ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿ: ಮೋದಿ ಸೋಲಲಿ; ಅರವಿಂದ್ ಗೆಲ್ಲಲಿ- ಅನಂತ ಆಶಯ

By Srinath
|
Google Oneindia Kannada News

ನವದೆಹಲಿ, ಏಪ್ರಿಲ್ 8- ಗುಲ್ಬರ್ಗದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯುಆರ್ ಅನಂತಮೂರ್ತಿ ಅವರು ಮೋದಿ ವಿಷಯದಲ್ಲಿ U ಟರ್ನ್ ತೆಗೆದುಕೊಂಡಿದ್ದಾರೆ.

ಏನು ಹಾಗಾದರೆ ಅನಂತಮೂರ್ತಿ ಅವರು ಮೋದಿ ಪಕ್ಷ ಸೇರಿದರೆ ಎಂದು ಕೇಳಬೇಡಿ. ಆದರೆ ಅನಂತಮೂರ್ತಿ ಅವರು 'ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವೆ' ಎಂದು ಹೇಳಿದ್ದ ಮಾತನ್ನು ವಾಪಸ್ ತೆಗೆದುಕೊಂಡಿದ್ದಾರೆ. 'ಭಾವೋದ್ವೇಗದಲ್ಲಿ ಹಾಗೆ ಹೇಳಿದ್ದೆ ಅಷ್ಟೇ. ಅದು ನನ್ನ ಕಡೆಯಿಂದಾದ ಮಿಸ್ಟೇಕ್. ಅದನ್ನೆಲ್ಲಾ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ' ಎಂದು ದಿಲ್ಲಿ ಪತ್ರಕರ್ತರೆದುರು ಅಲವತ್ತುಕೊಂಡಿದ್ದಾರೆ.

ಗಮನಾರ್ಹವೆಂದರೆ ಇತ್ತ ರಾಜ್ಯ ಬಿಜೆಪಿ ಘಟಕವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಬೆನ್ನಿಗೆ ಅತ್ತ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅನಂತಮೂರ್ತಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆಯೂ ಅನಂತಮೂರ್ತಿ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವ ವಿಚಾರ ತಮಗಿಲ್ಲವೆಂದು ಬೆಂಗಳೂರಿನಲ್ಲಿ ಹೇಳಿದ್ದರು.

ಮೋದಿ ಗೂಳಿಯಿದ್ದಂತೆ; ನಾಗರಿಕತೆಯೇ ಪಲ್ಲಟಗೊಳ್ಳಲಿದೆ

ಮೋದಿ ಗೂಳಿಯಿದ್ದಂತೆ; ನಾಗರಿಕತೆಯೇ ಪಲ್ಲಟಗೊಳ್ಳಲಿದೆ

'ಮೋದಿ ಅಂತ್ಲೇ ಅಲ್ಲ. ಯಾರೇ ಪ್ರಧಾನಿಯಾದರೂ ದೇಶ ಬಿಟ್ಟು ಹೋಗುವ ವಿಚಾರ ನನಗಿಲ್ಲ. ಅ ಹಾಗಂತ ಮೋದಿಗೆ ನಮೋ ಎಂದಿರುವೆ ಅಂತಲ್ಲ. ಮೋದಿ ಸಹಿತ ಬಿಜೆಪಿಯನ್ನು ಇಂದಿಗೂ ವಿರೋಧಿಸುವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಮೋದಿ ಗೂಳಿಯಿದ್ದಂತೆ. ಇಂತಹ ವ್ಯಕ್ತಿತ್ವ ಇರುವವರಿಗೆ ಅಧಿಕಾರ ಸಿಕ್ಕರೆ ಅವರು ತಾವು ಮಾಡುವ ಕಾರ್ಯಕಗಳಿಗೆ ಸಹಮತವನ್ನು ಸೃಷ್ಟಿಸಿಕೊಳ್ಳುತ್ತಾರೆ. ವಿರೋಧಕ್ಕೆ ಮಣೆ ಹಾಕುವುದಿಲ್ಲ. ನಾನು ಇದನ್ನು ಒಪ್ಪಲಾರೆ. ಅವರು ಪ್ರಧಾನಿಯಾದರೆ ನಮ್ಮ ನಾಗರಿಕತೆಯೇ ಪಲ್ಲಟಗೊಳ್ಳಲಿದೆ. ಹಾಗಾಗಿ ಮೋದಿಯನ್ನು ಸೋಲಿಸಲಬೇಕಿದೆ ಎಂದು ಅನಂತಮೂರ್ತಿ ಕರೆ ನೀಡಿದರು.

ಪ್ರಜಾಪ್ರಭುತ್ವ, ಸಂವಿಧಾನ ಶಕ್ತಿಶಾಲಿಯಾಗಿದೆ:

ಪ್ರಜಾಪ್ರಭುತ್ವ, ಸಂವಿಧಾನ ಶಕ್ತಿಶಾಲಿಯಾಗಿದೆ:

ಇನ್ನು ಮೋದಿ ಪ್ರಧಾನಿಯಾದರೆ ಹಿಟ್ಲರ್ ಆಗಬಹುದಾ? ಎಂದು ಪ್ರಶ್ನಿಸಿದಾಗ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿದೆ. ನಮ್ಮ ಸಂವಿಧಾನ ಶಕ್ತಿಶಾಲಿಯಾಗಿದೆ. ಆದ್ದರಿಂದ ಮೋದಿ ಆಟ ನಡೆಯೋಲ್ಲ' ಎಂದು ಯುಆರ್ ಅನಂತಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಕುಲಾಧಿಪತಿಯಾಗಿ ಸಂಬಳ ಪಡೆಯುತ್ತಿಲ್ಲ

ಕುಲಾಧಿಪತಿಯಾಗಿ ಸಂಬಳ ಪಡೆಯುತ್ತಿಲ್ಲ

ಇನ್ನು ಯಡಿಯೂರಪ್ಪ ಅವರು ನಾನು ಕುಲಾಧಿಪತಿಯಾಗಿ ತಿಂಗಳಿಗೆ 1 ಲಕ್ಷ ರೂ ಸಂಬಳ ಪಡೆಯುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಒಂದೇ ಒಂದು ರೂಪಾಯಿ ಸಂಬಳವನ್ನೂ ಪಡೆದಿಲ್ಲ' ಎಂದು ಯುಆರ್ ಅನಂತಮೂರ್ತಿ ಸ್ಪಷ್ಟಪಡಿಸಿದ್ದಾರೆ.

ವಾರಾಣಾಸಿಯಲ್ಲಿ ಕೇಜ್ರಿವಾಲ್ ಮೋದಿಯನ್ನು ಸೋಲಿಸಬೇಕು:

ವಾರಾಣಾಸಿಯಲ್ಲಿ ಕೇಜ್ರಿವಾಲ್ ಮೋದಿಯನ್ನು ಸೋಲಿಸಬೇಕು:

ಇದೇ ವೇಳೆ ಯುಆರ್ ಅನಂತಮೂರ್ತಿ ಅವರು ಅರವಿಂದ್ ಕೇಜ್ರಿವಾಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಾದರೂ ಕರ್ನಾಟಕದಲ್ಲಿ ತಾವು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುವುದಾಗಿಯೂ, ಸಿದ್ದು ಒಳ್ಳೆಯ ಮುಖ್ಯಮಂತ್ರಿಯಾಗಿದ್ದು ಅವರು ದುರ್ಬಲರಾಗಬಾರದು ಎಂಬ ಉದ್ದೇಶದಿಂದ ಅವರ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿಯೂ ಅವರು ಹೇಳಿದರು.
ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಹಾಗೆಯೇ, ವಾರಾಣಾಸಿಯಲ್ಲಿ ಕೇಜ್ರಿವಾಲ್ ಮೋದಿಯನ್ನು ಸೋಲಿಸಬೇಕು ಎಂದು ಅನಂತಮೂರ್ತಿ ಆಶಿಸಿದರು.

English summary
Lok Sabha Election 2014 - Arvind Kejriwal in Varanasi and Congress in Karnataka should defeat Modi says Dr. UR Ananthamurthy in New Delhi. Also Vice Chancellor Dr. UR Ananthamurthy has said that he is not taking any salary as the Central University of Karnataka (CUK) Vice Chancellor as alleged by BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X