ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಆನೆಗಳಿಗೆ ಭಾರ ಹೊರುವ ತರಬೇತಿ

|
Google Oneindia Kannada News

ಮೈಸೂರು, ಆ.31 : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಅಂಬಾರಿ ಹೊರುವ ತರಬೇತಿ ನೀಡುವ ಪ್ರಕ್ರಿಯೆಯನ್ನು ಭಾನುವಾರದಿಂದ ಆರಂಭಿಸಲಾಗಿದೆ. ಮರಳಿನ ಮೂಟೆ ಹೊರಿಸಿ ಅಂಬಾರಿ ಹೊರುವ ಅರ್ಜುನಗಿಗೆ ಇಂದು ತರಬೇತಿ ನೀಡಲಾಯಿತು.

ಭಾನುವಾರ ಮೈಸೂರು ಗಜಪಡೆಯ ದಂಡನಾಯಕ ಹಾಗೂ ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ 300 ಕೆ.ಜಿ.ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು. ಇಂದಿನಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳಿಗೆ ನಿತ್ಯ ವಾಕಿಂಗ್ ಜೊತೆಗೆ ಮರಳು ಮೂಟೆ ಕಟ್ಟಿ ತಾಲೀಮು ಮಾಡಿಸಲಾಗುತ್ತದೆ.

Mysore Dasara

ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರಲು ಆನೆಗಳಿಗೆ ತರಬೇತಿ ನೀಡಲಾಗುತ್ತದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಅರ್ಜುನನನ್ನು ಸಶಕ್ತಗೊಳಿಸಲು ಅನುವಾಗುವಂತೆ ಪ್ರತಿದಿನ ತಾಲೀಮು ನಡೆಸಲಾಗುತ್ತದೆ. [ಜಂಬೂ ಸವಾರಿ ಆನೆಗಳ ಬಯೋಡೇಟಾ]

ಅರ್ಜುನ, ಅಭಿಮನ್ಯು, ಬಲರಾಮ ಆನೆಗಳ ಈ ಭಾರ ಹೊರುವ ತರಬೇತಿ ನೀಡಲಾಗುತ್ತದೆ. ಮೊದಲ ದಿನ 300 ಕೆ.ಜಿ.ಮರಳು ಮೂಟೆ ಕಟ್ಟಿದರೆ ದಿನದಿಂದ ದಿನಕ್ಕೆ ಮರಳಿನ ಪ್ರಮಾಣ ಹೆಚ್ಚಿಸುತ್ತಾ, 750 ಕೆಜಿ ಮರಳು ಹೊರಲು ತರಬೇತಿ ನೀಡಲಾಗುತ್ತದೆ. ದಸರಾ ಉತ್ಸವ ಸಮೀಪಿಸುತ್ತಿದ್ದಂತೆ ಚಿನ್ನದ ಅಂಬಾರಿಯಷ್ಟೇ ತೂಕವಿರುವ ಮರದ ಅಂಬಾರಿಯನ್ನು ಹೊರಿಸಿ ಆನೆಗಳನ್ನು ಸಜ್ಜುಗೊಳಿಸಲಾಗುತ್ತದೆ.

passport

ಪಾಸ್‌ಪೋರ್ಟ್ ಬಿಡುಗಡೆ : ದಸರಾ ಮಹೋ­ತ್ಸವ­ದಲ್ಲಿ ಪಾಲ್ಗೊಳ್ಳುವ ಪ್ರವಾಸಿ­ಗರು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ 'ಮೈಸೂರು ಟೂರಿಸ್ಟ್‌ ಪಾಸ್‌­ಪೋರ್ಟ್' ಲಭ್ಯವಾಗಲಿದೆ. ಪಾಸ್‌ಪೋರ್ಟ್‌ ಅನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ಭಾನುವಾರ ಬಿಡುಗಡೆ ಮಾಡಿದರು . ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪುಷ್ಪಾವತಿ ಅಮರನಾಥ್ , ಉಪಾಧ್ಯಕ್ಷ ಮಾದಪ್ಪ , ಶಾಸಕ ರಾದ ಜಿ.ಟಿ. ದೇವೇಗೌಡ, ಜಿಲ್ಲಾಧಿಕಾರಿ ಸಿ. ಶಿಖಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಏನಿದು ಪಾಸ್ ಪೋರ್ಟ್ ]

English summary
Weight training begins for Dasara elephants at Mysore on Sunday. Elephant Arjuna carried 300 k.g.sand on first day of training.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X