ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಯಲ್ಲಿ ಎನ್ ಡಿಎಗೆ ಇನ್ನೂ ಬಹುಮತ ಸಿಕ್ಕಿಲ್ಲ!

By Srinath
|
Google Oneindia Kannada News

ನವದೆಹಲಿ, ಮೇ 19: ಹೌದು ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ ಡಿಎ 337 ಸ್ಥಾನಗಳೊಂದಿಗೆ ಅಭೂತಪೂರ್ವ ಯಶಸ್ಸು ಸಾಧಿಸಿದ್ದರೂ ಮೈತ್ರಿಕೂಟಕ್ಕೆ ಇನ್ನೂ ಬಹುಮತ ದೊರೆತಿಲ್ಲ. ಕೆಳಮನೆಯಲ್ಲಿ (ಲೋಕಸಭೆ) ಭರ್ಜರಿ ಬಹುಮತ ದಾಖಲಾಗಿದ್ದರೂ ಮೇಲ್ಮನೆಯಲ್ಲಿ (ರಾಜ್ಯಸಭೆ) NDAಗೆ ಬಹುಮತ ಇಲ್ಲವಾಗಿದೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟವು -NDA ರಾಜ್ಯಸಭೆ ಅತಂತ್ರ ಸ್ಥಿತಿಯಲ್ಲಿದೆ. ಪ್ರಸ್ತುತ ಎನ್ ಡಿಎ 62 ಸ್ಥಾನಗಳನ್ನು ಹೊಂದಿದೆ. ಆದರೆ ಬಹುಮತಕ್ಕೆ ಅಗತ್ಯವಿರುವುದು 121 ಸ್ಥಾನಗಳು. ಗರಿಷ್ಠ 245 ಸದಸ್ಯರನ್ನೊಳಗೊಂಡ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲದ ಲೆಕ್ಕಾಚಾರ ಹೀಗಿದೆ.

bjp-led-nda-lacks-majority-in-rajya-sabha-59-short-of-magic-figure-121

245 ಸದಸ್ಯರ ಪೈಕಿ 12 ಸದಸ್ಯರನ್ನು ರಾಷ್ಟ್ರಪತಿಯವರೇ ಆಯ್ಕೆ ಮಾಡುತ್ತಾರೆ. ಸಮಾಜದ ನಾನಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ/ ಸೇವೆ ಸಲ್ಲಿಸಿರುವಂತಹ ವ್ಯಕ್ತಿಗಳಿಗೆ ರಾಷ್ಟ್ರಪತಿಗಳು ಮಣೆ ಹಾಕುತ್ತಾರೆ. ಉಳಿದಂತೆ, ಇತರೆ ಸದಸ್ಯರನ್ನು ನಾನಾ ರಾಜ್ಯಗಳ ಶಾಸಕರು ಆರಿಸುತ್ತಾರೆ.

ಪ್ರತಿ ಸದಸ್ಯರ ಕಾಲವಧಿಯು 6 ವರ್ಷದ್ದಾಗಿರುತ್ತದೆ. ಪ್ರತಿ 2 ವರ್ಷಕ್ಕೊಮ್ಮೆ ಮೂರನೆಯ ಒಂದರಷ್ಟು ಸದಸ್ಯರು ರಾಜ್ಯಸಭೆಯಿಂದ ನಿರ್ಗಮಿಸುತ್ತಾರೆ. ಉಪ ರಾಷ್ಟ್ರಪತಿಯು ರಾಜ್ಯಸಭೆಯ ಸಭಾಪತಿ ಆಗಿರುತ್ತಾರೆ. ಸಭಾಪತಿಯ (ಉಪ ರಾಷ್ಟ್ರಪತಿ) ಅನುಪಸ್ಥಿತಿಯಲ್ಲಿ ಸಭಾಪತಿಯವರೇ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ.

ಇನ್ನು ಮೇಲ್ಮನೆ ಸದಸ್ಯರ ಸಂಬಳ ಸವಲತ್ತುಗಳು ಲೋಕಸಭೆಯ ಸದಸ್ಯರಿಗೆ ಸಮಾನವಾಗಿರುತ್ತದೆ. ರಾಜ್ಯಸಭೆಯು ನಿರಂತರ ಸಭೆ. ಲೋಕಸಭೆಯಂತೆ ಎಂದಿಗೂ ವಿಸರ್ಜನೆಯಾಗುವುದಿಲ್ಲ. (ರಾಜ್ಯಸಭೆಗೆ ಸದಸ್ಯರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?)

ಪ್ರಸ್ತುತ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ಇಂತಿದೆ:

NDA:
ಬಿಜೆಪಿ - 46
ಟಿಡಿಪಿ - 6
ಎಸ್ಎಡಿ - 3
ಶಿವಸೇನೆ - 3
ಎಲ್ ಜೆಪಿ - 1
ಎಂಎನ್ಎಫ್ - 1
ಎನ್ ಪಿಎಫ್ - 1
ಆರ್ ಪಿಎ (ಎ) - 1

UPA:
ಬಿಎಸ್ ಪಿ - 14
ಎಐಎಡಿಎಂಕೆ - 10
ತೃಣಮೂಲ ಕಾಂಗ್ರೆಸ್ - 12
ಬಿಜೆಡಿ - 6
ಬಿಪಿಎಫ್ - 1
ಸಿಪಿಐ - 2
ಸಿಪಿಎಂ - 9
ಡಿಎಂಕೆ - 4
ಐಎನ್ಎಲ್ ಡಿ - 2
ಎನ್ ಸಿ - 2
ಜೆಡಿಯು - 9
ಎಸ್ ಪಿ - 9
ಜೆಎಂಎಂ - 1
ಕೇರಳ ಕಾಂಗ್ರೆಸ್ (ಮಾ) - 1
ಎನ್ ಸಿಪಿ - 6
ಆರ್ ಜೆಡಿ - 1
ಎಸ್ ಡಿಎಫ್ - 1
ಟಿಆರ್ ಎಸ್ - 1
ಸ್ವತಂತ್ರರು 9
ನಾಮ ನಿರ್ದೇಶಿತರು - 10

English summary
Rajya Sabha is the Upper House of the Parliament of India and comprises 245 members at the most. BJP-led NDA lacks majority in Rajya Sabha 59 short of magic figure 121. The NDA has 62 seats in the Rajya Sabha at the moment while the majority mark is 121.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X