ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಬ್ರಾಪೋಸ್ಟ್ ವಿಡಿಯೋ ಪ್ರಸಾರಕ್ಕೆ ತಡೆನೀಡಿ

|
Google Oneindia Kannada News

ನವದೆಹಲಿ, ಏ.4 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂಕಟ ಎದುರಾಗಿದೆ. ವ್ಯವಸ್ಥಿತ ಸಂಚು ನಡೆಸಿ ಮಸೀದಿ ಧ್ವಂಸಗೊಳಿಸಲಾಗಿದೆ ಎಂದು ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ವಿರುದ್ಧ ಕೋಬ್ರಾಪೋಸ್ಟ್ ಸಂಸ್ಥೆ ನಡೆಸಿದ ರಹಸ್ಯ ಕಾರ್ಯಾಚರಣೆಯ ಸಿಡಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಚುನಾವಣೆ ಸಮಯದಲ್ಲಿ ಶಾಂತಿ ಕದಡಲು ಈ ವಿಡಿಯೋ ಬಹಿರಂಗಗೊಳಿಸಲಾಗಿದೆ. ಇದರಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ ವಿಡಿಯೋ ಪ್ರಸಾರಕ್ಕೆ ತಡೆ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಮಾಧ್ಯಮಗಳಲ್ಲಿ ರಹಸ್ಯ ಕಾರ್ಯಾಚರಣೆ ವಿಡಿಯೋ ಪ್ರಸಾರಕ್ಕೆ ತಡೆ ನೀಡಬೇಕೆಂದು ಪಕ್ಷ ಮನವಿ ಮಾಡಿದೆ.

Babri Masjid

ಶುಕ್ರವಾರ ಕೋಬ್ರಾಪೋಸ್ಟ್ ರಹಸ್ಯ ಕಾರ್ಯಾಚರಣೆಯ ಸಿಡಿಯನ್ನು ಬಿಡುಗಡೆ ಮಾಡಿದ್ದು, ವ್ಯವಸ್ಥಿತ ಸಂಚು ರೂಪಿಸಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಗಿದ್ದು, ಧ್ವಂಸಕ್ಕೆ ಸಂಬಂಧಿಸಿದ ಕಾರ್ಯಾಚರಣೆಗೆ ಆರ್ ಎಸ್ಎಸ್ 'ಆಪರೇಷನ್ ಜನ್ಮಭೂಮಿ' ಎಂದು ಹೆಸರಿಟ್ಟಿತ್ತು ಎಂಬ ಮಾಹಿತಿ ರಹಸ್ಯ ಕಾರ್ಯಾಚರಣೆಯಿಂದ ತಿಳಿದುಬಂದಿದೆ.

ಬಾಬ್ರಿ ಮಸೀದಿ ಧ್ವಂಸಕ್ಕಾಗಿ ಎರಡು ತಿಂಗಳ ಮೊದಲಿನಿಂದಲೂ ಆರ್ ಎಸ್ಎಸ್ ನಾಯಕರಿಂದ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿತ್ತು ಎಂಬ ಸಂಗತಿ ರಹಸ್ಯ ಕಾರ್ಯಾಚರಣೆಯಿಂದ ಬಹಿರಂಗವಾಗಿದೆ. 23 ಜನರ ವಿರುದ್ಧ ನಡೆಸಿದ ರಹಸ್ಯ ಕಾರ್ಯಾಚರಣೆಯ ಸಿಡಿಯನ್ನು ಕೋಬ್ರಾ ಪೋಸ್ಟ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮಸೀದಿ ಧ್ವಂಸದ ವೇಳೆ ಪ್ರದಾನಿಯಾಗಿದ್ದ ಪಿ.ವಿ. ನರಸಿಂಹರಾವ್, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರಿಗೆ ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಮೊದಲೇ ಮಾಹಿತಿ ತಿಳಿದಿತ್ತು ಎಂಬ ಅಂಶವನ್ನು ರಹಸ್ಯ ಕಾರ್ಯಾಚರಣೆಯಿಂದ ಬಯಲು ಮಾಡಲಾಗಿದೆ.

ಬಿಜೆಪಿ ವಿರೋಧ : ಕೋಬ್ರಾಪೋಸ್ಟ್ ರಹಸ್ಯ ಕಾರ್ಯಾಚರಣೆ ಸಿಡಿಗೆ ಬಿಜೆಪಿ ತಿರುಗೇಟು ನೀಡಿದ್ದು, ಚುನಾವಣೆ ವೇಳೆ ಸಿಡಿ ಬಿಡುಗಡೆಯ ಹಿಂದಿನ ಉದ್ದೇಶವೇನು? ಇದು ಪ್ರಾಯೋಜಿತವಾದ ಕಾರ್ಯಾಚರಣೆ, ಚುನಾವಣೆ ವೇಳೆ ಶಾಂತಿ ಕದಡುವ ಯತ್ನ ಎಂದು ಆರೋಪಿಸಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ದೂರಿದೆ.

English summary
A Cobrapost operation on the Babri Masjid demolition revealed that it was planned and that top BJP leaders like L K Advani and the then UP chief minister Kalyan Singh, as well the former Congress PM, P V Narasimha Rao were aware of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X