ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಚ್‌ಸಿಗಳು ರಾತ್ರಿ 8.30ರವರೆಗೆ ತೆರೆದಿರುತ್ತೆ

|
Google Oneindia Kannada News

ಮೈಸೂರು, ಆ.30 : ಬಡವರು ಮತ್ತು ಕಾರ್ಮಿಕರಿಗೆ ಸಹಾಯಕವಾಗುವಂತೆ ಮೈಸೂರು ನಗರ ವ್ಯಾಪ್ತಿಯಲ್ಲಿರುವ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾತ್ರಿ 8.30ರವರೆಗೆ ತೆರೆದಿರಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ ಎರಡನೇ ವಾರದಿಂದ ಈ ಆದೇಶ ಜಾರಿಗೆ ಬರಲಿದೆ.

ಗಾರ್ಮೆಂಟ್ಸ್, ಬೀಡಿ, ಕಟ್ಟಡ ಕಾರ್ಮಿಕರಿಗೆ ಸಹಕಾರಿಯಾಗಲೆಂದು ಆರೋಗ್ಯ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ. ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 8.30ರವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇನ್ನುಮುಂದೆ ಕಾರ್ಯನಿರ್ವಹಿಸಲಿವೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳಿಗೆ ಈ ನಿಯಮ ಅನ್ವಯವಾಗುತ್ತದೆ.

PHC

ಮೈಸೂರು ನಗರದ ವ್ಯಾಪ್ತಿಯಲ್ಲಿ ಕೃಷ್ಣರಾಜಪುರಂ, ಚಾಮರಾಜ, ಡಬಲ್ ರೋಡ್, ಅಗ್ರಹಾರ ಮತ್ತು ಕ್ಯಾತಮಾರನಹಳ್ಳಿ ಸೇರಿ ಒಟ್ಟು ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ಇಷ್ಟು ದಿನ ವೈದ್ಯರು ಸಂಜೆ 4.30ರವೆಗೆ ಮಾತ್ರ ಕೆಲಸ ಮಾಡುತ್ತಿದ್ದರು. [ಕೇಂದ್ರ ಸಚಿವರ ಪ್ರಕಾರ ಮಹಿಳೆ ದೇಹ ದೇವಾಲಯವಂತೆ!?]

ಸಂಜೆ 6 ಗಂಟೆಯ ನಂತರ ಕೆಲಸದಿಂದ ಮರಳುವ ಗಾರ್ಮೆಂಟ್ಸ್, ಬೀಡಿ, ಕಟ್ಟಡ ಕಾರ್ಮಿಕರಿಗೆ ಇದರಿಂದ ಸರಿಯಾದ ಆರೋಗ್ಯ ಸೇವೆ ಲಭ್ಯವಾಗುತ್ತಿರಲಿಲ್ಲ. ಆದ್ದರಿಂದ ಅವರು ಖಾಸಗಿ ಕ್ಲಿನಿಕ್‌ಗಳಿಗೆ ಹೋಗಿ ಹೆಚ್ಚಿನ ಹಣ ಪಾವತಿ ಮಾಡುವುದು ಅನಿವಾರ್ಯವಾಗಿತ್ತು. [ಹೃದಯದ ಆರೋಗ್ಯಕ್ಕೆ ಅಕ್ಕಪಕ್ಕದವರನ್ನು ಪ್ರೀತಿಸಿ]

ಆದ್ದರಿಂದ ಕಾರ್ಮಿಕರಿಗೆ ಸಹಾಯವಾಗಲಿ ಎಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8.30ರವೆರೆಗೆ ಆರೋಗ್ಯ ಕೇಂದ್ರಗಳನ್ನು ತೆರೆದಿರಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಚ್.ಟಿ.ಪುಟ್ಟಸ್ವಾಮಿ ಹೇಳಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಇಲಾಖೆ ಈಗಾಗಲೇ ಪೂರ್ಣಗೊಳಿಸಿದ್ದು, ಸೇವೆ ವಿಸ್ತರಿಸಲು ಸಜ್ಜಾಗಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿ ದೊರೆಯುವ ಅನುದಾನದಿಂದ ಈ ಸೇವೆಯನ್ನು ವಿಸ್ತರಿಸಲು ಇಲಾಖೆ ನಿರ್ಧರಿಸಿದೆ. ಸೇವೆ ವಿಸ್ತರಣೆ ಮಾಡಲು ಅಗತ್ಯ ಸಿಬ್ಬಂದಿಗಳನ್ನು ಇಲಾಖೆ ನಿಯೋಜನೆ ಮಾಡುತ್ತಿದೆ. ಐದು ಕೇಂದ್ರಗಳಿಗೆ ವೈದ್ಯರು, ಸಿಬ್ಬಂದಿಯನ್ನು ನಿಯೋಜನೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

English summary
In order to provide healthcare facilities to workers, including those working in the garment, construction and beedi industries, the health authorities of Mysore decided to keep urban primary health centers open till 8.30 p.m. every day except Sundays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X