ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ 2 ತಿಂಗಳಿಗೆ ಕಿ.ಮೀ.ಗೆ 2 ಪೈಸೆ ರೈಲು ಟಿಕೆಟ್ ದರ ಹೆಚ್ಚಳ?

By Kiran B Hegde
|
Google Oneindia Kannada News

ನವದೆಹಲಿ, ಜ. 1: ಹಲವು ವರ್ಷಗಳ ನಂತರ ಟಿಕೆಟ್ ದರ ಏರಿಕೆ ಮಾಡಿದ್ದ ಭಾರತೀಯ ರೈಲ್ವೆ ಇಲಾಖೆ ಮತ್ತೆ ದರ ಏರಿಸುವ ಸಂಭವನೀಯತೆ ಇದೆ.

ರೈಲ್ವೆಯನ್ನು ನಷ್ಟದಿಂದ ಪಾರು ಮಾಡುವುದು ಹಾಗೂ ಇಲಾಖೆಯ ಆರ್ಥಿಕ ಸುಧಾರಣೆಗಾಗಿ ಕ್ರಮ ಕೈಗೊಳ್ಳಲು ಅಧ್ಯಯನ ನಡೆಸುವ ನಿಟ್ಟಿನಲ್ಲಿ ಹಣಕಾಸು ಸೇವೆಗಳ ಮಾಜಿ ಕಾರ್ಯದರ್ಶಿ ಡಿ.ಕೆ. ಮಿತ್ತಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ಇಲಾಖೆ ರಚಿಸಿತ್ತು. ಈ ಸಮಿತಿ ವರದಿ ಸಲ್ಲಿಸಿದ್ದು, ನಷ್ಟ ತುಂಬಿಕೊಳ್ಳುವವರೆಗೆ ದರ ಏರಿಕೆ ಮಾಡಬೇಕೆಂದು ವರದಿಯಲ್ಲಿ ಶಿಫಾರಸು ಮಾಡಿದೆ. [ರೈಲು ಪ್ರಯಾಣಿಕರ ಮೇಲೆ ಬೆಲೆ ಏರಿಕೆ ಹೊರೆ]

railway

ಪ್ರತಿ ಎರಡು ತಿಂಗಳುಗಳಿಗೊಮ್ಮೆ ಕಿಲೋ ಮೀಟರ್‌ಗೆ 2 ಪೈಸೆಯಂತೆ ದರ ಏರಿಸಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. [ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ]

ಪ್ರಯಾಣಿಕರಿಗೆ ಲಾಭ ಹೇಗೆ? : ಅಲ್ಲದೆ, ಪ್ಯಾಸೆಂಜರ್ ರೈಲಿನ ಕನಿಷ್ಠ ಪ್ರಯಾಣ ದೂರವನ್ನು ಈಗಿನ 10 ಕಿ.ಮೀ.ನಿಂದ 20 ಕಿ.ಮೀ.ಗೆ ಹಾಗೂ ಎಕ್ಸ್‌ಪ್ರೆಸ್ ರೈಲಿನ ಕನಿಷ್ಠ ದೂರವನ್ನು 50ರಿಂದ 100 ಕಿ.ಮೀ.ಗೆ ಹೆಚ್ಚಿಸಬೇಕು ಎಂದು ವರದಿಯಲ್ಲಿ ಸೂಚಿಸಲಾಗಿದೆ. ಕನಿಷ್ಠ ದೂರವನ್ನು ಹೆಚ್ಚಿಸುವುದರಿಂದ ಕನಿಷ್ಠ ದರದ ಈಗಿನ ಎರಡು ಪಟ್ಟು ದೂರಕ್ಕೆ ಅನ್ವಯಿಸಲಿದೆ ಇದರಿಂದ ಪ್ರಯಾಣಿಕರಿಗೂ ಲಾಭ ಎಂದು ವರದಿಯಲ್ಲಿ ಹೇಳಲಾಗಿದೆ. [ಮೈಸೂರು ರೈಲು ವಿಭಾಗಕ್ಕೆ 23 ಟಿಕೆಟ್ ಯಂತ್ರ]

English summary
Indian railway may hike the ticket fare again. A committee which was formed to study for strengthening economical status of the Indian Railway has recommended for ticket fare hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X