ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪದಗ್ರಹಣಕ್ಕೆ ಮರ್ಯಂ ಷರೀಫ್ ಮಿಸ್

By Mahesh
|
Google Oneindia Kannada News

ನವದೆಹಲಿ, ಮೇ.26: ಮೋದಿ ಅವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಪಕ್ಕದ ದೇಶದ ಪಾಕಿಸ್ತಾನದಲ್ಲೂ ಸಂಚಲನ ಮೂಡಿಸಿದೆ. ಪಾಕಿಸ್ತಾನದ ಅಧ್ಯಕ್ಷ ನವಾಜ್ ಷರೀಫ್ ಅವರು ಭಾರತಕ್ಕೆ ಆಗಮಿಸುವ ಮೂಲಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗೆ ನಾಂದಿ ಹಾಡಲಾಗುತ್ತಿದೆ. ಈ ನಡುವೆ ಎರಡು ದೇಶಗಳ ನಡುವೆ ಬಾಂಧವ್ಯ ಕಾಯ್ದುಕೊಳ್ಳುವಂತೆ ಕರೆ ನೀಡಿದ ಯುವ ರಾಜಕಾರಣಿ ಮರ್ಯಾಂ ಷರೀಫ್ ನತ್ತ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ನವಾಜ್ ಷರೀಫ್ ಅವರು ಮೋದಿ ಅವರ ಆಹ್ವಾನ ಸ್ವೀಕರಿಸಿದ್ದು ಉತ್ತಮ ಬೆಳವಣಿಗೆ ಎರಡು ದೇಶಗಳ ನಡುವೆ ಶಾಂತಿ ಸೌಹಾರ್ದ ಬೆಳವಣಿಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ ಎಂದು ಮರ್ಯಾಂ ಟ್ವೀಟ್ ಮಾಡಿದ್ದರು.

ಮರ್ಯಾಂ ಟ್ವೀಟ್ ನಂತರ ಭಾರತೀಯರು ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿ ಎಲ್ಲರ ಗಮನ ಸೆಳೆದಿದ್ದರು. ಮರ್ಯಾಂ ಅವರನ್ನು ಅನೇಕರು ಭಾರತಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು ಕೂಡಾ. ಆದರೆ, ಮರ್ಯಾಂ ಸದ್ಯಕ್ಕೆ ಬರುತ್ತಿಲ್ಲ. ಮರ್ಯಾಂ ಟ್ವೀಟ್ ಸಂಗ್ರಹ ಇಲ್ಲಿದೆ.

ಮರ್ಯಂ ಪಾಕಿಸ್ತಾನದ ಯುವ ರಾಜಕಾರಣಿ

ಮರ್ಯಂ ಪಾಕಿಸ್ತಾನದ ಯುವ ರಾಜಕಾರಣಿ

ನವಾಜ್ ಷರೀಫ್ ಅವರ ಯೂಥ್ ಪೋಗ್ರಾಂ ಸಮಿತಿಯ ಮುಖ್ಯಸ್ಥೆಯಾಗಿರುವ ಮರ್ಯಂ ಅವರು ಪಾಕಿಸ್ತಾನ ಮುಸ್ಲಿಂ ಲೀಗ್ ನ ಪ್ರಮುಖ ನಾಯಕಿ. 2013ರ ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ರಂಗಕ್ಕೆ ಇಳಿದ ಮರ್ಯಂ ನೇರ ಮಾತಿಗೆ ಹೆಸರುವಾಸಿ.

ಲಾಹೋರ್ ನಲ್ಲಿ ಮರ್ಯಂ ಜನನ

ಲಾಹೋರ್ ನಲ್ಲಿ ಮರ್ಯಂ ಜನನ

ನವಾಜ್ ಷರೀಫ್ ಹಾಗೂ ಕಲ್ಸೊಂ ನವಾಜ್ ದಂಪತಿಯ ಪುತ್ರಿಯಾಗಿ ಮರ್ಯಂ ಅವರು 1973ರ ಅಕ್ಟೋಬರ್ 28 ರಂದು ಪಂಜಾಬ್ ಪ್ರಾಂತ್ಯದ ಲಾಹೋರ್ ನಲ್ಲಿ ಜನಿಸಿದರು. ಜೀಸಸ್ ಹಾಗೂ ಮೇರಿ ಕಾನ್ವೆಂಟ್ ಶಾಲೆ ಹಾಗೂ ಪಂಜಾವಿ ವಿವಿಯಲ್ಲಿ ವ್ಯಾಸಂಗ, ಮಾಸ್ಟರ್ ಡಿಗ್ರಿ ಪಡೆದಿರುವ ಈಕೆ ಈಗ ಕೇಂಬ್ರಿಡ್ಜ್ ವಿವಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ.

ಷರೀಫ್ ಭಾರತಕ್ಕೆ ಬರಲು ಮರ್ಯಂ ಕಾರಣ?

ಷರೀಫ್ ಭಾರತಕ್ಕೆ ಬರಲು ಮರ್ಯಂ ಕಾರಣ?

ಪಾಕಿಸ್ತಾನದಲ್ಲಿ ಉನ್ನತ ಶಿಕ್ಷಣದ ಮಹತ್ವದ ಬಗ್ಗೆ ಮರ್ಯಂ ಅನೇಕ ಬಾರಿ ಮಾತನಾಡಿದ್ದಾರೆ. ಷರೀಫ್ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯಲ್ಲೂ ಮರ್ಯಂಗೆ ಉನ್ನತ ಸ್ಥಾನವಿದೆ. ಷರೀಫ್ ಅವರು ಭಾರತಕ್ಕೆ ಹೊರಡಿಸುವಲ್ಲಿ ಮರ್ಯಂ ಪಾತ್ರ ಹಿರಿದಾಗಿದೆ ಎನ್ನಬಹುದು.

Array

ಮರ್ಯಂ ಟ್ವೀಟ್ ಗಳ ಜನಪ್ರಿಯತೆ

ಉಭಯ ದೇಶಗಳ ಮಾತುಕತೆ ಬಗ್ಗೆ ಮರ್ಯಂ ಟ್ವೀಟ್ ಮಾಡಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.

ಉಭಯ ದೇಶಗಳ ಯುದ್ಧ ಮಾಡಬೇಕಾಗಿದೆ

ಉಭಯ ದೇಶಗಳ ಯುದ್ಧ ಮಾಡಬೇಕಾಗಿದೆ ಆದರೆ, ಸಾಂಕ್ರಾಮಿಕ ಕಾಯಿಲೆ, ಅನಕ್ಷರತೆ, ಬಡತನ ನಮ್ಮ ಶತ್ರುಗಳಾಗಿವೆ. ನಾವು ಒಟ್ಟಿಗೆ ಹೋರಾಡಬೇಕಿದೆ ಎಂದು ಟ್ವೀಟ್ ಮಾಡಿದ್ದರು.

ಮರ್ಯಂ ರಾಜಕೀಯ ಅನುಭವ ಹೇಗಿದೆ?

ಮರ್ಯಂ ರಾಜಕೀಯ ಅನುಭವ ಹೇಗಿದೆ?

ಪಿಎಂಎಲ್ ಎನ್ ರಾಜಕೀಯ ಪಕ್ಷದ ಹೊಸ ಮುಖವಾಗಿ ಮರ್ಯಂ ಬೆಳೆಯುತ್ತಿದ್ದಾರೆ. ನಾಲ್ಕಾರು ಭಾಷೆಗಳಲ್ಲಿ ಮರ್ಯಂ ನಿರರ್ಗಳವಾಗಿ ಮಾತನಾಡಬಲ್ಲರು. ಪಾಕಿಸ್ತಾನದ ಯುವಜನರ ನಾಡಿ ಮಿಡಿತ ಅರಿತಿರುವ ಈಕೆ ದೇಶದ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದ ಮುಂದಿನ ನಾಯಕಿ ಎಂದು ಪರಿಗಣಿಸಲಾಗಿದೆ. ಸುಮಾರು 100 ಬಿಲಿಯನ್ ಸಾಲ ಯೋಜನೆಯ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ ಅನುಭವಿ.

Array

ಕೊರಿಯಾದಂತೆ ನಾವೇಕೆ ಬಾಳಬೇಕು

ಕೊರಿಯಾದಂತೆ ನಾವೇಕೆ ಬಾಳಬೇಕು.. ಯುನೈಟೆಡ್ ಯುರೋಪ್ ನಂತೆ ಬಾಳಬಾರದೇಕೆ

ದಯವಿಟ್ಟು ನೀವು ಭಾರತಕ್ಕೆ ಬನ್ನಿ

ದಯವಿಟ್ಟು ನೀವು ಭಾರತಕ್ಕೆ ಬನ್ನಿ ಎಂದು ಮರ್ಯಂಗೆ ಟ್ವೀಟ್ ಮೂಲಕ ಆಹ್ವಾನ

Array

ನಿಮ್ಮ ಟ್ವೀಟ್ ನಿಂದ ಗುಣಾತ್ಮಕ ಬದಲಾವಣೆ

ನಿಮ್ಮ ಟ್ವೀಟ್ ನಿಂದ ಗುಣಾತ್ಮಕ ಬದಲಾವಣೆಯಾಗುತ್ತಿದೆ. ನೀವು ಭಾರತಕ್ಕೆ ಬನ್ನಿ

ಖಂಡಿತ ಭಾರತಕ್ಕೆ ಬರುತ್ತೇನೆ ಎಂದ ಮರ್ಯಂ

ಖಂಡಿತ ಭಾರತಕ್ಕೆ ಬರುತ್ತೇನೆ, ಅದರೆ, ಸದ್ಯಕ್ಕೆ ಸಾಧ್ಯವಿಲ್ಲ ಎಂದ ಮರ್ಯಂ

ಎರಡು ದೇಶದಲ್ಲೂ ಶಾಂತಿ ನೆಲೆಯಾಗಲಿ

ಎರಡು ದೇಶದಲ್ಲೂ ಶಾಂತಿ ನೆಲೆಯಾಗಲಿ ಎಂದು ಟ್ವೀಟ್

English summary
Maryam Nawaz Sharif hailed her father's decision to attend Narendra Modi's swearing-in saying the step will help in restoring fraying bilateral ties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X