ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಮತ ಹಾಕಿ; ಮೋದಿ ಪ್ರಧಾನಿಯಾಗಲಿ: ರಾಖಿ

By Srinath
|
Google Oneindia Kannada News

ನವದೆಹಲಿ, ಮಾರ್ಚ್ 1-ಲೋಕಸಭೆ ಮಹಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಕೈಹಿಡಿಯುವ ಸುಳಿವು ನೀಡಿರುವ ಬಾಲಿವುಡ್ ಐಟಂ ಕ್ವೀನ್ ರಾಖಿ ಸಾವಂತ್, ನರೇಂದ್ರ ಮೋದಿಯೇ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಯಸಿದರೆ ತಾನು ಅವರನ್ನು ಮದುವೆಯಾಗಲು ಸಿದ್ದ ಎಂದು ಇತ್ತೀಚೆಗೆ ಹೇಳಿದ್ದ, ಸದಾ ವಿವಾದದಲ್ಲಿರಬಯಸುವ ಮುಂಬೈ ನೆಲೆಯ 35 ವರ್ಷ ವಯಸ್ಸಿನ ಬೆಡಗಿ ರಾಖಿ ಸಾವಂತ್, ಇಂದು ದೆಹಲಿಯಲ್ಲಿ ಬಿಜೆಪಿ ಕಚೇರಿಯಲ್ಲಿ ದಿಢೀರನೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಉಪಸ್ಥಿತರಿದ್ದರು.

lok-sabha-polls-vote-for-bjp-modi-should-become-pm-rakhi-sawant

ಇದೇ ವೇಳೆ, ಭೂಸೇನೆ ನಿವೃತ್ತ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಅವರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಬಿಜೆಪಿ ಕಚೇರಿಗೆ ಆಗಮಿಸಿದ ವಿಕೆ ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ ಸಿಂಗ್ ಅವರು ಹೂಗುಚ್ಛ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು. ಇದಕ್ಕೂ ಮೊದಲು ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಭೇಟಿ ನೀಡಿದ ವಿಕೆ ಸಿಂಗ್, ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಬಿಜೆಪಿ ಪಕ್ಷ ಸೇರುತ್ತಿರುವ ಕುರಿತು ಹೇಳಿಕೆ ನೀಡಿದರು. [ಬಿಜೆಪಿ ಸೇರಿದ ವಿಕೆ ಸಿಂಗ್]

ಪಕ್ಷದ ಕಚೇರಿಯಲ್ಲಿ ಹಾಜರಿದ್ದ ಮಾಜಿ ಸೈನಿಕರಿಗೆ ಬಾಲಿವುಡ್ ನಟಿ ರಾಖಿ ಸಾವಂತ್ ಇದೇ ಸಂದರ್ಭದಲ್ಲಿ ರಾಖಿ ಕಟ್ಟಿ ಸಂಭ್ರಮಿಸಿದರು. ಅದಾದನಂತರ ಎಲ್ಲರ ಜತೆ ಸೇರಿ ಚಹಾ ಕುಡಿದರು. ಮಧ್ಯೆ, ಪಕ್ಷದ ಧ್ವಜ ಪಡೆದು ತಮ್ಮ ಕೊರಳಿಗೆ ಸುತ್ತಿಕೊಂಡರು. ಇದರಿಂದ ಪಕ್ಷದ ಅಂಗಳದಲ್ಲಿ ಮತಾಪು, ಬಾಣ-ಬಿರುಸು ಬೆಳಕು ಚೆಲ್ಲಿದಂತಾಯಿತು.

ಆದರೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ತಮ್ಮ ರಾಜಕೀಯ ಆರಂಗ್ರೇಟ್ರಂ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದೆಲ್ಲಾ ನನಗೆ ಗೊತ್ತಾಗೋಲ್ಲ. ಪಕ್ಷದ ಹಿರಿಯ ನಾಯಕರು ಅದಕ್ಕೆಲ್ಲಾ ಉತ್ತರಿಸುತ್ತಾರೆ ಎಂದು ಜಾರಿಕೊಂಡರು. ಏನೇ ಆಗಲಿ ದೇಶದ ಜನತೆ ನರೇಂದ್ರ ಮೋದಿಗೆ ಮತ ಹಾಕಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಅದಿರಲಿ, ಮುಂದೆ ಲೋಕಸಭೆಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ತುಂಟ ನಗೆ ಬೀರುತ್ತಾ ಮಾತನಾಡಿದ ರಾಖಿ, ನಾನು ಬಿಜೆಪಿಯ ಪುತ್ರಿ. ನೋಡೋಣ ನಾಯಕರು ಏನು ನಿರ್ಧರಿಸುತ್ತಾರೋ ಅದರಂತೆ ಮುನ್ನಡೆಯುವೆ. ಸ್ಪರ್ಧೆಯೊಂದೇ ಅಂತಲ್ಲ. ಸಾಮಾನ್ಯ ಕಾರ್ಯಕರ್ತೆಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವೆ ಎಂದು ಸ್ಪಷ್ಟಪಡಿಸಿದರು.

English summary
Lok Sabha polls 2014: Bollywood item girl and actress Rakhi Sawant today requested the country's janta to vote for BJP and inturn Narendra Modi to become Prime Minister. Sawant visited the BJP office in Delhi today said she was the 'BJP's daughter'. Later on she tied 'rakhis' on the wrists of ex-servicemen and had a cup of tea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X