ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಕೇಳುವುದು ತಪ್ಪು ಅಂದ್ರು ಕೃಷ್ಣ

|
Google Oneindia Kannada News

ಮೈಸೂರು, ಸೆ. 10 : ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕೇಳುವುದು ಸರಿಯಲ್ಲ. ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಗಳಿಸಿದ್ದೇವೆ. ನಮಗಾಗಿ ನಿಯಮ ಬದಲಾವಣೆ ಮಾಡುವಂತೆ ಕೇಳುವುದು ತಪ್ಪು ಎಂದು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 99ನೇ ಜನ್ಮದಿನೋತ್ಸವದ ಅಂಗವಾಗಿ ಜೆ.ಎಸ್.ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಎಸ್.ಎಂ.ಕೃಷ್ಣ ಅವರು, ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕೇಳುವುದು ಸರಿಯಲ್ಲ, ಪ್ರಜಾಪ್ರಭುತ್ವದ ನಿಯಮವನ್ನು ನಾವು ಒಪ್ಪಿಕೊಳ್ಳಬೇಕು ಎಂದರು.

sm krishna

ನಿಯಮದ ಪ್ರಕಾರ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಪಡೆಯಲು ಸಂಸತ್ ನಲ್ಲಿ ಶೇ.10ರಷ್ಟು ಸ್ಥಾನ ಹೊಂದಿರಬೇಕು, ಆದರೆ ಕಾಂಗ್ರೆಸ್ ದೊರೆತಿರುವುದು ಕೇವಲ 44 ಸ್ಥಾನ ಮಾತ್ರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನಕ್ಕೆ ಬೇಡಿಕೆ ಇಡುತ್ತಿರುವುದು ಸರಿಯಲ್ಲ ಎಂದು ಕೃಷ್ಣ ಅವರು ಅಭಿಪ್ರಾಯಪಟ್ಟರು. [ಪ್ರತಿಪಕ್ಷ ಸ್ಥಾನ : ಕಾಂಗ್ರೆಸ್ ಮನವಿ ತಿರಸ್ಕಾರ]

ಜಯಲಲಿತಾ ಕಾಣ್ತಾರೆ : ಭಾಷಣದಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ನೆನಪು ಮಾಡಿಕೊಂಡ ಕೃಷ್ಣ ಅವರು ರಾಜ್ಯದಲ್ಲಿ ಆಗ ಸಾಕಷ್ಟು ಸಮಸ್ಯೆ ಇತ್ತು. ಕಾವೇರಿ ವಿಚಾರವನ್ನು ನೆನಪು ಮಾಡಿಕೊಂಡರೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಣ್ಣಮುಂದೆ ಬರುತ್ತಾರೆ ಎಂದು ಕೃಷ್ಣ ಹೇಳಿದರು.

ಲೋಕಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಪ್ರತಿಪಕ್ಷ ಸ್ಥಾನ ನೀಡಬೇಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್ ಮಾಡಿದ್ದ ಮನವಿಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಕೆಲವು ದಿನಗಳ ಹಿಂದೆ ತಿರಸ್ಕರಿಸಿದ್ದರು. ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನ ನೀಡಲಾಗದು. ನನ್ನ ನಿರ್ಧಾರ ಹಿಂದಿನ ನಿದರ್ಶನಗಳನ್ನು ಆಧರಿಸಿದೆ ಮತ್ತು ಅಟಾರ್ನಿ ಜನರಲ್ ಮುಕುಲ್ ರೋಹತ ಅವರ ಸಲಹೆಯನ್ನು ಈ ಬಗ್ಗೆ ಪಡೆಯಲಾಗಿದೆ ಎಂದು ಹೇಳಿದ್ದರು. [ಖರ್ಗೆಗಿಲ್ಲ ವಿಪಕ್ಷ ನಾಯಕ ಭಾಗ್ಯ]

English summary
Former External Affairs minister S.M.Krishna said, Why Congress demanding for opposition post in Lok Sabha. We have get only 44 seats in Lok Sabha 20014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X