ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನಾಯಕಿ ಮನೆಯಲ್ಲಿ ಶವ ಪತ್ತೆ!

By Mahesh
|
Google Oneindia Kannada News

ನವದೆಹಲಿ, ಆ.11: ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಅವರ ಮನೆಯಲ್ಲಿ 42 ವರ್ಷದ ವ್ಯಕ್ತಿಯ ಶವ ಸೋಮವಾರ ಪತ್ತೆಯಾಗಿದೆ. ಮೃತನನ್ನು ಸೆಲ್ಜಾ ಅವರ ಮನೆಕೆಲಸದಾಕೆಯ ಗಂಡ ಎಂದು ಗುರುತಿಸಲಾಗಿದೆ.

ನವದೆಹಲಿಯಲ್ಲಿರುವ ಕುಮಾರಿ ಸೆಲ್ಜಾ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಓರ್ವ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಸಂಜಯ್ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸೆಲ್ಜಾ ಅವರ ಮನೆಯ ಸೆಕ್ಯುರಿಟಿ ಗಾರ್ಡ್ ಮೊದಲ ಬಾರಿಗೆ ಈ ಶವವನ್ನು ನೋಡಿದ್ದಾನೆ. ನಂತರ ಪೊಲೀಸರಿಗೆ ಕರೆ ಮಾಡಿದ್ದಾನೆ.

Dead body found at Congress leader Kumari Selja's house in Delhi

ಸ್ಥಳಕ್ಕೆ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿದ್ದು, ಪರೀಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ದೆಹಲಿಯ ಸುನ್ಹೆರಿ ಬಾಗ್ ಪ್ರದೇಶದಲ್ಲಿರುವ ಮನೆಯಲ್ಲಿ ಶವ ಪತ್ತೆಯಾಗಿರುವುದನ್ನು ನೋಡಿದರೆ ಇದು ಅಸ್ವಾಭಾವಿಕ ಮರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ತನಿಖೆ ಮುಂದುವರೆದಿದೆ ಎಂದು ಹೆಚ್ಚುವರಿ ಆಯುಕ್ತ ಎಸ್ ಬಿಎಸ್ ತ್ಯಾಗಿ ಅವರು ಹೇಳಿದ್ದಾರೆ.

15ನೇ ಲೋಕಸಭಾ ಸದಸ್ಯೆಯಾಗಿದ್ದ ಕುಮಾರಿ ಸೆಲ್ಜಾ ಅವರು ಯುಪಿಎ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಕ್ಯಾಬಿನೆಟ್ ಸಚಿವೆಯಾಗಿದ್ದರು. ಮಾರ್ಚ್ 2011ರಲ್ಲಿ ಪ್ರವಾಸೋದ್ಯಮ ಸಚಿವೆಯಾಗಿದ್ದಾಗ ಅವರ ವಿರುದ್ಧ ಫೋರ್ಜರಿ, ಕ್ರಿಮಿನಲ್ ಉದ್ದೇಶ ಹಾಗೂ ದಾಖಲೆ ತಿರುಚಿದ ಆರೋಪ ಹೊರೆಸಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನಿಂದ ನೋಟಿಸ್ ಜಾರಿ ಮಾಡಲಾಗಿತ್ತು.

English summary
The body of a 42-year-old man was found at Congress leader Kumari Selja's house here Monday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X