ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಇಂದಿರಾ ಅನುಕಂಪದಲೆ: ಇಂದು ಮೋದಿ ಅಲೆ

By Srinath
|
Google Oneindia Kannada News

ನವದೆಹಲಿ, ಮೇ 16: ದೇಶಾದ್ಯಂತ ಮತ ಎಣಿಕೆ ಭರ್ಜರಿಯಾಗಿ ಆರಂಭವಾಗಿದೆ. ಅಭ್ಯರ್ಥಿಗಳ ಹಿನ್ನಡೆ ಮತ್ತು ಮುನ್ನಡೆ ವಿವರಗಳೊಂದಿಗೆ ತಾಜಾ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

1.43: ಮಾಜಿ ನಟಿ ನಗ್ಮಾಗೆ ಪರಾಜಯ; ಉಮಾ ಭಾರತಿಗೆ ಗೆಲುವು
1.30: ಕಾಂಗ್ರೆಸ್ಸಿಗೆ ಇದೊಂದೇ ಸಮಾಧಾನ: ಸೋನಿಯಾ- ರಾಹುಲ್ ಗಾಂಧಿಗೆ ಅಮೋಘ ಗೆಲುವು
12.22: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಸೋಲೋ ಸೋಲು
12.22: ಪೂನಂ ಮಹಾಜನ್ ವಿರುದ್ಧ ಪ್ರಿಯಾ ದತ್ ಗೆ ಸೋಲು
12.22: ಪಂಚ ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಗೆಲುವು

12.21: ಬಿಜೆಪಿಗೆ ಇದೊಂದೇ ಆಘಾತ: ಅರುಣ್ ಜೇಟ್ಲಿ ಸೋಲಿನತ್ತ
12:20: ಕಿರಣ್ ಖೇರ್ ಗೆ ಗೆಲುವು ಬಿಜೆಪಿಯ ಪವನ್ ಕುಮಾರ್ ಬನ್ಸಾಲ್ ಗೆ ಸೋಲು
12.19 ಪ್ರಫುಲ್ ಪಟೇಲ್ ಸೋಲು?
12.19: ಮುಲಾಯಂ ಸಿಂಗ್ ಸೋಲಿನತ್ತ

12.00: ಆಮ್ ಆದ್ಮಿಗೆ ಪಂಜಾಬಿನಲ್ಲಿ ಒಂದೇ ಗೆಲುವು
12.00: ಫರೂಖಾಬಾದ್: ಸಲ್ಮಾನ್ ಖುರ್ಷಿದ್ ಸೋಲಿನತ್ತ
11.50 : ಅಂದು ಇಂದಿರಾ ಹತ್ಯೆ ಅನುಕಂಪದಲೆ; ಇಂದು ಮೋದಿ ಅಲೆ
11.50: ಮೂರು ದಶಕಗಳ ನಂತರ ಬಿಜೆಪಿಯಿಂದ ಭಾರಿ ಬಹುಮತದ ಸರಕಾರ
11.50: ಇಂದಿರಾ ಗಾಂಧಿ ಹತ್ಯೆಯಾದಾಗ ಇಂದಿರಾ ಅಲೆಯಲ್ಲಿ ರಾಜೀವ್ ಗಾಂಧಿ ಭಾರಿ ಬಹುಮತ ಪಡೆದಿದ್ದರು.
11.44: ತಾಜಾ ಅಂದಾಜಿನ ಪ್ರಕಾರ ಕಾಂಗ್ರೆಸ್ ನೇತೃತ್ವದ UPA 50 ಸೀಟಿಗೆ ಕುಸಿಯಬಹುದು.
11.36: ವಾರಣಾಸಿಯಲ್ಲಿ ಮೋದಿಗೆ ಅಮೋಘ ಜಯ, ನಿತಿನ್ ಗಡ್ಕರಿಗೆ ಜಯ.
11.34: ಗುಜರಾತ್ ಮತ್ತು ರಾಜಸ್ಥಾನ: ಎಲ್ಲಾ ಸೀಟುಗಳಲ್ಲೂ ಬಿಜೆಪಿ ಮುನ್ನಡೆ
11.33: NDA: 336, UPA: 62, ಇತರೆ 145
11.25: ಮುಲಾಯಂ ಸಿಂಗ್ ಯಾದವ್ ಮುನ್ನಡೆ, ರಾಬ್ಡಿ ದೇವ್ ಹಿನ್ನಡೆ, ಶತೃಘ್ನ ಸಿನ್ಹ ಮುನ್ನಡೆ, ತೃಣಮೂಲಕ್ಕೆ 32 ಮುನ್ನಡೆ
11.25: ಗಾಜಿಯಾಬಾದಿನಲ್ಲಿ ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಗೆ ಗೆಲುವು
11.20: ಸುಷ್ಮಾ ಸ್ವರಾಜ್ ಗೆ ಗೆಲುವು, ಪರೇಶ್ ರಾವಲ್ ಲೀಡಿಂಗ್
11.18: ವಡೋದರಾದಲ್ಲಿ ಮಿಸ್ತ್ರಿಗೆ ಇಸ್ತ್ರಿ; ಕಾಶಿಯಲ್ಲೂ ಮೋದಿ ಜೈ ಜೈ
11.14: ಅರುಣ್ ಜೇಟ್ಲಿಗೆ 30 ಸಾವಿರ ಹಿನ್ನಡೆ
9.55: ಗೆಲುವಿಗಾಗಿ ಹಂಬಲಿಸಿ 7 ತಿಂಗಳಿಂದ ತಪಸ್ಸಿಗೆ ಕುಳಿತಿದ್ದ ಮೋದಿಗೆ ಅಮೋಘ ಜಯ

Narendra modi

11.09: ಅಸ್ಸಾಂ ಸೋಲಿನ ಹೊಣೆಹೊತ್ತ ಕಾಂಗ್ರೆಸ್ ಮುಖ್ಯಮಂತ್ರಿ ತರುಣ್ ಗಗೋಯ್ ರಾಜೀನಾಮೆ
10.55: NDA: 323, UPA: 67, ಇತರೆ 152
10.52: ವಡೋದರಾದಲ್ಲಿ ನರೇಂದ್ರ ಮೋದಿ 4,20,000 ಮತಗಳ ಅಂತರದಿಂದ ಭಾರೀ ಮುನ್ನಡೆ
10.52: ತಮಿಳುನಾಡು: 35ರಲ್ಲಿ ಜಯಲಲಿತಾ ಮುನ್ನಡೆ
10.50: ಅಜಿತ್ ಜೋಗಿ ಲೀಡಿಂಗ್
10.35: ಕಚೇರಿ ಉಳಿಸಿಕೊಳ್ಳುವತ್ತ ಅನಂತಕುಮಾರ್ ದಾಪುಗಾಲು!
10.40: ಉತ್ತರ ಪ್ರದೇಶ ಬಿಜೆಪಿಗೆ 57 ಮುನ್ನಡೆ
10.30: ಸುಲ್ತಾನ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಭರ್ಜರಿ ಗೆಲುವು
10.26: ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಮುನ್ನಡೆ
10.26: ಬಿಜೆಪಿ: 312, ಕಾಂಗ್ರೆಸ್: 72, ಇತರೆ 152
10.20: ಆಂಧ್ರ ಅಸೆಂಬ್ಲಿ: ತೆಲುಗುದೇಶಂ ಪಾರ್ಟಿಗೆ ಸ್ಪಷ್ಟ ಬಹುಮತ 102/179
10.15: ದೆಹಲಿಯಲ್ಲಿ ಆಮ್ ಆದ್ಮಿ ಧೂಳೀಪಟ: ಬಿಜೆಪಿ ಸರ್ವಮಯ
10.10: ತಪ್ಪಿದ ಮತ್ತೊಂದು ಚುನಾವಣೆ: ಸೋಲಿನತ್ತ ಕುಮಾರಸ್ವಾಮಿ; ಮೊಯ್ಲಿ ಲೀಡಿಂಗ್
10.04: ನಾಳೆ ಕಾಶಿ ಯಾತ್ರೆ: ಕಾಶಿ ವಿಶ್ವನಾಥನ ದರ್ಶನ ಪಡೆಯಲಿರುವ ಮೋದಿ
10.03: NDA 302 ಲೀಡಿಂಗ್; ಇನ್ನೂ 25 ಗಳಿಸುವ ಅಂದಾಜು
10.02: ಏಕಾಂಗಿಯಾಗಿ ಬಿಜೆಪಿ ಸ್ಪಷ್ಟ ಬಹುಮತದತ್ತ
10.01: ಮುಂಬೈ ಮಾಜಿ ಪೊಲೀಸ್ ಕಮೀಷನರ್ ಸತ್ಯಪಾಲಗೆ ಯುಪಿನಲ್ಲಿ ಭರ್ಜರಿ ಗೆಲುವು
10.00: ಸೋನಿಯಾ ಗಾಂಧಿ ಮಾತ್ರವೇ ಪ್ರಮುಖ ಲೀಡಿಂಗ್ ನಾಯಕಿ
9.59: ಏಕಾಂಗಿಯಾಗಿ ಬಿಜೆಪಿ ಸ್ಪಷ್ಟ ಬಹುಮತದತ್ತ

9.50: ಹಿಂದೂಪುರದಲ್ಲಿ ನಟ ಬಾಲಕೃಷ್ಣಗೆ ಸ್ಪಷ್ಟ ಬಹುಮತ
9.48: ಎನ್ಡಿಎಗೆ ತ್ರಿಶತಕ ಎಂದಿದ್ದ ಚುನಾವಣಾ ಸಮೀಕ್ಷಾ ಪಿತಾಮಹ ಪ್ರಣಬ್ ರಾಯ್ ಪ್ರಕಾರ NDAಗೆ ಇನ್ನೂ ಹೆಚ್ಚು ಸ್ಥಾನ ಪ್ರಾಪ್ತಿಯಾಗಲಿದೆ. ಮತ್ತೊಮ್ಮೆ ಈ ಲಿಂಕ್ ನೋಡಿ
9.45: ರೂಪಾಯಿ ಮೌಲ್ಯ ಭಾರಿ ಏರಿಕೆ, 25,000 ಗಡಿ ದಾಟಿದ ಸೆನ್ಸೆಕ್ಸ್
9.44: ನಿರೀಕ್ಷೆಯಂತೆ ಎಲ್ಲೆ ಡೆ ಬಿಜೆಪಿ ನಾಗಾಲೋಟ
9.44: ಬಿಜೆಪಿಯನ್ನು ಗೆಲ್ಲಿಸಿದ ಮಾಧ್ಯಮಗಳು: ಕಾಂಗ್ರೆಸ್
9.42: ಮೋದಿ 2 ಲಕ್ಷ ಅಂತರ ಗೆಲುವು: ಮಿಸ್ತ್ರಿಗೆ ಇಸ್ತ್ರಿ
9.45: ಭಾರತ LIVE: 272+ ದಾಟಿದ ಬಿಜೆಪಿ ಮೋದಿ ಸರಕಾರ್
9:40: ಬಿಜೆಪಿಗೆ 2 ರಲ್ಲಿ ಗೆಲುವು; RLD ಅಜಿತ್ ಸಿಂಗ್ ಸೋಲು
9.38: ಕುರುಕ್ಷೇತ್ರ ನವೀನ್ ಜಿಂದಾಲ್ ಹಿನ್ನಡೆ
9.32: ಬಿಹಾರ ಬಿಜೆಪಿ ನಾಗಾಲೋಟ; ನಿತೀಶ್ ಒಂದೇ ಸೀಟು ಮುನ್ನಡೆ
9.30: ಜಯಲಲಿತಾಗೆ 32 ಮುನ್ನಡೆ, ಬಿಜೆಪಿ 1
9.28: ಪ.ಬಂಗಾಳ: ಮಮತಾ ದೀದಿಗೆ ಮುನ್ನಡೆ
9.26: ಉತ್ತರಪ್ರದೇಶದಲ್ಲಿ ಬಿಜೆಪಿ 32ರಲ್ಲಿ ಮುನ್ನಡೆ. ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ತಲಾ 7
9.26: ಅಸ್ಸಾಂನಲ್ಲಿ ಬಿಜೆಪಿ 7ಕ್ಕೂ ಹೆಚ್ಚು ಸ್ಥಾನದಲ್ಲಿ ಮುನ್ನಡೆ
9.25: ವಾರಾಂತ್ಯ ಷೇರು ಪೇಟೆ ವಹಿವಾಟು ಆರಂಭ; ಮಾರುಕಟ್ಟೆಯಲ್ಲಿ ನಾಗಾಲೋಟ
9.20: ಪಂಜಾಬ್: ಬಿಜೆಪಿ 7 ಆಮ್ ಆದ್ಮಿಗೆ 4 ಮುನ್ನಡೆ, ಕಾಂಗ್ರೆಸ್ 1
9.19: ಕಾಂಗ್ರೆಸ್ ಪ್ರಮುಖ ನಾಯಕರು ಮೀರಾ ಕುಮಾರ್, ಮಣಿ ಶಂಕರ್ ಅಯ್ಯರ್, ರಾಹುಲ್ ಹಿನ್ನಡೆ
9.15: ಕೋಲ್ಕೊತ್ತಾ- ಹೂಗ್ಲಿ ಬಿಜೆಪಿಯ ಚಂದನ್ ಮಿತ್ರಾ ಲೀಡಿಂಗ್
9.12: ಆಮ್ ಆದ್ಮಿ ಪಾರ್ಟಿ ಇನ್ನೂ ಖಾತೆ ತೆರೆದಿಲ್ಲ
9.12: ಹರ್ಷವರ್ಧನ್, ಉಮಾ ಭಾರತಿ ಲೀಡಿಂಗ್; ಅಮೇಠಿಯಲ್ಲಿ ರಾಹುಲ್ ಹಿನ್ನಡೆ
9.10: ಬಿಜೆಪಿ: 193, ಕಾಂಗ್ರೆಸ್: 63, ಇತರೆ 92
9.09: ಬಿಜೆಪಿ ತ್ರಿಶತಕ; ಕಾಂಗ್ರೆಸ್ಸಿಗೆ ಅರ್ಧಕ್ಕರ್ಧ ಸೋಲು: ಎನ್ಡಿಟಿವಿ ಪ್ರಣಬ್
9.05: ಕಾಂಗ್ರೆಸ್ಸಿಗೆ ಭಾರಿ ಹಿನ್ನಡೆ
ಲೀಡ್ ಹೀಗಿದೆ:
ಜೇಟ್ಲಿ ಮುನ್ನಡೆ; ಎರಡೂ ಕಡೆ ಮೋದಿಗೆ ಮುನ್ನಡೆ
ಕಳೆದ ಬಾರಿಗಿಂತ ಕಾಂಗ್ರೆಸ್ಸಿಗೆ ಅರ್ಧಕ್ಕರ್ಧ ಸೋಲು

ಬಿಜೆಪಿ: 166, ಕಾಂಗ್ರೆಸ್: 62, ಇತರೆ 41
ಶಾಜಿ ಇಲ್ಮಿಗೆ ಹಿನ್ನಡೆ, ನಗ್ಮಾ ಮುನ್ನಡೆ
ವಡೂದರಾ ಮತ್ತು ವಾರಣಾಸಿಯಲ್ಲಿ ಮೋದಿ ಮುನ್ನಡೆ

ರಾಹುಲ್ ಗಾಂಧಿ ಹಿನ್ನಡೆ
ಗುಜರಾತ್, ಉತ್ತರಪ್ರದೇಶ, ಛತ್ತೀಸ್ ಗಢ, ಕರ್ನಾಟಕ, ಮಧ್ಯಪ್ರದೇಶದಲ್ಲಿ ಬಿಜೆಪಿ ಲೀಡಿಂಗ್
ತಿರುವನಂತಪುರ: ಶಶಿತರೂರ್ ಮತ್ತೆ ಮುನ್ನಡೆ

ಕಾಂಗ್ರೆಸ್ ಪಕ್ಷವು ಫಲಿತಾಂಶದ ಬಗ್ಗೆ ಮಾತನಾಡಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಯ್ ಮಾಕನ್ ಅವರು ಬಿಜೆಪಿಯ ಪ್ರಚಾರಕ್ಕೆ ತಮ್ಮ ಪಕ್ಷವು ಸರಿಸಾಟಿಯೇ ಇರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಕಾಂಗ್ರೆಸ್ ವಿರುದ್ಧವಾಗಿ ಬರಬಹುದಾದ ಫಲಿತಾಂಶದ ಸುಳಿವಾ? ಕಾದು ನೋಡುವ.

ಉಳಿದಂತೆ ಬಿಜೆಪಿ ನಾಯಕರು ಪಕ್ಷದ ಗೆಲುವಿನ ಬಗ್ಗೆ ತುಂಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿ ಬೀಡುಬಿಟ್ಟಿದ್ದು ಅಲ್ಲಿಂದಲೇ ಫಲಿತಾಂಶಗಳನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ದೆಹಲಿಯಲ್ಲಿದ್ದು, ಅಲ್ಲಿಂದ ಫಲಿತಾಂಶಗಳ ಮೇಲೆ ಕಣ್ಣಿಟ್ಟಿದ್ದಾರೆ. (ಅನಂತಕುಮಾರ್ ಈ ಕಚೇರಿಯನ್ನು ಉಳಿಸಿಕೊಳ್ತಾರಾ?)

English summary
India Election Verdict 2014 : BJP has emerged as the single largest party in the Lok Sabha Election, and taking NDA tally to 335 seats. Congress lead UPA govt has got severe drubbing under Narendra Modi wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X