ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಕೋಟಿ ಹೆಲಿಕಾಪ್ಟರ್ ಹಗರಣ: ಡೀಲರ್ ಬಂಧನ

By Mahesh
|
Google Oneindia Kannada News

ನವದೆಹಲಿ, ಸೆ.24: ಸುಮಾರು 3,600 ಕೋಟಿ ರೂಪಾಯಿ ಮೊತ್ತದ ವಿವಿಐಪಿ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಡೀಲರ್ ಗೌತಮ್ ಖೇತಾನ್ ರನ್ನು ಬಂಧಿಸಿ ಜಾರಿ ನಿರ್ದೇಶನಾಲಯವು (ಇಡಿ) ತೀವ್ರ ವಿಚಾರಣೆಗೊಳಪಡಿಸಿದೆ.

ವಿವಿಐಪಿಗಳ ಪ್ರಯಾಣಕ್ಕಾಗಿ ವಾಯುಪಡೆಗೆ 12 ಹೆಲಿಕಾಪ್ಟರ್ ಖರೀದಿಗೆ ಸರ್ಕಾರ ಟೆಂಡರ್ ಕರೆಯಲಾಗಿತ್ತು. ಅಮೆರಿಕ, ಇಟಲಿ ಸೇರಿದಂತೆ ಪ್ರತಿಷ್ಠಿತ ರಾಷ್ಟ್ರಗಳ ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ಆದರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ಕೆಲ ರಾಜಕಾರಣಿಗಳಿಗೆ 360 ಕೋಟಿ ರೂಪಾಯಿ ಲಂಚ ನೀಡಿ ಟೆಂಡರ್ ಪಡೆದಿತ್ತು. ಈ ಲಂಚದ ಮೊತ್ತ ವರ್ಗಾವನೆ ಮೇಲೆ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ ಉದ್ಯಮಿ ಹಾಗೂ ವಕೀಲ ಖೇತಾನ್ ರನ್ನು ಬಂಧಿಸಿದೆ.

'ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (PMLA) ಅಡಿಯಲ್ಲಿ ಖೇತಾನ್ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ವಿವರವಾದ ತನಿಖೆಗೆ ಅವರನ್ನು ವಶಕ್ಕೆ ಪಡೆಯುವುದು ಅಗತ್ಯವಾಗಿತ್ತು ಎಂದು 'ಇಡಿ' ಹೇಳಿದೆ. [ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

ED arrests businessman Gautam Khaitan

ಖೇತಾನ್ ಅವರ ನಿವಾಸದಲ್ಲಿ ನಡೆಸಿದ ತಪಾಸಣೆಯ ವೇಳೆ ಸುಮಾರು ಒಂದು ಕೋಟಿ ರೂಪಾಯಿ ಮೊತ್ತದ ಚಿನ್ನಾಭರಣಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಿಐಪಿ ಹೆಲಿಕಾಪ್ಟರ್ ಖರೀದಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಖೇತಾನ್, ವಾಯುಪಡೆಯ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಮತ್ತು ಇತರ 19 ವ್ಯಕ್ತಿಗಳ ವಿರುದ್ಧ ಕಳೆದ ವರ್ಷ ಜುಲೈನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅದರ ನಂತರ ಇದೇ ಮೊದಲ ಬಾರಿಗೆ ಖೇತಾನ್ ಅವರನ್ನು ತನಿಖಾ ಸಂಸ್ಥೆ ಬಂಧಿಸಿದೆ.

ಫೆಬ್ರವರಿ 2013ರಂದು ಇಟಲಿ ಪೊಲೀಸರು ಆಗಸ್ಟಾ ಕಂಪನಿ ಸಿಇಒರನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಿದ್ದರು. ಇದೇ ಸಂದರ್ಭ ಭಾರತ ಸರ್ಕಾರ ಸಹ ಒಪ್ಪಂದದಂತೆ ಕಂಪನಿಗೆ ಪಾವತಿಸಬೇಕಾದ 3,600 ಕೋಟಿ ರೂಪಾಯಿಯನ್ನ ತಡೆಹಿಡಿದಿತ್ತು. ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ವಿರುದ್ಧವೂ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು. [ವಾಯುಸೇನೆ ಮಾಜಿ ಮುಖ್ಯಸ್ಥ ತ್ಯಾಗಿ ಮೇಲೆ ಎಫ್ ಐಆರ್]

English summary
The Enforcement Directorate, ED, has arrested businessman Gautam Khaitan in money laundering probe in VVIP choppers deal case. Businessmen, Advocate Khaitan is the first arrest carried out by the ED in the Rs 3,600-crore Agusta Westland chopper deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X