ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ: ಕೋಟ್ಯಂತರ ಲೀ ಮದ್ಯ ಪ್ರವಾಹಕ್ಕೆ ತಡೆ

By Srinath
|
Google Oneindia Kannada News

ನವದೆಹಲಿ, ಏ.23: ಹಾಲಿ ಲೋಕಸಭಾ ಚುನಾವಣೆಯಲ್ಲಿ ನಾಳೆ ಆರನೇ ಹಂತದ ಮಹತ್ವದ ಚುನಾವಣೆಗೆ ಮತಗಟ್ಟೆಗಳು ಸಿದ್ಧವಾಗಿವೆ. ಈ ಮಧ್ಯೆ, ದೇಶಾದ್ಯಂತ ಇದುವರೆಗೂ 1.3 ಕೋಟಿ ಲೀಟರ್ ಮದ್ಯ ಪ್ರವಾಹ ಹರಿದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈವರೆಗೂ ಆಯೋಗವು ಚುನಾವಣೆಗಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 240 ಕೋಟಿ ರೂ ಹಣ ವಶ ಪಡಿಸಿಕೊಂಡಿದೆ. ಹೆರಾಯಿನ್, ಡ್ರಗ್ಸ್‌ ಸೇರಿದಂತೆ ಭಾರಿ ಪ್ರಮಾಣದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗವು ಹೇಳಿದೆ.

Lok Sabha election 2014- Election Commission curbs free flow of money and liquor

ಆಂಧ್ರ ಪ್ರದೇಶದಲ್ಲಿ ಅತ್ಯಧಿಕ 102 ಕೋಟಿ ರೂ, ಕರ್ನಾಟಕದಲ್ಲಿ 20.53 ಕೋಟಿ ರೂ, ತಮಿಳುನಾಡಿನಲ್ಲಿ 39 ಕೋಟಿ ವಶಪಡಿಸಿಕೊಳ್ಳಲಾಗಿದೆಯಂತೆ. ಅಂದರೆ ಮತದಾರರನ್ನು ಪ್ರಲೋಭೆಗೊಡ್ಡಲು ರಾಜಕೀಯ ಪಕ್ಷಗಳು ಅಗ್ಗದ/ಅಡ್ಡ ಮಾರ್ಗಗಳನ್ನು ಅನುಸರಿಸುತ್ತಿರುವುದು ವೇದ್ಯವಾಗುತ್ತದೆ.

1.3 ಕೋಟಿ ಲೀಟರ್ (13 ದಶಲಕ್ಷ ಲೀಟರ್) ಮದ್ಯವೂ ಮತದಾರರನ್ನು ತಲುಪಬೇಕಿತ್ತು. ಆದರೆ ಆಯೋಗದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಅದಕ್ಕೆಲ್ಲ ಕಡಿವಾಣ ಬಿದ್ದಿದ್ದು, ಮಾಲು ಚುನಾವಣಾಧಿಕಾರಿಗಳ ವಶಕ್ಕೆ ಬಂದಿದೆ. ಇದರಲ್ಲಿ ಬಹಳಷ್ಟು ಮದ್ಯ ಸ್ಥಳೀಯವಾಗಿ ತಯಾರಿಸಿದ ಶರಾಬು ಆಗಿದೆ.

ಮತದಾರರನ್ನು ಸೆಳೆಯಲು ಬಳಸುವ ಹಣ ಮತ್ತು ಹೆಂಡಕ್ಕೆ ಸಮರ್ಥವಾಗಿ ಬ್ರೇಕ್ ಹಾಕುವ ಮೂಲಕ ಆಯೋಗವು ಈ ಬಾರಿ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದೆ. ಇದಕ್ಕಾಗಿ ಈ ಬಾರಿ ಭಾರಿ ಪ್ರಮಾಣದಲ್ಲಿ ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿತ್ತು ಎಂಬುದು ಗಮನಾರ್ಹ.

ಆದರೆ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಅಂದರೆ 104 ಕೆಜಿ ಹೆರಾಯಿನ್ ಸಹ ವಶಪಡಿಸಿಕೊಂಡಿರುವುದು ಆತಂಕಕಾರಿಯಾಗಿದೆ. ಆದರೆ ಇದು ಯಾವ ರಾಜ್ಯಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಆಯೋಗ ಬಹಿರಂಗಪಡಿಸಿಲ್ಲ.

English summary
Lok Sabha election 2014- Election Commission curbs free flow of money and liquor
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X