ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರಣ್ ಬೇಡಿ: ದಿಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ?

By Srinath
|
Google Oneindia Kannada News

ನವದೆಹಲಿ, ಏಪ್ರಿಲ್ 16: ಪ್ರಸಕ್ತ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಪಕ್ಷವು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಹೆಸರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಚಲಾವಣೆಗೆ ತಂದಿದೆ.

ಕಳೆದ ವರ್ಷ ಡಿಸೆಂಬರಿನಲ್ಲಿ ದಿಲ್ಲಿ ವಿಧಾಸನಭೆಗೆ ಚುನಾವಣೆಗಳು ನಡೆದಾಗಲೇ ಮಾಜಿ ಐಪಿಎಸ್ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಬಿಂಬಿಸುವ ಯತ್ನಗಳು ನಡೆದವು. ಆದರೆ ಕಿರಣ್ ಬೇಡ ಅಂದರು.

ಆದರೆ ಅಧಿಕಾರಕ್ಕೇರಿದ ಮರುಘಳಿಗೆಯೇ ಗದ್ದುಗೆಯಿಂದ ಇಳಿದುಬಿಟ್ಟ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಬಾರಿ ಖಡಕ್ ಸವಾಲು ಒಡ್ಡಲು ಬಿಜೆಪಿ ನಿರ್ಧರಿಸಿದ್ದು ಕಿರಣ್ ಬೇಡಿ ಅವರ ಮನವೊಲಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಹೆಸರನ್ನು ಚಾಲ್ತಿಗೆ ತರಲು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

bjp-may-project-kiran-bedi-as-delhi-bjp-chief-minister-candidate
ಇದೇ ವೇಳೆ, ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿದ್ದ ಡಾ. ಹರ್ಷವರ್ಧನ ಅವರು ಈಗಾಗಲೇ ಚುನಾವಣೆಗಳು ನಡೆದಿರುವ ದೆಹಲಿಯ ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವುದರಿಂದ ಗೆದ್ದು ಬಂದರೆ ಅವರು ಮತ್ತೆ ದೆಹಲಿ ರಾಜಕೀಯಕ್ಕೆ ಮರಳುವುದು ಅನುಮಾನವಾಗಿದೆ. ಹಾಗಾಗಿ ಹರ್ಷವರ್ಧನ ಅವರಂತಹ ಖಡಕ್ ಅಭ್ಯರ್ಥಿಗೆ ಬದಲಿಗೆ ಅವರಷ್ಟೇ ಸಾಮರ್ಥ್ಯದ ಮತ್ತೊಬ್ಬರನ್ನು ಕಣಕ್ಕಿಳಿಸುವುದು ಬಿಜೆಪಿಯ ಆಶಯವಾಗಿದೆ.

ಮೇ ಅಂತ್ಯಕ್ಕೆ ಲೋಕಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ದಿಲ್ಲಿ ವಿಧಾನಸಭೆಗೆ ತ್ವರಿತವಾಗಿ ಚುನಾವಣೆ ನಡೆಯುವುದು ಅಗತ್ಯವಾಗಿದೆ. ಹಾಗಾಗಿ ಪಕ್ಷ ಸೇರಿಕೊಂಡು, ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನವನ್ನು ಒಪ್ಪಿಕೊಳ್ಳುವಂತೆ ಬಿಜೆಪಿಯು ಕಿರಣ್ ಬೇಡಿ ಅವರ ಮನವೊಲಿಸುತ್ತಿದೆ ಎಂದು ತಿಳಿದುಬಂದಿದೆ. ಗಮನಹಾರ್ಹವೆಂದರೆ ದೆಹಲಿಯ ಯಾವುದಾದರೊಂದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆಯೂ ಬಿಜೆಪಿ ಕಿರಣ್ ಬೇಡಿ ಅವರನ್ನು ಕೋರಿತ್ತು. ಆದರೆ ಬೇಡಿ ಬಿಜೆಪಿ ಬೇಡಿಕೆಯನ್ನು ತಿರಸ್ಕರಿಸಿದ್ದರು.

English summary
The BJP is likely to project former super cop Kiran Bedi as its chief ministerial candidate in Delhi. The BJP is toying with the idea of asking Bedi to come on board and join the party so that she can be projected as the face of Delhi, when the state Assembly polls are expected to be held after the Lok Sabha polls that ends in mid-May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X