊರಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರಿ ಕಚೇರಿಗಳಿಗೆ ಸದ್ಯದಲ್ಲೇ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ರಾಜಧಾನಿಯ ಕೇಂದ್ರ ಸರ್ಕಾರಿ ಕಚೇರಿಗಳು ಗುರುವಾರ (ಜೂ 5) ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಚುರುಕುಗೊಂಡಿದ್ದವು. [ಈ ಬಗ್ಗೆ ಇಲ್ಲಿ ಓದಿ]

ಸರ್ಕಾರಿ ಆಡಳಿತದ ಸುಧಾರಣೆ ವಿಚಾರದಲ್ಲಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿ ಕಂಡು ವಿಪಕ್ಷದವರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಸಂಸದ ಶಶಿ ತರೂರ್ ಅವರು ಮೋದಿ ಅವರನ್ನು ಹೊಗಳಿ ಕಾಂಗ್ರೆಸ್ಸಿನ ಕೆಂಗಣ್ಣಿಗೆ ಗುರಿಯಾದರು[ಹೆಚ್ಚಿನ ಓದಿಗೆ]

ನೂತನ ಸದಸ್ಯರಾಗಿ ಬಂದ ಬಿಜೆಪಿ ಸಂಸದರಿಗೆ ಮೋದಿ ಕೆಲವಾರು ಬುದ್ಧಿಮಾತುಗಳನ್ನ ಹೇಳಿದ್ದಾರೆ. ಮೋದಿ ಅವರು ನೀಡಿರುವ ಲೇಟೆಸ್ಟ್ ಸಲಹೆಗಳು, ಆದೇಶಪೂರ್ವಕ ಮನವಿಗಳು ಹೀಗಿವೆ:

Narendra Modi takes on sycophancy culture, asks MPs not to touch his feet

* ನನ್ನ ಕಾಲಿಗೆ ಯಾರೂ ಬೀಳಬೇಡಿ.. ನೀವು ಗೌರವ ಕೊಡುವುದಿದ್ದರೆ ಕಷ್ಟಪಟ್ಟು ಕೆಲಸ ಮಾಡಿ ತೋರಿಸಿ..

* ಸಂಸತ್ ಸದನದಲ್ಲಿ ಒಳ್ಳೆಯ ನಡತೆ ಇರಲಿ. ಅಧಿವೇಶನಕ್ಕೆ ತಪ್ಪದೇ ಹಾಜರಾಗಿ.. ಅಧಿವೇಶನ ಪೂರ್ಣವಾಗುವವರೆಗೂ ಹಾಜರಾಗಿರಿ. ಸಂಸತ್ತಿನ ಗೌರವವನ್ನ ಕಾಪಾಡಿರಿ.

* ಸಂಸತ್ತಿನ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮುನ್ನ ಸಂಪೂರ್ಣವಾಗಿ ವಿಷಯ ತಿಳಿದುಕೊಂಡು, ಪೂರ್ವಾಭ್ಯಾಸ ಮಾಡಿಕೊಂಡು ಸಂಸತ್ ಗೆ ಕಾಲಿಡಿ. ವಿವಾದಕ್ಕೆ ಎಡೆಮಾಡಿಕೊಡುವಂಥ ಹೇಳಿಕೆಗಳನ್ನ ನೀಡಲು ಹೋಗಬೇಡಿ. ವಸ್ತುನಿಷ್ಠವಾಗಿ ನಿಮ್ಮ ವಿಚಾರಗಳನ್ನ ಮಂಡಿಸಿ.

* ಸಂಸತ್ತಿನಲ್ಲಿ ನಡೆಯುವ ಚರ್ಚೆಗಳು ಯಾವುದೇ ಸಂಸದನಿಗಾದರೂ ಜ್ಞಾನ ಒದಗಿಸುತ್ತವೆ. ಹೀಗಾಗಿ, ಚರ್ಚೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಅಥವಾ ವೀಕ್ಷಿಸಿ.

ಸೆಂಟ್ರಲ್ ಹಾಲ್ ನಲ್ಲಿ ಸುಮಾರು 20 ನಿಮಿಷಗಳ ಮಾತನಾಡಿದ ಪ್ರಧಾನಿ ಅವರು ನೂತನ ಸಂಸದರಿಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಸಂಸತ್ತಿನ ಸಮಯ ವ್ಯಯ ಮಾಡದಂತೆ ಸಂಸದರು ನಡೆದುಕೊಳ್ಳುವರೇ ಕಾದು ನೋಡೋಣ.

English summary
The newly appointed Prime Minister of India -- Narendra Modi seems to have proved that he is different from many other leaders of the country. Putting an end to sycophancy, Modi on Friday, June 6 told MPs not to touch his feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X