ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ನಿಮ್ಮ ಪ್ರಧಾನ ಸೇವಕ : ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಆ.15 : ಅಭೂತಪೂರ್ವ ಭದ್ರತೆಯ ನಡುವೆ ದೆಹಲಿಯ ಕೆಂಪುಕೋಟೆಯಲ್ಲಿ 68ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೆರವೇರಿಸಿದ್ದಾರೆ. ಬಡತನ ನಿರ್ಮೂಲನೆಗೆ ಎಲ್ಲರೂ ಒಂದಾಗೋಣ ಎಂದು ಮೋದಿ ಐತಿಹಾಸಿಕ ಕೆಂಪುಕೋಟೆಯ ಮೇಲಿನ ಭಾಷಣದ ಮೂಲಕ ದೇಶದ ಜನರಿಗೆ ಕರೆ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ ಮೊದಲು ದೆಹಲಿಯ ರಾಜ್​ಘಾಟ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಮಹಾತ್ಮಾ ಗಾಂಧಿಜೀಯವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ನಂತರ ಕೆಂಪುಕೋಟೆಗೆ ಆಗಮಿಸಿದ ಅವರು, ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದರು. ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಕೆಂಪುಕೋಟೆಯ ಮೇಲಿಂದ ಭಾಷಣ ಮಾಡಿದರು.

Narendra Modi

ತಮ್ಮ ಭಾಷಣದಲ್ಲಿ ಸ್ವಚ್ಛತೆ, ಡಿಜಿಟಲ್ ಕ್ರಾಂತಿ, ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ದೇಶದ ಅಭಿವೃದ್ಧಿಗಾಗಿ ಪ್ರತಿ ಕ್ಷಣವೂ ದುಡಿಯುತ್ತೇನೆ ಎಂದು ದೇಶದ ಜನರಿಗೆ ಭರವಸೆ ನೀಡಿದರು. ಪ್ರಧಾನಿ ನಿಮ್ಮ ಸೇವಕ ಎಂದು ದೇಶದ ಜನರಿಗೆ ಹೇಳಿದ ಮೋದಿ, ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ

* ನೀವು 14 ಗಂಟೆ ಕೆಲಸ ಮಾಡಿದರೆ ನಾನು 18 ಗಂಟೆ ಕೆಲಸ ಮಾಡುತ್ತೇನೆ. ಏಕೆಂದರೆ, ನಾನು ನಿಮ್ಮ ಸೇವಕ. ನಾನು ಪ್ರಧಾನಿಯಾಗಿ ಇಲ್ಲಿ ಬಂದಿಲ್ಲ ನಿಮ್ಮ ಸೇವಕನಾಗಿ ಬಂದಿದ್ದೇನೆ ಎಂದು ಮೋದಿ ಹೇಳಿದರು.

* ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನವನ್ನು ಸ್ವಚ್ಚತಾ ದಿನವಾಗಿ ಆಚರಿಸೋಣ ಎಂದು ಕರೆ ನೀಡಿದ ಪ್ರಧಾನಿ ಮೋದಿ, ದೇಶದ ಪ್ರತಿ ಶಾಲೆಯಲ್ಲೂ ಶೌಚಾಲಯ ನಿರ್ಮಾಣವಾಗಬೇಕು ಎಂದು ಹೇಳಿದರು. ಗ್ರಾಮಗಳಲ್ಲೂ ಸಹ ಶೌಚಾಲಯ ನಿರ್ಮಾಣವಾಗಬೇಕು ಎಂದರು.

* ದೇಶದ ಅಭಿವೃದ್ಧಿಯಾಗಬೇಕಾದರೆ ದೇಶದಲ್ಲಿರುವ ಪ್ರತಿ ರಾಜ್ಯಗಳು ಅಭಿವೃದ್ಧಿಯಾಗಬೇಕು. ಪ್ರತಿ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಮೋದಿ ಹೇಳಿದರು.

* ಮೇಡ್ ಇನ್ ಇಂಡಿಯಾ ವಿದೇಶದಿಂದ ಆಮದಾಗುವ ವಸ್ತುಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದಿಸೋಣ, ಆಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ ಮೋದಿ, ಪ್ರತಿ ಉತ್ಪನ್ನಗಳ ಮೇಡ್ ಇನ್ ಇಂಡಿಯಾ ಎಂಬ ಬರಹ ಕಾಣಬೇಕು ಎಂದರು.

* ನಮ್ಮ ದೇಶದಲ್ಲಿ ಎಲ್ಲಾ ಯೋಜನೆಗಳು ಪ್ರಧಾನಿ ಅವರ ಹೆಸರಿನಲ್ಲಿದೆ ಎಂದು ಹೇಳಿದ ಮೋದಿ, ಸಂಸದರ ಹೆಸರಿನಲ್ಲಿ ಆದರ್ಶ ಗ್ರಾಮ ಯೋಜನೆಯನ್ನು ಘೋಷಿಸಿದರು. ಸಂಸದರು ದೇಶದ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಬೇಕು ಎಂದು ಹೇಳಿದರು.

* ಸಾರ್ಕ್ ರಾಷ್ಟ್ರಗಳ ಭೇಟಿಯನ್ನು ಸ್ಮರಿಸಿದ ನರೇಂದ್ರ ಮೋದಿ ಅವರು ಬಡತನ ನಿರ್ಮೂಲನೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡೋಣ ಎಂದರು.

* ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದ ಮೋದಿ, ಹೂಡಿಕೆದಾರರು ಭಾರತದಲ್ಲಿ ಬಂದು ಹೂಡಿಕೆ ಮಾಡುವಂತೆ ಮನವಿ ಮಾಡಿದರು. ಭಾರತ ಯುವಕರ ದೇಶ ಎಂದ ಮೋದಿ ಪ್ರತಿಭಾನ್ವಿತ ಯುವಕರು ನಮ್ಮ ದೇಶದಲ್ಲಿ ಇದ್ದಾರೆ. ಇಂತಹ ಯುವಕರ ಪ್ರಯೋಜನ ಪಡೆಯಲು ನಾವು ಯೋಜನೆ ರೂಪಿಸಬೇಕಿದೆ.

* ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ತಂದುಕೊಟ್ಟ ಕ್ರೀಡಾಪಟುಗಳ ಸಾಧನೆಯನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ ಮೋದಿ, ಅವರಿಗೆ ಅಭಿನಂದನೆ ಸಲ್ಲಿಸಿದರು.

* ಜನ್ ಧನ್ ಯೋಜನೆ ಘೋಷಣೆ ಮಾಡಿದ ಪ್ರಧಾನಿ ಮೋದಿ ದೇಶದ ಪ್ರತಿ ಕುಟುಂಬಕ್ಕೂ 1 ಲಕ್ಷ ರು. ಜೀವ ವಿಮೆಯ ಭರವಸೆ ನೀಡಿದರು.

English summary
Prime Minister Narendra Modi delivers his first Independence Day address from the ramparts of the historic Red Fort on August 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X