ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಎನ್‌ಡಿಎ ಜಯಭೇರಿ : ಸಿವೋಟರ್ ಸಮೀಕ್ಷೆ

By Prasad
|
Google Oneindia Kannada News

ನವದೆಹಲಿ, ಸೆ. 13 : ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ಮೈತ್ರಿಕೂಟ ಮಹಾರಾಷ್ಟ್ರ ಅಕ್ಟೋಬರ್ 15ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಇಂಡಿಯಾ ಟಿವಿ ಮತ್ತು ಸಿವೋಟರ್ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆ ಬಹಿರಂಗಪಡಿಸಿದೆ.

ಆದರೆ, ಹರ್ಯಾಣಾದಲ್ಲಿ ಹರ್ಯಾಣಾ ಜನಹಿತ್ ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ತನ್ನ ಮೈತ್ರಿಯನ್ನು ಮುರಿದುಕೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಗಳಿಸುವುದರಿಂದ ಸ್ವಲ್ಪ ಹಿಂದೆ ಬೀಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಹರ್ಯಾಣಾದಲ್ಲಿ ಯಾವುದೇ ಮೈತ್ರಿಕೂಟಕ್ಕೆ ಯತ್ನಿಸದೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

ಸೆಪ್ಟೆಂಬರ್ ಮೊದಲ ವಾರ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ದೇಶದಲ್ಲಿ ನರೇಂದ್ರ ಮೋದಿ ಅಲೆ ಕಡಿಮೆಯಾಗುತ್ತಿದೆ ಎಂಬ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ಹೊರಬಿದ್ದಿರುವುದು ಬಿಜೆಪಿಗೆ ಗಸಗಸೆ ಪಾಯಸ ಕುಡಿದಂತಾಗಿದೆ. ಅ.15ರಂದು ಚುನಾವಣೆ ನಡೆಯಲಿದ್ದು, ಅ.19ರಂದು ಫಲಿತಾಂಶ ಹೊರಬೀಳಲಿದೆ. [ಎರಡು ರಾಜ್ಯಗಳ ಚುನಾವಣೆ ದಿನಾಂಕ]

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹಾರಾಷ್ಟ್ರದಲ್ಲಿ ಮೋಡಿ ಮಾಡಲಿದ್ದಾರಾ? ಕಾದು ನೋಡಿ. ಈ ಎರಡೂ ರಾಜ್ಯಗಳಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಪಡೆಯಲಿದೆ, ಯಾವ ಪಕ್ಷ ಎಷ್ಟು ಶೇಕಡಾವಾರು ಮತಗಳನ್ನು ಗಳಿಸಲಿದೆ, ಯಾರು ಏಳಲಿದ್ದಾರೆ, ಯಾರು ಬೀಳಲಿದ್ದಾರೆ ಎಂಬುದರ ವಿವರಗಳು ಮುಂದಿವೆ. [ಮೋದಿ ಹೊಗಳಿದ ಕಾಂಗ್ರೆಸ್ಸಿಗರು]

ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ?

ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ?

ಮಹಾರಾಷ್ಟ್ರದಲ್ಲಿ ಒಟ್ಟು ಇರುವ 228 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 206 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 59 ಸ್ಥಾನ ಗಳಿಸಲಷ್ಟೇ ಯಶಸ್ವಿಯಾಗಲಿದೆ. ಮತ್ತು ಇತರ ಪಕ್ಷಗಳು 23 ಸ್ಥಾನ ಗಳಿಸಲಿವೆ.

ಎರಡು ದಶಕಗಳ ನಂತರ ಬಿಜೆಪಿ ಮತ್ತೆ ಅಧಿಕಾರಕ್ಕೆ

ಎರಡು ದಶಕಗಳ ನಂತರ ಬಿಜೆಪಿ ಮತ್ತೆ ಅಧಿಕಾರಕ್ಕೆ

ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿ, ಆರ್‌ಪಿಐ (ಅಥವಲೆ), ಸ್ವಾಭಿಮಾನಿ ಪಕ್ಷ ಮತ್ತು ರಾಷ್ಟ್ರೀಯ ಸಮಾಜವಾದಿ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿವೆ. ಸಮೀಕ್ಷೆ ನಿಜವಾದರೆ ಹೆಚ್ಚೂಕಡಿಮೆ ಎರಡು ದಶಕಗಳ ನಂತರ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ. ಶೇ.72ರಷ್ಟು ಸ್ಥಾನಗಳನ್ನು ಎನ್‌ಡಿಎ ತನ್ನದಾಗಿಸಿಕೊಳ್ಳಲಿದೆ.

ಸೋನಿಯಾ-ಪವಾರ್‌ದೆ ಈ ಬಾರಿ ಮುಖಭಂಗ?

ಸೋನಿಯಾ-ಪವಾರ್‌ದೆ ಈ ಬಾರಿ ಮುಖಭಂಗ?

2009ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಒಟ್ಟು 144 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿದ್ದವು. ಬಿಜೆಪಿ 46 ಮತ್ತು ಶಿವಸೇನೆ 45 ಸ್ಥಾನಗಳನ್ನು ಗಳಿಸಿ ವಿರೋಧಪಕ್ಷ ಸ್ಥಾನದಲ್ಲಿ ಕುಳಿತಿದ್ದವು.

ಹರ್ಯಾಣಾದಲ್ಲಿ ಬಿಜೆಪಿಗೆ ಚಮತ್ಕಾರ ನಡೆಯಲಿದೆಯೆ?

ಹರ್ಯಾಣಾದಲ್ಲಿ ಬಿಜೆಪಿಗೆ ಚಮತ್ಕಾರ ನಡೆಯಲಿದೆಯೆ?

ಹರ್ಯಾಣಾದಲ್ಲಿ 90 ಸ್ಥಾನಗಳ ವಿಧಾನಸಭೆಯಲ್ಲಿ 37 ಸ್ಥಾನಗಳನ್ನು ಬಿಜೆಪಿ ಪಡೆಯಲಿದ್ದು, ಬಹುಮತ ಪಡೆಯಲು ಬೇಕಿದ್ದ 46 ಸ್ಥಾನಗಳಿಂದ ಹಿಂದೆ ಬೀಳಲಿದೆ ಎನ್ನುತ್ತದೆ ಸಮೀಕ್ಷೆ. ಇಂಡಿಯನ್ ನ್ಯಾಷನಲ್ ಲೋಕದಳ 22 ಮತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ 19 ಸ್ಥಾನ ಗಳಿಸಲಿದೆ. 2009ರ ಚುನಾವಣೆಯಲ್ಲಿ ಬಿಜೆಪಿ ಕೇವಲ 4 ಸ್ಥಾನ ಗೆದ್ದಿತ್ತು.

English summary
Pre-poll survey conducted by India TV and C-Voter has predicted that BJP-Shiv Sena lead NDA will get clear majority in Maharashtra and BJP will fall short of majority in Haryana election. Election will be conducted on Oct 15 and result will be announced on Oct 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X