ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮಣಿಪುರಿ ಯುವಕನ ಬರ್ಬರ ಹತ್ಯೆ

By Mahesh
|
Google Oneindia Kannada News

ನವದೆಹಲಿ, ಜು.21: ದೆಹಲಿಯಲ್ಲಿ ಮತ್ತೊಮ್ಮೆ ಈಶಾನ್ಯ ರಾಜ್ಯ ಮೂಲದವರಿಗೆ ಆತಂಕ ಮೂಡಿದೆ. ಸೋಮವಾರ ಮುಂಜಾನೆ ಮನೆಗೆ ಹಿಂತಿರುಗುತ್ತಿದ್ದ ಮಣಿಪುರ ಮೂಲದ ಬಿಪಿಒ ಉದ್ಯೋಗಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಣಿಪುರಿ ಮೂಲದ 30 ವರ್ಷ ವಯಸ್ಸಿನ ಶಾಲೋನಿ ಎಂಬುವರ ಮೇಲೆ ಐದಾರು ಜನ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಂದು ಹಾಕಿ ಕಾರಿನಲ್ಲಿ ಪರಾರಿಯಾಗಿರುವ ಘಟನೆ ಈಶಾನ್ಯ ರಾಜ್ಯದವರನ್ನು ಬೆಚ್ಚಿ ಬೀಳಿಸಿದೆ.

ಕೋಟ್ಲಾ ಮುಬಾರಾಕ್ ಪುರ್ ನಲ್ಲಿರುವ ಮನೆಗೆ ಹಿಂತಿರುಗುತ್ತಿದ್ದ ಶಲೋನಿ ಮೇಲೆ ಹಲ್ಲೆ ನಡೆಯುತ್ತಿರುವ ಬಗ್ಗೆ ದೆಹಲಿ ಪೊಲೀಸರಿಗೆ ತಡರಾತ್ರಿ 2.30 ರ ಸುಮಾರಿಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ಧಾವಿಸುವ ವೇಳೆಗೆ ಹಲ್ಲೆಕೋರರು ಶಲೋನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಮಲಗಿದ್ದ ಶಲೋನಿ ಅವರನ್ನು ಏಮ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ವಿಫಲವಾಗಿದೆ. ಆಸ್ಪತ್ರೆಗೆ ಬರುವ ಮೊದಲೇ ಶಲೋನಿ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Manipuri man beaten to death in Delhi

ಇತ್ತೀಚಿಗೆ ಮಾರುಕಟ್ಟೆಯೊಂದರಲ್ಲಿ ಶಲೋನಿ ಹಾಗೂ ಕೆಲವರು ಸ್ಥಳೀಯರೊಡನೆ ವಾಕ್ಸಮರ ನಡೆದಿತ್ತು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹಲ್ಲೆಕೋರರ ಗುರುತು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

ನಿಡೋ ತಾನಿಯಾ ದುರಂತದ ನಂತರ ಶಲೋನಿ ಪ್ರಕರಣ ದೆಹಲಿಯಲ್ಲಿರುವ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಈಶಾನ್ಯ ರಾಜ್ಯದ ಮೂಲದವ ಎಂಬ ಕಾರಣಕ್ಕೆ ನಿಡೋ ತಾನಿಯಾ ಹತ್ಯೆ ನಡೆದಿತ್ತು.

ಕಾಂಗ್ರೆಸ್ ಶಾಸಕ ನಿಡೋ ಪಲ್ಲವಿ ಅವರ ಪುತ್ರ ನಿಡೋ ತಾನಿಯಾ ಅವರನ್ನು ದೆಹಲಿಯಲ್ಲಿ ಹತ್ಯೆ ಮಾಡಿದ್ದು ವಿದ್ಯಾರ್ಥಿ ಸಂಘಟನೆಗಳನ್ನು ಕೆರಳಿಸಿತ್ತು. ವಿವಿಧ ಸಂಘಟನೆಗಳು, ಪಕ್ಷಾತೀತವಾಗಿ ರಾಜಕಾರಣಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಸಿಬಿಐ ತನಿಖೆಗೂ ಆದೇಶಲಾಯಿತು.ಅದರೆ, ಈಶಾನ್ಯ ರಾಜ್ಯದವರ ಆತಂಕ ಇನ್ನೂ ದೂರಾಗಿಲ್ಲ.

English summary
A 30-year-old Manipuri man was allegedly beaten to death by a group of men in Kotla Mubarakpur area of South Delhi, police said on Monday. The deceased Shaloni was returning from a friend’s place in Kotla Mubarakpur last night when a group of 5 to 6 men arrived at the spot by car and attacked him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X