ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಎನ್ ಡಿಟಿವಿ ಪ್ರಣವ್ ರಾಯ್ ತೀರ್ಪು ಏನು?

By Srinath
|
Google Oneindia Kannada News

ನವದೆಹಲಿ, ಮೇ 15: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನು 24 ಗಂಟೆಯಷ್ಟೇ ಬಾಕಿ. ಈ ಮಧ್ಯೆ ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಎಕ್ಸಿಟ್ ಪೋಲ್ಸ್ ಭರಾಟೆ ಇನ್ನೂ ಮುಗಿದಿಲ್ಲ. ಬಹುತೇಕ ಎಲ್ಲಾ ಮಾಧ್ಯಮಗಳೂ ಎಕ್ಸಿಟ್ ಪೋಲ್ಸ್ ನೀಡಿವೆಯಾದರೂ ಚುನಾವಣಾ ಸಮೀಕ್ಷೆಗಳ ಪಿತಾಮಹ ಎನ್ನಬಹುದಾದ ಎನ್ ಡಿಟಿವಿಯ ಪ್ರಣವ್ ರಾಯರು ಇನ್ನೂ ತಮ್ಮ ತೀರ್ಪನ್ನು ಪ್ರಕಟಿಸಿರಲಿಲ್ಲ. ಅವರೂ ಈಗ ರೇಸಿನಲ್ಲಿ ಕಾಣಿಸಿಕೊಂಡಿದ್ದಾರೆ. ತುಸು ತಡವಾಗಿಯಾದರೂ ಪ್ರಣವ್ ರಾಯ್ ಅವರು ಹೆಚ್ಚು ನಂಬಿಕಾರ್ಯ ತೀರ್ಪನ್ನು ನೀಡುತ್ತಾರೆ ಎಂಬ ಮಾತಿದೆ.

NDA ತ್ರಿಶತಕ: ಗಮನಾರ್ಹವೆಂದರೆ ಅವರು ಇತರೆ ಮಾಧ್ಯಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮೋದಿ ನೇತೃತ್ವದ ಬಿಜೆಪಿಗೇ ಪೂರ್ಣ ಬಹುಮತ ಎಂದು ಘೋಷಿಸಿದ್ದಾರೆ. ಅಷ್ಟೇ ಏಕೆ ತಮ್ಮ ಸಮೀಕ್ಷೆಗಳು ಹೆಚ್ಚು ನಿಖರ/ನಂಬಿಕಾರ್ಹವೆನಿಸಿದರೆ NDA ತ್ರಿಶತಕವನ್ನೂ ಬಾರಿಸಬಲ್ಲದು ಎಂದು ಘೋಷಿಸಿದ್ದಾರೆ.

ಅಂದಹಾಗೆ 300ರ ಗಡಿ ದಾಟಿಸಿರುವುದು ಬಹುಶಃ ಎನ್ ಡಿಟಿವಿ ಮಾತ್ರವೇ ಇರಬಹುದು. ಜತೆಗೆ ನಾಳೆ ಅಧಿಕೃತ ಫಲಿತಾಂಶ ಹೊರಬೀಳುವ ಮುನ್ನ ಬಹುಶಃ ಇದೇ ಅಂತಿಮ ಎಕ್ಸಿಟ್ ಪೋಲ್ಸ್ ರಿಸಲ್ಟ್ ಆಗಬಹುದು.

ಇನ್ನು ತಮ್ಮ ತವರಿನಲ್ಲಿ ಅಂದರೆ ಪಶ್ಚಿಮ ಬಂಗಾಳದಲ್ಲಿ ದೀದಿಗೆ ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ? ಹಾಗೆಯೇ ಬೇರೆ ಸಮೀಕ್ಷೆಗಳಲ್ಲಿ ಒಂದು ಸೀಟನ್ನೂ ಸಂಪಾದಿಸದ ಆಮ್ ಆದ್ಮಿ ಪಕ್ಷ ಎಷ್ಟು ಸ್ಥಾನ ಗೆಲ್ಲಲಿದೆ ಎಂದು ಪ್ರಣವ್ ರಾಯ್ ಹೇಳುತ್ತಿದ್ದಾರೆ? ಬನ್ನಿ ಪ್ರಣವ್ ರಾಯ್ ನೇತೃತ್ವದ NDTV exit polls (ಇದಕ್ಕೆ Hansa Research ಸಂಸ್ಥೆ ನೆರವಾಗಿದೆ) ಸಮೀಕ್ಷೆ ಏನು ಹೇಳುತ್ತಿದೆ, ವಿವರವಾಗಿ ತಿಳಿಯೋಣ:

(ಗಮನಿಸಿ ಪ್ರಣವ್ ರಾಯ್ ಅವರ ಶಿಷ್ಯರುಗಳಾದ ರಾಜದೀಪ್ ಸರ್ದೇಸಾಯಿ (CNN-IBN) ಮತ್ತು ಅರ್ನಬ್ ಗೋಸ್ವಾಮಿ (Times Now) ಅವರು ನೀಡಿರುವ ಎಕ್ಸಿಟ್ ಪೋಲ್ಸ್ ತೀರ್ಪು ಒಂದು ತೂಕತ್ತಾದರೆ ಪ್ರಣವ್ ರಾಯರ ತೀರ್ಪು ಅದಕ್ಕಿಂತಲೂ ಹೆಚ್ಚು ತೂಕದಿಂದ ಕೂಡಿರುತ್ತದೆ).

NDTV- ಒಟ್ಟಾರೆ ಪಕ್ಷಗಳ ಬಲಾಬಲ ಎಷ್ಟು?

NDTV- ಒಟ್ಟಾರೆ ಪಕ್ಷಗಳ ಬಲಾಬಲ ಎಷ್ಟು?

ಬಿಜೆಪಿ ನೇತೃತ್ವದ ಎನ್ ಡಿಎ 279 ಸ್ಥಾನ; ಕಾಂಗ್ರೆಸ್ಸಿನ ಯುಪಿಎ 103; ಇತರೆ 161

NDTV poll survey: ಉತ್ತರ ಪ್ರದೇಶ ಪಕ್ಷಗಳ ಬಲಾಬಲ

NDTV poll survey: ಉತ್ತರ ಪ್ರದೇಶ ಪಕ್ಷಗಳ ಬಲಾಬಲ

ಉತ್ತರ ಪ್ರದೇಶ (80) ಬಿಜೆಪಿಗೆ 56 ಸ್ಥಾನ; ಎಸ್ ಪಿ 12 ; ಬಿಎಸ್ ಪಿ 8; ಕಾಂಗ್ರೆಸ್ 4

NDTV poll survey: ಬಿಹಾರದಲ್ಲಿ ಪಕ್ಷಗಳ ಬಲಾಬಲ

NDTV poll survey: ಬಿಹಾರದಲ್ಲಿ ಪಕ್ಷಗಳ ಬಲಾಬಲ

ಬಿಹಾರ (40)
ಬಿಜೆಪಿಗೆ 22 ಸ್ಥಾನ; ಕಾಂಗ್ರೆಸ್ ಆರ್ ಜೆಡಿ 14; ಜೆಡಿಯು 4;

NDTV poll survey: ಜಾರ್ಖಂಡ್ ದಲ್ಲಿ ಪಕ್ಷಗಳ ಬಲಾಬಲ

NDTV poll survey: ಜಾರ್ಖಂಡ್ ದಲ್ಲಿ ಪಕ್ಷಗಳ ಬಲಾಬಲ

ಜಾರ್ಖಂಡ್ (14)
ಬಿಜೆಪಿ 12; ಕಾಂಗ್ರೆಸ್ 1; ಇತರೆ 1

NDTV poll survey: ಹರ್ಯಾಣಾದಲ್ಲಿ ಪಕ್ಷಗಳ ಬಲಾಬಲ

NDTV poll survey: ಹರ್ಯಾಣಾದಲ್ಲಿ ಪಕ್ಷಗಳ ಬಲಾಬಲ

ಹರ್ಯಾಣಾ (10)
ಬಿಜೆಪಿ 7; ಕಾಂಗ್ರೆಸ್ 2; ಇತರೆ 1

NDTV poll survey: ಪಂಜಾಬ್ ಪಕ್ಷಗಳ ಬಲಾಬಲ

NDTV poll survey: ಪಂಜಾಬ್ ಪಕ್ಷಗಳ ಬಲಾಬಲ

ಪಂಜಾಬ್ (13)
ಬಿಜೆಪಿ+ ಶಿರೋಮಣಿ ಅಕಾಲಿ ದಳ 5; ಕಾಂಗ್ರೆಸ್ 6; ಎಎಪಿ 2

NDTV poll survey: ದೆಹಲಿ ಪಕ್ಷಗಳ ಬಲಾಬಲ

NDTV poll survey: ದೆಹಲಿ ಪಕ್ಷಗಳ ಬಲಾಬಲ

ದೆಹಲಿ (7)
ಬಿಜೆಪಿ 5; ಎಎಪಿ 2, ಕಾಂಗ್ರೆಸ್ 0

NDTV poll survey: ಗುಜರಾತ್ ಪಕ್ಷಗಳ ಬಲಾಬಲ

NDTV poll survey: ಗುಜರಾತ್ ಪಕ್ಷಗಳ ಬಲಾಬಲ

ಗುಜರಾತ್ (26)
ಬಿಜೆಪಿ 22; ಕಾಂಗ್ರೆಸ್ 4

NDTV poll survey: ಅಸ್ಸಾಂ ಪಕ್ಷಗಳ ಬಲಾಬಲ

NDTV poll survey: ಅಸ್ಸಾಂ ಪಕ್ಷಗಳ ಬಲಾಬಲ

ಅಸ್ಸಾಂ (14)
ಬಿಜೆಪಿ 6; ಕಾಂಗ್ರೆಸ್ 6, ಎಯುಡಿಎಫ್ 2

NDTV poll survey: ಪಶ್ಚಿಮ ಬಂಗಾಳ ಪಕ್ಷಗಳ ಬಲಾಬಲ

NDTV poll survey: ಪಶ್ಚಿಮ ಬಂಗಾಳ ಪಕ್ಷಗಳ ಬಲಾಬಲ

ಪಶ್ಚಿಮ ಬಂಗಾಳ (42)
ತೃಣಮೂಲ ಕಾಂಗ್ರೆಸ್ 30; ಎಡ ಪಕ್ಷಗಳು 7; ಬಿಜೆಪಿ 1; ಕಾಂಗ್ರೆಸ್ 4

NDTV poll survey: ಕೇರಳ ಪಕ್ಷಗಳ ಬಲಾಬಲ

NDTV poll survey: ಕೇರಳ ಪಕ್ಷಗಳ ಬಲಾಬಲ

ಕೇರಳ (20)
ಕಾಂಗ್ರೆಸ್ ಯುಡಿಎಫ್ 10; ಎಡರಂಗದ ಯುಡಿಎಫ್ 10

NDTV poll survey: ಕರ್ನಾಟಕ ಪಕ್ಷಗಳ ಬಲಾಬಲ

NDTV poll survey: ಕರ್ನಾಟಕ ಪಕ್ಷಗಳ ಬಲಾಬಲ

ಕರ್ನಾಟಕ (28)
ಬಿಜೆಪಿ 16; ಕಾಂಗ್ರೆಸ್ 10; ಜೆಡಿಎಸ್ 2

NDTV poll survey: ಒರಿಸ್ಸಾದಲ್ಲಿ ಪಕ್ಷಗಳ ಬಲಾಬಲ

NDTV poll survey: ಒರಿಸ್ಸಾದಲ್ಲಿ ಪಕ್ಷಗಳ ಬಲಾಬಲ

ಒರಿಸ್ಸಾ (21)
ಬಿಜೆಡಿ 13: ಬಿಜೆಪಿ 5: ಕಾಂಗ್ರೆಸ್ 3

NDTV poll survey: ಮಹಾರಾಷ್ಟ್ರದಲ್ಲಿ ಪಕ್ಷಗಳ ಬಲಾಬಲ

NDTV poll survey: ಮಹಾರಾಷ್ಟ್ರದಲ್ಲಿ ಪಕ್ಷಗಳ ಬಲಾಬಲ

ಮಹಾರಾಷ್ಟ್ರ (48)
ಬಿಜೆಪಿ 34: ಕಾಂಗ್ರೆಸ್ 13; ಎಂಎನ್ಎಸ್ 1

NDTV poll survey: ತಮಿಳುನಾಡಿನಲ್ಲಿ ಪಕ್ಷಗಳ ಬಲಾಬಲ

NDTV poll survey: ತಮಿಳುನಾಡಿನಲ್ಲಿ ಪಕ್ಷಗಳ ಬಲಾಬಲ

ತಮಿಳುನಾಡು (39)
ಎಐಎಡಿಎಂಕೆ 32; ಡಿಎಂಕೆ 5; ಬಿಜೆಪಿ 2; ಕಾಂಗ್ರೆಸ್ 0

NDTV poll survey: ರಾಜಸ್ಥಾನದಲ್ಲಿ ಪಕ್ಷಗಳ ಬಲಾಬಲ

NDTV poll survey: ರಾಜಸ್ಥಾನದಲ್ಲಿ ಪಕ್ಷಗಳ ಬಲಾಬಲ

ರಾಜಸ್ಥಾನ (25)
ಬಿಜೆಪಿ 21; ಕಾಂಗ್ರೆಸ್ 3; ಇತರೆ 1

NDTV poll survey: ಛತ್ತೀಸ್ ಗಢದಲ್ಲಿ ಪಕ್ಷಗಳ ಬಲಾಬಲ

NDTV poll survey: ಛತ್ತೀಸ್ ಗಢದಲ್ಲಿ ಪಕ್ಷಗಳ ಬಲಾಬಲ

ಛತ್ತೀಸ್ ಗಢ (11)
ಬಿಜೆಪಿ 9; ಕಾಂಗ್ರೆಸ್ 2;

NDTV poll survey: ಮಧ್ಯಪ್ರದೇಶದಲ್ಲಿ ಪಕ್ಷಗಳ ಬಲಾಬಲ

NDTV poll survey: ಮಧ್ಯಪ್ರದೇಶದಲ್ಲಿ ಪಕ್ಷಗಳ ಬಲಾಬಲ

ಮಧ್ಯಪ್ರದೇಶ (29)
ಬಿಜೆಪಿ 24; ಕಾಂಗ್ರೆಸ್ 5; ಬಿಎಸ್ಪಿ 0;

NDTV poll survey: ತೆಲಂಗಾಣದಲ್ಲಿ ಪಕ್ಷಗಳ ಬಲಾಬಲ

NDTV poll survey: ತೆಲಂಗಾಣದಲ್ಲಿ ಪಕ್ಷಗಳ ಬಲಾಬಲ

ತೆಲಂಗಾಣ (119 ವಿಧಾನಸಭಾ ಸ್ಥಾನಗಳು)
ಟಿಆರ್ ಎಸ್ 80-100; ಕಾಂಗ್ರೆಸ್ 18-30; ಟಿಡಿಪಿ 8-16; ಇತರೆ 8-16
ತೆಲಂಗಾಣ (17 ಲೋಕಸಭಾ ಸ್ಥಾನಗಳು)
ಟಿಆರ್ ಎಸ್ 17; ಕಾಂಗ್ರೆಸ್ 3; ಟಿಡಿಪಿ-ಬಿಜೆಪಿ 2; ಎಂಐಎಂ 1

NDTV poll survey: ಸೀಮಾಂಧ್ರದಲ್ಲಿ ಪಕ್ಷಗಳ ಬಲಾಬಲ

NDTV poll survey: ಸೀಮಾಂಧ್ರದಲ್ಲಿ ಪಕ್ಷಗಳ ಬಲಾಬಲ

ಸೀಮಾಂಧ್ರ (175 ವಿಧಾನಸಭಾ ಸ್ಥಾನಗಳು)
ವೈಎಸ್ಆರ್ ಕಾಂಗ್ರೆಸ್ 80-100; ಟಿಡಿಪಿ 75-95; ಇತರೆ 5-15
ಸೀಮಾಂಧ್ರ (25 ಲೋಕಸಭಾ ಸ್ಥಾನಗಳು)
ಟಿಡಿಪಿ 13; ವೈಎಸ್ಆರ್ ಕಾಂಗ್ರೆಸ್ 12; ಕಾಂಗ್ರೆಸ್ 0

English summary
Lok Sabha election 2014 : NDTV predicts huge win for Narendra Modi lead BJP. The survey even said the NDA could finish with 300 seats in the best case scenario. The poll predicted that the Congress will end with 103 seats and that other parties, mainly regional ones, would finish with 161 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X