ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಸೆಪ್ಟೆಂಬರ್ ನಿಂದ ಸ್ಪೈಸ್ ಜೆಟ್ ಹಾರಾಟವಿಲ್ಲ

|
Google Oneindia Kannada News

ಮೈಸೂರು, ಜು. 30 : ದಸರಾ ಸಿದ್ಧತೆಯಲ್ಲಿ ತೊಡಗಿರುವ ಮೈಸೂರಿನ ಜನರಿಗೆ ಕಹಿ ಸುದ್ದಿ ಕಾದಿದೆ. ಬೆಂಗಳೂರು-ಮೈಸೂರು ನಡುವೆ ವಿಮಾನಯಾನ ಸೇವೆ ನೀಡುತ್ತಿರುವ ಸ್ಪೈಸ್ ಜೆಟ್ ಸೆ.1ರಿಂದ ತನ್ನ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಬೆಂಗಳೂರು-ಮೈಸೂರು ನಡುವಿನ ಸ್ಪೈಸ್ ಜೆಟ್ ಸೇವೆ ಸ್ಥಗಿತಗೊಳಿಸುವ ಬಗ್ಗೆ ವಿಮಾನ ನಿಲ್ದಾಣದ ನಿರ್ದೇಶಕ ಸಿ.ಮಂಜುನಾಥ್ ಅವರಿಗೆ ಸಂದೇಶ ರವಾನೆಯಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಮಾತ್ರ ಅವರ ಕೈ ಸೇರಬೇಕಾಗಿದೆ.

Spice Jet

ಸೆ.1ರಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಲು ಸ್ಪೈಸ್ ಜೆಟ್ ನಿರ್ಧರಿಸಿದೆ. ಸೆ.25ರಿಂದ ಅ.4ರ ತನಕ ಈ ಬಾರಿಯ ದಸರಾ ಉತ್ಸವ ನಡೆಯಲಿದೆ. ವಿಮಾನಯಾನ ಸೇವೆ ಸ್ಥಗಿತಗೊಂಡರೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ತೊಂದರೆ ಉಂಟಾಗಲಿದೆ. [ಬೆಂ-ಮೈ ವಿಮಾನ ಸಂಚಾರ ಆರಂಭ]

2010ರಲ್ಲಿ ಮೈಸೂರಿನ ಮಂಡಕಹಳ್ಳಿಯಲ್ಲಿರುವ ವಿಮಾನ ನಿಲ್ದಾಣವನ್ನು 80 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ಹಲವು ವರ್ಷಗಳ ಕಾಲ ಅಲ್ಲಿ ವಿಮಾನ ಹಾರಾಟವಿರಲಿಲ್ಲ. ನಂತರ ಕಿಂಗ್ ಫಿಷರ್ ವಿಮಾನಯಾನ ಸೇವೆ ಆರಂಭಿಸಿದರೂ ನಂತರ ಅದು ರದ್ದಾಗಿತ್ತು. [ಮೈಸೂರು ವಿಮಾನ ನಿಲ್ದಾಣದ ಕಥೆ]

2014ರ ಫೆಬ್ರವರಿಯಲ್ಲಿ ಬೆಂಗಳೂರು-ಮೈಸೂರು ನಡುವೆ ಸ್ಪೈಸ್ ಜೆಟ್ ವಿಮಾನಯಾನ ಸೇವೆ ಆರಂಭಿಸಿತ್ತು. ಮಂಗಳವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲಿ ಬೆಂಗಳೂರು ಮೂಲಕ ಮೈಸೂರು ವಿಮಾನಗಳು ಸಂಚರಿಸುತ್ತಿದ್ದವು. ಸದ್ಯ ಅದು ಸಹ ಸ್ಥಗಿತಗೊಳ್ಳಲಿದೆ.

ವಿಮಾನ ನಿಲ್ದಾಣ ಅಭಿವೃದ್ಧಿ : ಮೈಸೂರು ವಿಮಾನ ನಿಲ್ದಾಣದ ಹಾಲಿ ರನ್ ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿದೆ. ಆದರೆ, ಸುರಕ್ಷತೆ ಬಗ್ಗೆ ಅಪಸ್ವರ ಇದ್ದೇ ಇದೆ. ಎರಡನೇ ಹಂತದಲ್ಲಿ ಈ ರನ್‌ವೇಯನ್ನು 2.4ಕಿ.ಮೀ.ವಿಸ್ತರಿಸಲು ನಿರ್ಧರಿಸಬೇಕು ಎಂಬ ಆಲೋಚನೆ ಸರ್ಕಾರದ ಮುಂದಿದೆ.

English summary
As preparations for Nada Habba’ Dasara are on, the news of Spice Jet flight services from Mysore being permanently suspended from September 1 comes as a dampener.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X