ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಇಫ್ತಾರ್ 'ಕಿಕ್' ಖತಂಗೊಳಿಸಿದ ಸುಪ್ರೀಂ

By Mahesh
|
Google Oneindia Kannada News

ನವದೆಹಲಿ, ಜು.9: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬುಧವಾರ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ರಂಜಾನ್ ಮಾಸಾಚರಣೆ, ಇಫ್ತಾರ್ ಕೂಟಗಳ 'ಕಿಕ್' ನಲ್ಲಿದ್ದ ಸಲ್ಮಾನ್ ಖಾನ್ ಗೆ ತೀವ್ರ ಹಿನ್ನಡೆಯುಂಟಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಿರುದ್ಧದ ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಸಲ್ಮಾನ್ ಖಾನ್‌ಗೆ ನೋಟೀಸ್ ನೀಡಿದ್ದು, ನಾಲ್ಕು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸುಪ್ರೀಂಕೋರ್ಟ್ ನಿಂದ ಬಂದ ತೀರ್ಪಿನ ಅನ್ವಯ ಸಲ್ಮಾನ್ ಕಾನ್ ಆರೋಪಮುಕ್ತನಾಗಿದ್ದರು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ರಾಜಸ್ಥಾನ್ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆದು ನೋಟಿಸ್ ಜಾರಿಯಾಗಿದೆ. ಇದಕ್ಕೂ ಮುನ್ನ ಇದೇ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು.[ಸಲ್ಮಾನ್ ಖಾನಿಗೆ ಜೈಲಾದರೆ, ಲಾಭ ನಷ್ಟ ಯಾರಿಗೆ?]

ಸೆಷನ್ಸ್ ನ್ಯಾಯಾಧೀಶರು ಸಲ್ಮಾನ್ ಖಾನ್ ಸೇರಿದಂತೆ ನಾಲ್ವರನ್ನು ಆರೋಪದಿಂದ ಮುಕ್ತಗೊಳಿಸಿತ್ತು. ಹೈಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ರಾಜಸ್ಥಾನದ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೃಷ್ಣಮೃಗ ಹತ್ಯೆ ಪ್ರಕರಣ, ಗುದ್ದೋಡು ಪ್ರಕರಣ, ಕಿಕ್ ಚಿತ್ರದ ರಿಲೀಸ್ ಗೆ ಸಜ್ಜಾದ ಸಲ್ಮಾನ್ ಬಗ್ಗೆ ವಿವರ ಮುಂದೆ ಓದಿ...

1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣ

1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣ

1998ರಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ಸಲ್ಮಾನ್ ಖಾನ್ ಅವರು ಚಿತ್ರತಂಡದೊಂದಿಗೆ ಸೇರಿ ಜೋಧ್‌ಪುರದ ರಕ್ಷಿತಾರಣ್ಯದಲ್ಲಿ 2 ಕೃಷ್ಣ ಮೃಗಗಳನ್ನು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾದ ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51, 52 ಮತ್ತು ಐಪಿಸಿ ಸೆಕ್ಷನ್ 149ರ ಅಡಿಯಲ್ಲಿ ದೂರು ದಾಖಲಾಗಿದೆ.
ಶಾರುಖ್ ಜತೆ ಸಲ್ಮಾನ್ ಆಲಿಂಗನ

ಶಾರುಖ್ ಜತೆ ಸಲ್ಮಾನ್ ಆಲಿಂಗನ

ಕಳೆದ ವರ್ಷ ಮಹಾರಾಷ್ಟ್ರದ ರಾಜಕಾರಣಿ ಬಾಬಾ ಸಿದ್ದಿಕಿ ಬಾಂದ್ರಾದ ಹೋಟೆಲ್ ನಲ್ಲಿ ನೀಡಿದ್ದ ಇಫ್ತಾರ್ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನ ಪರಮ ವೈರಿಗಳು ಎಂದೇ ಕರೆಯಲ್ಪಡುವ ಶಾರುಖ್ ಹಾಗೂ ಸಲ್ಮಾನ್ ಎಲ್ಲರನ್ನು ಚಕಿತಗೊಳಿಸಿದ್ದರು. ಇಬ್ಬರು ಸಲಾಂ ವಾಲೇಕಂ ಎಂದು ವಿಶ್ ಮಾಡುತ್ತಾ ಆಲಿಂಗನ ಮಾಡಿಕೊಂಡಿದ್ದರು.

ಈ ವರ್ಷ ಕೂಡಾ ಈ ಸೀನ್ ರಿಪೀಟ್ ಆಗಿದೆಯಂತೆ. ಆದರೆ, ಕಳೆದ ವರ್ಷದಂತೆ ಹೆಚ್ಚು ಪ್ರಚಾರ ಪಡೆದುಕೊಳ್ಳಲಿಲ್ಲ. ಒಟ್ಟಾರೆ ಸಲ್ಮಾನ್ ಖಾನ್ ಮಾತ್ರ ರಂಜಾನ್ ರೋಜಾ, ಸಂಜೆ ಇಫ್ತಾರ್ ಪಾರ್ಟಿಗಳಲ್ಲಿ ಕಾಲ ಕಳೆಯುವ ಹೊತ್ತಿನಲ್ಲಿ ಸುಪ್ರೀಂಕೋರ್ತ್ ನೋಟಿಸ್ ತಲೆ ನೋವಾಗಲಿದೆ.

ಗುದ್ದೋಡು ಪ್ರಕರಣ ಜಾರಿಯಲ್ಲಿದೆ

ಗುದ್ದೋಡು ಪ್ರಕರಣ ಜಾರಿಯಲ್ಲಿದೆ

ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ಕ್ರೂಸರ್ ವಾಹನ ಸೆಪ್ಟೆಂಬರ್ 28, 2002ರಲ್ಲಿ ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಹರಿದಿತ್ತು. ಓರ್ವನ ಸಾವು, ನಾಲ್ವರು ಗಾಯಗೊಂಡಿದ್ದರು. ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮರ್ಡರ್ ಚಾರ್ಚ್ ಹಾಕಿ ಸಲ್ಮಾನ್ ವಿರುದ್ಧ ತೀರ್ಪು ಬಂದಿತ್ತು.

2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ಆರಂಭವಾಗಿದ್ದು, ಮುಂಬೈ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 304,337 ಸೇರಿದಂತೆ ಹಲವಾರು ಸೆಕ್ಷನ್ ಗಳಡಿಯಲ್ಲಿ ಆರೋಪ ಹೊರೆಸಲಾಗಿದೆ. ಆರೋಪಗಳು ಸಾಬೀತಾದರೆ 10 ವರ್ಷ ಜೈಲುಶಿಕ್ಷೆ ಗ್ಯಾರಂಟಿ.

ಕಿಕ್ ಚಿತ್ರಕ್ಕಾಗಿ ಸಲ್ಮಾನ್ ರೆಡಿ

ಕಿಕ್ ಚಿತ್ರಕ್ಕಾಗಿ ಸಲ್ಮಾನ್ ರೆಡಿ

ಈ ಹಿಂದೆ ಗುದ್ದೋಡು ಪ್ರಕರಣದಲ್ಲಿ ಕೋರ್ಟಿಗೆ ಖುದ್ದು ಹಾಜರಾಗಲು ವಿನಾಯತಿ ಪಡೆದಿದ್ದ ಸಲ್ಮಾನ್ 'ಕಿಕ್' ಚಿತ್ರದ ಚಿತ್ರೀಕರಣಕ್ಕಾಗಿ ಲಂಡನ್ ಗೆ ತೆರಳಿದ್ದರು. ಈಗ ಕಿಕ್ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಪ್ರಚಾರದಲ್ಲಿ ಸಲ್ಮಾನ್ ನಿರತರಾಗಿದ್ದಾರೆ. ಚಿತ್ರದ ಟ್ರೇಲರ್ ಭರ್ಜರಿ ಹಿಟ್ ಕೂಡಾ ಆಗಿದೆ.

English summary
In a major setback for Salman Khan during the holy month of Ramzan, Supreme Court on Wednesday, July 9 sent a legal notice to the Bollywood actor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X