ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್ ಎಸ್ ಹಿನ್ನೀರಲ್ಲಿ ಈಜಲಿಳಿದ ಟೆಕ್ಕಿ ಸಾವು

|
Google Oneindia Kannada News

ಮೈಸೂರು, ಸೆ.14 : ಶ್ರೀರಂಗಪಟ್ಟಣ ಸಮೀಪದ ಕೆಆರ್‌ ಎಸ್‌ ಜಲಾಶಯದ ಹಿನ್ನಿರಿನಲ್ಲಿ ಈಜಲು ಇಳಿದಿದ್ದ ಟಿಕ್ಕಿ ಭಾನುವಾರ ನೀರು ಪಾಲಾಗಿದ್ದಾರೆ. ಸುಧನ್ವ (29) ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೈಸೂರಿನ ಇನ್ಫೋಸಿಸ್‌ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಬಂದಿದ್ದ ಟೆಕ್ಕಿ ಸುಧನ್ವ ವಾರಾಂತ್ಯದ ಹಿನ್ನೆಲೆಯಲ್ಲಿ ವೇಣುಗೋಪಾಲ ಸ್ವಾಮಿ ದೇವಾಲಯ ಸಮೀಪದ ಕೆಆರ್‌ ಎಸ್‌ ಹಿನ್ನೀರಿಗೆ ಈಜಲು ಇಳಿದಿದ್ದರು. ಈ ವೇಳೆ ಆಯತಪ್ಪಿ ಮುಳುಗಿದ್ದಾರೆ.(ಕಾಲು ಕಳೆದುಕೊಂಡರೂ ಆಂಬುಲೆನ್ಸ್ ಗೆ ಕರೆ ಮಾಡಿದ!)

krs

ಈ ಬಗ್ಗೆ ಕೆಆರ್‌ ಎಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನು ಶವ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಹತ್ತಿರದ ಬಲ್‌ಮುರಿ ಜಲಪಾತಕ್ಕೆ ತೆರಳಿದ್ದ ಬೆಂಗಳೂರು ಶಿವಾಜಿನಗರ ಯುವಕ ಸಾವನ್ನಪ್ಪಿದ್ದಾರೆ. 6 ಜನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಯುವಕನ ಶವ ಪತ್ತೆಯಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಸಹ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.

English summary
A trainee techie dead in KRS back water on Sunday evening. Sudhanvya (29) has try to swim in KRS back water near Venugopalaswami temple. Another incident a youth who is the native of Shivajinagr, Bangalore lost his breath in Balamuri Falls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X