ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಮೂರ್ತಿ ದತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ

|
Google Oneindia Kannada News

ನವದೆಹಲಿ, ಸೆ. 18 : ಸುಪ್ರೀಂಕೋರ್ಟ್ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಹೆಚ್.ಎಲ್ ದತ್ತು ಅವರ ವಿರುದ್ಧ ಲೈಂಗಿಕ ಕಿರುಕಳ ನೀಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ದೆಹಲಿ ಹೈಕೋರ್ಟ್‌ಗೆ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದೆ.

ವಕೀಲೆ ಹಾಗೂ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್‌ನ ಮಾಜಿ ಉದ್ಯೋಗಿ ನಿಶಾ ಪ್ರಿಯಾ ಭಾಟಿಯಾ (51) ಅವರು ಈ ದೂರು ನೀಡಿದ್ದು, ಭಾಟಿಯಾ ಅವರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠವು, ಇಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ತಮಗೆ ಲೈಂಗಿಕ ಕಿರುಕುಳ ನೀಡಿರುವ ದತ್ತು ಅವರನ್ನು ವರಿಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಸರ್ಕಾರದ ಶಿಫಾರಸನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. [ಕನ್ನಡಿಗ ದತ್ತು ಸುಪ್ರೀಂಕೋರ್ಟ್ ನೂತನ ಸಿಜೆ]

Justice Dattu

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾಯಮೂರ್ತಿ ಆರ್.ಎಸ್.ಇಂಡ್ಲಾ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದೆ. ಇದೇ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು, ದುರುದ್ದೇಶದಿಂದ ಕೂಡಿದ ಈ ಕೋರಿಕೆಯನ್ನು ಮಾನ್ಯ ಮಾಡಬಾರದು ಎಂಬ ಮನವಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಲಾಗಿದೆ. [ನ್ಯಾ.ದತ್ತು ಅವರ ಸಂಕ್ಷಿಪ್ತ ಪರಿಚಯ]

ದೂರಿನಲ್ಲೇನಿದೆ : ನಿಶಾ ಪ್ರಿಯಾ ಭಾಟಿಯಾ ಅವರು ನೀಡಿರುವ ದೂರಿನಲ್ಲಿ ನಾನು ಕಾನೂನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ದತ್ತು ಅವರು ನನ್ನ ಎಲ್ಲ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ನಲ್ಲಿ ವಾದಿಸುತ್ತಿದ್ದರು. ಆ ವೇಳೆ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂಬಂಧ ನಾನು ಪೊಲೀಸರು, ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ದೆಹಲಿಯ ಮಹಿಳಾ ಆಯೋಗಕ್ಕೂ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಸದ್ಯ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಆರ್.ಎಂ.ಲೋಧಾ ಅವರು, ಸೆ.27ರಂದು ನಿವೃತ್ತಿ ಹೊಂದಲಿದ್ದು, ಅವರ ಸ್ಥಾನವನ್ನು ಕರ್ನಾಟಕದ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು (ಎಚ್‌.ಎಲ್‌. ದತ್ತು) ಅವರು ಅಲಂಕರಿಸಲಿದ್ದಾರೆ. ಸೆ.28 ರಂದು 42ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ದತ್ತು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಇವರ ಅವಧಿ 2015ರ ಡಿಸೆಂಬರ್‌ 3ರ ವರೆಗೆ ಇರಲಿದೆ.

English summary
The Delhi High Court on Thursday hear a plea filed by an advocate and a former RAW woman officer against the appointment of Justice HL Dattu as the next Chief Justice of India (CJI), alleging sexual harassment by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X