ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಸ್ವೀಕರಿಸಿದ ಆಮ್ ಆದ್ಮಿ ಅರವಿಂದ್ ಕೇಜ್ರಿವಾಲಾ

By Srinath
|
Google Oneindia Kannada News

ನವದೆಹಲಿ, ಡಿ. 28- ರಾಷ್ಟ್ರದ ರಾಜಧಾನಿ ದಿಲ್ಲಿಗೆ ಇಂದು ಐತಿಹಾಸಿಕ ದಿನ. ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲಾ ಅವರು ದೆಹಲಿಯ ಏಳನೆಯ ಮುಖ್ಯಮಂತ್ರಿಯಾಗಿ ಇದೀಗತಾನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತನ್ಮೂಲಕ, 70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ 28 ಶಾಸಕರನ್ನು ಹೊಂದಿರುವ ಆಮ್‌ ಆದ್ಮಿ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ.

ವಿಶೇಷತೆಗಳೇನು?: ಬಾಹ್ಯ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕ/ ಮುಖಂಡರೂ ಸಮಾರಂಭದಲ್ಲಿ ಹಾಜರಿರಲಿಲ್ಲ. ಇನ್ನು ಬಿಜೆಪಿ ಮಂದಿಯೂ ಸಮಾರಂಭದಿಂದ ದೂರವುಳಿದರು. ಆದರೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಡಾ. ಹರ್ಷವರ್ಧನ ಅವರು ಉಪಸ್ಥಿತರಿದ್ದು, ಕೇಜ್ರಿವಾಲಾಗೆ ಶುಭ ಕೋರಿದರು.

AAP chief Arvind Kejriwal takes oath as New Delhi new Chief Minister
ಇನ್ನು ಅಣ್ಣಾ ಹಜಾರೆ, ಸಂತೋಷ್ ಹೆಗಡೆ, ಪ್ರಶಾಂತ್ ಭೂಷಣ್ ಸಹ ಸಮಾರಂಭದಿಂದ ದೂರವಿದ್ದರು. ಆದರೆ ಅಣ್ಣಾ ಹಜಾರೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅರವಿಂದ್ ತಂಡಕ್ಕೆ ತುಂಬು ಹೃದಯದ ಶುಭ ಕೋರಿದರು.

ದಿಲ್ಲಿ ಚಳಿಯನ್ನು ದೂರ ಮಾಡಲು ಜನಸಾಮಾನ್ಯನಂತೆ ಸಾದಾಸೀದಾ ಸ್ವೆಟರ್ ಧರಿಸಿ ಬಂದಿದ್ದ ಅರವಿಂದ್, ಈಶ್ವರನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಹಿಂದಿನ ಸುದ್ದಿ: ಇವರ ಜತೆಗೆ, ಒಟ್ಟು 6 ಮಂದಿ ಶಾಸಕರೂ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ರಾಮಲೀಲಾ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭವು 15 ನಿಮಿಷಗಳಲ್ಲಿ ನೆರವೇರಿತು. ತನ್ಮೂಲಕ ದೆಹಲಿಯ ಭವ್ಯ ಇತಿಹಾಸಕ್ಕೆ ಮತ್ತೊಂದು ಪುಟ ದಾಖಲಾಯಿತು. ಅದು ಸುಮಾರು 7 ದಶಕಗಳ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೂ ನವೀನ ಮುನ್ನುಡಿ ಬರೆಯಿತು.

ಸರಿಯಾಗಿ 12 ಗಂಟೆಗೆ ಅಪಾರ ಬೆಂಬಲಿಗರ ಹರ್ಷೋದ್ಘಾರದ ಮಧ್ಯೆ 45 ವರ್ಷದ ಅರವಿಂದ್ ಕೇಜ್ರಿವಾಲಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು. ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಅಧಿಕಾರದ ಗೌಪ್ಯತೆಯನ್ನು ಬೋಧಿಸಿದರು.

ಅರವಿಂದ್ ಕೇಜ್ರಿವಾಲ್ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಕೇಜ್ರಿವಾಲ್ ಅವರೊಂದಿಗೆ ಸೋಮನಾಥ್ ಭಾರತಿ, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ರಾಖಿ ಬಿರ್ಲಾ, ಗಿರೀಶ್ ಸೋನಿ ಹಾಗೂ ಸೌರಭ್ ಭಾರದ್ವಾಜ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಧಿಕಾರ ಸ್ವೀಕಾರದ ಬಳಿಕ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ಅವರು ಇದೇ ವೇದಿಕೆಯಿಂದ ಸಾರ್ವಜನಿಕ ಭಾಷಣ ಮಾಡುತ್ತಿದ್ದಾರೆ.

English summary
AAP chief Arvind Kejriwal takes oath as New Delhi new Chief Minister at 12 PM on Dec 29th ram leela maidan. Arvind Kejriwal and along with 6 other AAP MLAs took oath as ministers. Lt-Governor Najeeb Jung administers oath of office and secrecy to AAP MLA Arvind Kejriwal as Delhi Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X