ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚರಿಯ ಬೆಳವಣಿಗೆ: ದೆಹಲಿಯಲ್ಲಿ ಬಿಜೆಪಿ ಸರ್ಕಾರ?

By Mahesh
|
Google Oneindia Kannada News

ನವದೆಹಲಿ, ಜು.16: 'ಅಧಿಕಾರ ದಾಹಕ್ಕೆ ತುತ್ತಾಗಿರುವ ಬಿಜೆಪಿ, ಈಗ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ' ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಾಂಬ್ ಸಿಡಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ ಕಸರತ್ತು ಆರಂಭಿಸಿರುವ ಸುದ್ದಿ ಬಂದಿದೆ. ಬಿಜೆಪಿಯ ಈ ನಡೆ ಎಎಪಿಗೆ ಭಾರಿ ಹಿನ್ನಡೆ ಎನ್ನಬಹುದು.

ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷದ 27 ಶಾಸಕರೊಂದಿಗೆ ದೆಹಲಿ ರಾಜ್ಯಪಾಲ ಲೆಫ್ಟಿನೆಂಟ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿ, ಅಸೆಂಬ್ಲಿ ವಿಸರ್ಜನೆ ಮಾಡಿ ಹೊಸ ಚುನಾವಣೆ ನಡೆಸಲು ಮನವಿ ಸಲ್ಲಿಸಿದ್ದರು.

ಆದರೆ, ಕಾಂಗ್ರೆಸ್ ಶಾಸಕರಲ್ಲಿನ ಒಡಕನ್ನು ಲಾಭವಾಗಿ ಬಳಸಿಕೊಂಡು ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಸುದ್ದಿ ಬಂದಿದೆ. ಎಎಪಿ ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳಲು ದೆಹಲಿ ಬಿಜೆಪಿ ಯತ್ನಿಸುತ್ತಿದೆ ದಯವಿಟ್ಟು ಗಮನ ಹರಿಸಿ ಎಂದು ಮತ್ತೊಮ್ಮೆ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಈ ಬಗ್ಗೆ ಕೇಂದ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಅರವಿಂದ್ ಅವರು ಪತ್ರ ಕೂಡಾ ಬರೆದಿದ್ದರು.[ರಣೋತ್ಸಾಹದಲ್ಲಿ 'ಆಮ್ ಆದ್ಮಿ'ಗಳು]

Election Twist: Setback for AAP, Kejriwal; BJP likely to form govt in Delhi

ಕೇಜ್ರಿವಾಲ್ ಎಲ್ಲಿ?: ಕೇಜ್ರಿವಾಲ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ ಗಳು ದೆಹಲಿಯಲ್ಲಿ ಕಾಣಿಸಿಕೊಂಡಿದ್ದು ಈ ಮೂಲಕ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರ ಅಣಕಕ್ಕೆ ತುತ್ತಾಗಿದ್ದಾರೆ.

ದೆಹಲಿಯಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದು 49 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಕೇಜ್ರಿವಾಲ್ ತನ್ನ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ನಾಯಕತ್ವದ ವೈಫಲ್ಯದಿಂದ ಮುಖ್ಯಮಂತ್ರಿ ಸ್ಥಾನವನ್ನು ಪಟ್ಟ ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ದೆಹಲಿಯಲ್ಲಿ ಸದ್ಯ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.

ಮೂಲಗಳ ಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲೂ ಚುನಾವಣೆ ಎದುರಿಸುವ ಮನಸ್ಥಿತಿ ಇಲ್ಲ. ಬಿಜೆಪಿ ಈಗಾಗಲೇ ಜಗದೀಶ್ ಮುಖಿ ಅವರನ್ನು ಸಿಎಂ ಸ್ಥಾನದ ಅಭ್ಯರ್ಥಿಯಾಗಿ ಮುಂದಿಟ್ಟುಕೊಂಡು ಮಾತುಕತೆ, ಚರ್ಚೆ ಚಿಂತನ ಮಂಥನ ನಡೆಸುತ್ತಿದೆ.67 ಸದಸ್ಯರ ಅಸೆಂಬ್ಲಿಯಲ್ಲಿ ಬಿಜೆಪಿ 29 ಸದಸ್ಯರನ್ನು ಹೊಂದಿದ್ದು 36 ಮ್ಯಾಜಿಕ್ ನಂಬರ್ ಸಾಧಿಸಲು ಬಿಜೆಪಿ ಯತ್ನಿಸುತ್ತಿದೆ.

English summary
In a major setback for Aam Aadmi Party (AAP) and its convenor Arvind Kejriwal, sources informed that the Bharatiya Janata Party (BJP) is likely to form government in Delhi as the party is not willing to go for assembly election, yet again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X