ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥ ದುರಂತ: ಅಂತ್ಯಕ್ರಿಯೆ ಕಾಣದ ಶವಗಳ ಪತ್ತೆ

By Srinath
|
Google Oneindia Kannada News

ನವದೆಹಲಿ, ಜೂನ್ 13: ಕೇದಾರನಾಥ ಧಾಮದಲ್ಲಿ ಕಳೆದ ವರ್ಷ ಸುನಾಮಿ ಕಾಣಿಸಿಕೊಂಡು ದೊಡ್ಡ ದುರಂತ ಸಂಭವಿಸಿತ್ತು. ಅದಕ್ಕಿಂತಲೂ ದುರಂತವೆಂದರೆ ಆಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಅನೇಕ ಶವಗಳಿಗೆ ಇದುವರೆಗೂ ಅಂತ್ಯ ಸಂಸ್ಕಾರ ನಡೆದಿಲ್ಲ. ಅನಾಥ ಶವಗಳಾಗಿ ಬೆಟ್ಟಗುಡ್ಡಗಳಲ್ಲಿ ದುರಂತದ ಪಳೆಯುಳಿಕೆಗಳಂತೆ ಎಲ್ಲೆಂದರಲ್ಲಿ ಹರಡಿಕೊಂಡಿವೆ.

ಇದು ಉತ್ತರಾಖಂಡ ಸರಕಾರದ ಹೊಣೆಗೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರವಾಹದಲ್ಲಿ ಮೃತಪಟ್ಟ ಎಲ್ಲ ವ್ಯಕ್ತಿಗಳ ಶವಗಳು ದೊರೆತಿದ್ದು ಎಲ್ಲವಕ್ಕೂ ಸಂಸ್ಕಾರ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೇಳಿಕೊಂಡಿತ್ತು. ಆದರೆ ಈಗ ಛಟ್ಟಿ ಅರಣ್ಯದಲ್ಲಿ (Chatti) ಪತ್ತೆಯಾಗುತ್ತಿರುವ ಶವಗಳನ್ನು ನೋಡಿದರೆ ಸರಕಾರ ಬೊಗಳೆ ಬಿಟ್ಟಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. (ಕೊಚ್ಚಿಹೋಗಿದ್ದ ಶಿವನ ಚಿನ್ನದ ಕಿರೀಟ ಸಿಕ್ಕಿತು!)

kedarnath-tragedy-dead-bodies-of-pilgrims-found-even-after-one-year

ಶವಗಳು, ಅಸ್ಥಿಪಂಜರಗಳು, ಕೈಚೀಲಗಳು, ಇತರೆ ಲಗೇಜು, ಪಾದರಕ್ಷೆಗಳು ಎಲ್ಲೆಂದರಲ್ಲಿ ಹರಡಿರುವುದನ್ನು ನೋಡಿದರೆ ಉತ್ತರಾಖಂಡ ಸರಕಾರ ಸಂತ್ರಸ್ತ/ಪರಿಹಾರ ಕಾರ್ಯಗಳನ್ನು ಅರೆಬರೆಯಾಗಿ ಮಾಡಿದೆ ಎಂಬುದು ರುಜುವಾಗುತ್ತದೆ. (ಕೇದಾರನಾಥ ಪುಣ್ಯಕ್ಷೇತ್ರದಲ್ಲಿ SBIಗೆ ಸಿಕ್ತು 1.9 ಕೋಟಿ ರೂ)

ಒಂದು ವರದಿಯ ಪ್ರಕಾರ ಜನ ಪ್ರವಾಹ ಬರುತ್ತಿದ್ದಂತೆ ರಕ್ಷಣೆಗಾಗಿ ಬೆಟ್ಟದ ಮೇಲ್ಭಾಗಗಳಿಗೆ ತೆರಳಿ ಆಶ್ರಯ ಪಡೆದಿದ್ದಾರೆ. ಆದರೆ ಅಲ್ಲಿ ಪರಿಹಾರಗಳು ಲಭಿಸದೆ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಆದರೆ ಈ ಜಾಗಗಳಿಗೆ ಇದೀಗ ಖಾಸಗಿ ಸುದ್ದಿವಾಹಿನಿ ತಂಡವೊಂದು ತಲುಪಿದ್ದು, ಅಲ್ಲಿನ ದುಃಸ್ಥಿಯನ್ನು ಚಿತ್ರೀಕರಿಸಿಕೊಂಡು ಬಂದಿದೆ.

ಆದರೆ ಇದೀಗ ವಿಡಿಯೋ ನೋಡಿದ ರುದ್ರಪ್ರಯಾಗದ ಜಿಲ್ಲಾಧಿಕಾರಿ ತಕ್ಷಣ ಸ್ಥಳಕ್ಕೆ ಕಾರ್ಯೊಡೆಯೊಂದನ್ನು ಕಳುಹಿಸಿ, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸುವುದಾಗಿ ಹೇಳುತ್ತಿದ್ದಾರೆ. ಒಂದು ವರ್ಷದ ಹಿಂದೆ 2013ರ ಜೂನ್ ತಿಂಗಳಲ್ಲಿ ಮೇಘಸ್ಫೋಟವಾಗಿ ಉತ್ತರಾಖಂಡ ಪ್ರಳಯಸದೃಶವಾಗಿತ್ತು. (ಈ ಬಾರಿ ವಿಚಿತ್ರ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ)

Kedarnath tragedy: Dead bodies of pilgrims found even after one year
English summary
Kedarnath tragedy: Dead bodies of pilgrims found even after one year. Contrary to Uttarakhand government's claims that last rites of all the dead bodies were performed, several decomposed bodies and skeletons have been found in Jungle Chatti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X